ಜಿ ಪಿ ಫಿಲಂ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಗಣೇಶ್ ಕುಮಾರ್ ನಿರ್ಮಾಣದ , ಪ್ರತೀಕ್ ನಿರ್ದೇಶನದ ಒಂದು ಫ್ಯಾಮಿಲಿ ಡ್ರಾಮ ಹೇಳಲು ಹೊರಟಿರುವ ದ್ರುವತಾರೆ ಕನ್ನಡ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದೆ .ಮುಖ್ಯ ತಾರಾಗಣದಲ್ಲಿ ಪ್ರತೀಕ್ ಮತ್ತು ಮೌಲ್ಯ ಕಾಣಿಸಿಕೊಂಡಿದ್ದು ಇನ್ನು ತಾರಾಗಣದಲ್ಲಿ ರಮೇಶ್ ಭಟ್, ಮೂಗ್ ಸುರೇಶ್, ಸುಮನ್ ನಗರ್ಕರ್, ಅಶ್ವಿನ್ ರಾವ್ ಪಲ್ಲಕ್ಕಿ, ಪಿ ಡಿ ಸತೀಶ್, ಸಂಗೀತ ನಾರಾಯಣ್, ಮತ್ತು ನೆಗೆಟಿವ್ ಶೇಡ್ ನಲ್ಲಿ ಬಿಗ್ ಬಾಸ್ ಖ್ಯಾತಿಯ ಕಾರ್ತಿಕ್ ಕಾಣಿಸಿಕೊಂಡಿದ್ದಾರೆ.

ಇನ್ನು ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು 70 ದಿನಗಳ ಚಿತ್ರೀಕರಣವನ್ನು ಬೆಂಗಳೂರು ಮತ್ತು ಸಕ್ಲೇಶಪುರ ಸುತ್ತಮುತ್ತ ನಡೆಸಲಾಗಿದೆ. ಚಿತ್ರಕ್ಕೆ ಸೂರಜ್ ಜೋಯ್ಸ್ ಸಂಗೀತವನ್ನು ನೀಡುತ್ತಿದ್ದಾರೆ. ಜೀಚನ್ ರವರು ಕ್ಯಾಮರಾ ಹಿಡಿದಿದ್ದಾರೆ. ಪಿ ಜಿ ಫಿಲಂ ಸ್ಟುಡಿಯೋಸ್ನ ಮೊದಲನೇ ಸಿನಿಮಾ ಇದಾಗಿದೆ .ತನ್ನ ಎಲ್ಲಾ ಕೆಲಸವನ್ನು ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ಚಿತ್ರ ಇದ್ದು ಪ್ರೇಕ್ಷಕರಿಗೆ ಒಂದು ಹೊಸ ಕಥೆ ಹೇಳಲು ಮುಂದಿನ ಸೆಪ್ಟೆಂಬರ್ ಹೊತ್ತಿಗೆ ತೆರೆಗೆ ಬರಲು ಸಿದ್ಧವಾಗಿದೆ

Leave a Reply

Your email address will not be published. Required fields are marked *