ರವಿಚಂದ್ರನ್ ಅಭಿನಯದ ಅಥವಾ ಅವರ ನಿರ್ದೇಶನದ ಕೆಲವು ಸಿನಿಮಾಗಳು ಜನರ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿದಿವೆ. ಅಂತಹ ಸಿನಿಮಾಗಳಲ್ಲಿ ಹಳ್ಳಿ ಮೇಷ್ಟ್ರು ಕೂಡ ಒಂದು. ಈ ಸಿನಿಮಾ ಇಂದಿಗೂ ಎವರ್ ಗ್ರೀನ್ ಆಗಿದ್ದು, ಅದರಲ್ಲಿನ ಹಾಡುಗಳೂ ಕೂಡ ಸೂಪರ್ ಹಿಟ್ ಆಗಿವೆ.

ಕನ್ನಡಿಗರು, ಕ್ರೇಜಿಸ್ಟಾರ್ ಅಭಿಮಾನಿಗಳು ಈಗಲೂ ‘ಹಳ್ಳಿ ಮೇಷ್ಟ್ರೇ ಹಳ್ಳಿಮೇಷ್ಟ್ರೆ ಪಾಠ ಮಾಡಿ ಬನ್ನಿ’ ಹಾಡನ್ನು ಗುನುಗುಣಿಸುತ್ತಿರುತ್ತಾರೆ. ಒಂದು ಉತ್ತಮ ಕಥಾ ವಸ್ತುವನ್ನು ಇಟ್ಟುಕೊಂಡು ರವಿಚಂದ್ರನ್ ಅವರು ಹಳ್ಳಿ ಮೇಷ್ಟ್ರು ಸಿನಿಮಾ ವನ್ನು ಮಾಡಿದ್ದರು. ಇನ್ನು ಹಳ್ಳಿ ಮೇಷ್ಟ್ರು ಸಿನಿಮಾದಲ್ಲಿ ಪುಟಾಣಿ ಮೂರು ಮಕ್ಕಳು ಹೆಚ್ಚು ಗಮನ ಸೆಳೆದಿದ್ದಾರೆ ಅವರಲ್ಲಿ ಮುಖ್ಯವಾಗಿ ಕೊಳ್ಳಾಗಿರುವ ಕಪ್ಪೆರಾಯ ಸಾಕಷ್ಟು ಫೇಮಸ್ ಆಗಿದ್ರು ಅವರ ಬಗ್ಗೆ ಇನ್ನಷ್ಟು ಮಾಹಿತಿಗಳನ್ನು ತಿಳಿದುಕೊಳ್ಳೋಣ ಬನ್ನಿ.

 

 

ಹಳ್ಳಿ ಮೇಷ್ಟ್ರು ಸಿನಿಮಾದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಒಬ್ಬ ಮೇಷ್ಟ್ರಾಗಿ ಅಭಿನಯಿಸಿದ್ದಾರೆ. ಇನ್ನು ಬಾಲಿವುಡ್ ತಾರೆ ಬಿಂದ್ಯಾ ಸಿನಿಮಾದ ನಾಯಕಿ ಆಗಿದ್ರು. ಇನ್ನು ಈ ಸಿನಿಮಾದಲ್ಲಿ ನಾಯಕಿಯ ಜೊತೆಗೆ ಇರುವ ಮಕ್ಕಳ ಗ್ಯಾಂಗ್ ನಲ್ಲಿ ಕಪ್ಪೆರಾಯ ಪಾತ್ರ ಕೂಡ ಒಂದು ಇಂದಿಗೂ ಈ ಸಿನಿಮಾ ನೋಡಿದರೆ ನಗು ಬರುವುದಕ್ಕೆ ಮುಖ್ಯ ಕಾರಣ ಕಪ್ಪೆರಾಯ ಕ್ಯಾರೆಕ್ಟರ್. ನಾಯಕಿಯ ಹಿಂದೆ ಪರಿಮಳ ಪರಿಮಳ ಎಂದು ಕರೆಯುತ್ತಾ, ಶಾಲೆಯಲ್ಲಿ ಮೇಷ್ಟ್ರನ್ನೂ ಗೋಳು ಹೊಯ್ದುಕೊಳ್ಳುತ್ತಾ, ಹರಿದ ಚಡ್ಡಿ ಧರಿಸಿ ಅದರಿಂದಲೇ ಫೇಮಸ್ ಆದ ಕಪ್ಪೆರಾಯ ಈ ಪಾತ್ರದಲ್ಲಿ ಅಭಿನಯಿಸಿದ ಹುಡುಗ ಫಕೀರಪ್ಪ ದೊಡ್ಡಮನಿ. ಇವರು ಮೂಲತಃ ಹಾವೇರಿ ಜಿಲ್ಲೆಯವರು.

ಹಾವೇರಿ ಜಿಲ್ಲೆಯ ಚಿಕ್ಕಲಿಂಗನ ಹಳ್ಳಿ ತಾಲೂಕಿನಲ್ಲಿ ಕೃಷಿ ಕುಟುಂಬದಲ್ಲಿ ಜನಿಸಿದವರು ಫಕೀರಪ್ಪ. ಇವರು ಕುಬ್ಜ ಮನುಷ್ಯ ಆಗಿದ್ದು ಇವರ ಎತ್ತರ 2.5 ಅಡಿ ಮಾತ್ರ. ಕೊಳ್ಳಾಗಿದ್ದ ಫಕೀರಪ್ಪ ಅವರು ಜನರು ತಮಾಷೆ ಮಾಡುವುದನ್ನು ನೋಡಿ ಸಹಿಸಲು ಆಗದೆ ಆ-ತ್ಮಹ-ತ್ಯೆಗೂ ಮುಂದಾಗಿದ್ದರಂತೆ. ಆದರೆ ತಮ್ಮ ಒಳ್ಳೆಕಿರುವ ದೇಹದಿಂದಲೇ ಇಂದು ಕನ್ನಡಿಗರ ಗಮನ ಸೆಳೆದಿದ್ದಾರೆ ಫಕೀರಪ್ಪ. ಹಳ್ಳಿ ಮೇಷ್ಟ್ರು ಸಿನಿಮಾದಲ್ಲಿ ಅಭಿನಯಿಸುವುದಕ್ಕೆ ಫಕೀರಪ್ಪ ಅವರಿಗೆ ಅವಕಾಶ ಸಿಗುತ್ತದೆ ಅದಾದ ಬಳಿಕ ಇನ್ನೂ ಹಲವು ಸಿನಿಮಾಗಳಲ್ಲಿ ಹಾಸ್ಯ ನಟನಾಗಿ ಫಕೀರಪ್ಪ ಕಾಣಿಸಿಕೊಂಡಿದ್ದಾರೆ.

 

 

2017ರಲ್ಲಿ ಕವಿತಾ ಎನ್ನುವರ ಜೊತೆ ಫಕೀರಪ್ಪ ವೈವಾಹಿಕ ಜೀವನಕ್ಕೆ ಕಾಲಿರಿದ್ದಾರೆ ಇವರ ಪತ್ನಿ ಇವರಿಗಿಂತ ಸ್ವಲ್ಪ ಉದ್ದವಾಗಿಯೇ ಇದ್ದಾರೆ. ಇದೀಗ ಸಿನಿಮಾಗಳಲ್ಲಿ ಅಷ್ಟಾಗಿ ಅಭಿನಯಿಸಿದ ಕಪ್ಪೆರಾಯ ಅಲಿಯಾಸ್ ಫಕೀರಪ್ಪ ದೊಡ್ಡಮನಿ ತಮ್ಮ ಊರಿನಲ್ಲಿ ಕೃಷಿ ಮಾಡಿಕೊಂಡು ಸುಖ ಸಂಸಾರ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *