ಅಣ್ಣಾ ಅಂತ ದರ್ಶನ್ ತಬ್ಕೊಂಡ್ರು ಪ್ರಾಣನೇ ಹೋದ ಹಾಗೆ ಆಯಿತು,ಅಳಬೇಡಿ ಅಣ್ಣಾ ಅಂತಾ ದರ್ಶನ್ ಹೇಳಿದ್ರು..ನೋಡೋಕಾಗಿಲ್ಲ ಅಂತಾ ವಿನೋದ್ ಕಣ್ಣೀರು

Darshan hugged Vinod Raj in Jail: ದರ್ಶನ್ ನೇರಾ ನುಡಿಗೆ ಮಾತ್ರ ಹೆಸರಾಗಿರಲಿಲ್ಲ. ಬದಲಿಗೆ ನೇರತೆ ಹಾಗೂ ಹೃದಯವಂತಿಕೆ ಅವರ ವ್ಯಕ್ತಿತ್ವದ ಟ್ರೇಡ್ ಮಾರ್ಕ್ ಆಗಿತ್ತು. ಸದ್ಯಕ್ಕೆ ಕೋಪಕ್ಕೆ ಮನಸ್ಸು ಕೊಟ್ಟರೆ ಏನಾಗುತ್ತದೆ ಎಂಬುದಕ್ಕೆ ದುರ್ದೈವ ತಾಜಾ ಉದಾಹರಣೆ.

ಇಂಥಾ ದರ್ಶನ್ ಅವರನ್ನು ಕನ್ನಡ ಚಿತ್ರರಂಗದ ಅನೇಕರು ಇಲ್ಲಿಯವರೆಗೆ ಜೈಲಿಗೆ ಹೋಗಿ ಭೇಟಿ ಮಾಡಿದ್ದಾರೆ. ಮಾತನಾಡಿದ್ದಾರೆ ಅವರೂ ತಮ್ಮ ದುಃಖವನ್ನು ಹಂಚಿಕೊಂಡರು. ಈ ಸಾಲಿಗೆ ಸೇರಿರುವ ವಿನೋದ್ ರಾಜ್ ಕೂಡ ತಮ್ಮ ಮನದಾಳದ ನೋವನ್ನು ಹೊರಹಾಕಿದ್ದಾರೆ. ಹೌದು, ವಿನೋದ್ ರಾಜ್ ಇಂದು ಪರಪ್ಪನ ಅಗ್ರಹಾರಕ್ಕೆ ಬಂದಿದ್ದು, ಇದೇ ವೇಳೆ ಮಾತನಾಡಿದ ವಿನೋದ್ ರಾಜ್, ಕೆಲವೊಮ್ಮೆ ಆಗಬಾರದ್ದು ನಡೆಯುತ್ತದೆ.

 

 

ದರ್ಶನ್ ಅವರಿಗೆ ಮೂಗಿನ ತುದಿಯಲ್ಲಿ ಸಿಟ್ಟು, ಇದು ದರ್ಶನ್ ಜೀವನದಲ್ಲಿ ಅಗ್ನಿ ಪರೀಕ್ಷೆ ಎಂದ ವಿನೋದ್ ರಾಜ್, ದರ್ಶನ್ ಮೇಲೆ ನಮ್ಮ ತಾಯಿಗೆ ವಿಶೇಷ ಪ್ರೀತಿ ಇತ್ತು. ತಮ್ಮ ಕೊನೆಯ ದಿನಗಳಲ್ಲಿಯೂ ತಮ್ಮ ತಾಯಿ ದರ್ಶನ್ ಬಗ್ಗೆ ಮಾತನಾಡುತ್ತಿದ್ದರು ಎಂದ ವಿನೋದ್ ರಾಜ್, ತುಂಬಾ ಕಷ್ಟದ ಬದುಕಿನಲ್ಲಿ ಬೆಳೆದು ಬಂದಿದ್ದೇನೆ, ದರ್ಶನ್ ಅವರನ್ನು ಬಿಟ್ಟು ಕೊಡಬೇಡ ಎಂಬ ತಾಯಿ ಲೀಲಾವತಿ ಅವರ ಮಾತು ವಿನೋದ್ ರಾಜ್ ಅವರು ನೆನಪಿಸಿಕೊಂಡಿದ್ದಾರೆ.

ಅಷ್ಟಕ್ಕೂ.. ಯಾಕೆ ಈ ಘಟನೆ ನಡೆದಿದೆ ಎಂದು ವಿನೋದ್ ರಾಜ್ ಕೇಳಿದರೆ, ಇದು ಅಚಾತುರ್ಯ, ತಾತ್ಸಾರ, ಅಂತ ಹೇಳ್ತಾನೆ ದರ್ಶನ್. ಅವರ ತಂದೆ ತೂಗುದೀಪ್ ಅವರು ನಮ್ಮ ತಾಯಿಯೊಂದಿಗೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಮ್ಮನ ಆರೋಗ್ಯ ಸರಿಯಿಲ್ಲ ಎಂದಾಗ ದರ್ಶನ್ ಬಂದು ಮಾತನಾಡಿದ್ದರು.

 

 

ಒಂದೆಡೆ ಪ್ರಾಣ ಕಳೆದುಕೊಂಡ ಕುಟುಂಬದವರ ನೋವು. ಮತ್ತೊಂದೆಡೆ ದರ್ಶನ್ ಅಭಿಮಾನಿಗಳು ಹಾಗೂ ನಿರ್ಮಾಪಕರ ನೋವು ವ್ಯಕ್ತಪಡಿಸುತ್ತಿದ್ದಾರೆ. ಹೇಗೆ ಇದ್ದವರು ಈಗೆ ಬದಲಾಗಿದ್ದು ಛೆ..ಈ ರೀತಿ ಆಗಬಾರದಿತ್ತು ಎಂದು ವಿನೋದ್ ರಾಜ್ ಬೇಸರ ವ್ಯಕ್ತಪಡಿಸಿದರು.

ಮುಂದುವರಿದು ಮಾತನಾಡಿದ ವಿನೋದ್ ರಾಜ್, ನನ್ನ ಶಸ್ತ್ರಚಿಕಿತ್ಸೆಗೂ ಮುನ್ನ ದರ್ಶನ್ ಅವರನ್ನು ಭೇಟಿಯಾಗಿದ್ದೆ, ಆಗ ದರ್ಶನ್, ಫಾರ್ಮ್ ಹೌಸ್ ಗೆ ಹೋಗಿ ಗಿಡಗಳನ್ನು ನೆಡೋಣ ಎಂದು ಹೇಳಿದರು.ಹೀಗಾಗಿ ಸಭೆ ನಡೆಯಲಿಲ್ಲ. ದರ್ಶನ್ ಎರಡನೇ ಬಾರಿ ಜೈಲಿಗೆ ಹೋಗಿದ್ದು ಏಕೆ ಎಂಬುದು ನಮಗೆ ಅರ್ಥವಾಗುತ್ತಿಲ್ಲ ಎಂದು ವಿನೋದ್ ರಾಜ್ ಹೇಳಿದ್ದಾರೆ.

 

ಆ ನಂತರ ಜೈಲಿನಲ್ಲಿ ದರ್ಶನ್ ಅವರನ್ನು ಭೇಟಿ ಮಾಡಿ ಮಾತನಾಡಿದ ವಿನೋದ್ ರಾಜ್, ದರ್ಶನ್ ಅವರನ್ನು ನೋಡಿ ತುಂಬಾ ನೋವಾಯಿತು. ಆದರೆ ಅಲ್ಲಿ ಪ್ರಾಣ ಕಳೆದುಕೊಂಡ ಪೋಷಕರ ನೋವು ದೊಡ್ಡದು.ಹೆಂಡತಿಯ ಹೊಟ್ಟೆಯಲ್ಲಿರುವ ಮಗು ಎಲ್ಲವನ್ನೂ ನೆನಪಿಸಿಕೊಂಡರೆ ತುಂಬಾ ನೋವಾಗುತ್ತದೆ ಎಂದರು. ದೇವರ ದಯೆಯಿಂದ ಎಲ್ಲವೂ ಶುಭವಾಗಲಿ ಎಂದು ಪ್ರಾರ್ಥಿಸಿದರು. ಅಣ್ಣ ಎಂದು ಹೇಳುವ ದರ್ಶನ್ ಅವರನ್ನು ಈ ರೀತಿ ಆಯ್ಕೆ ಮಾಡದಿರುವುದು ನೋವು ತಂದಿದೆ ಎಂದು ವಿನೋದ್ ರಾಜ್ ಹೇಳಿದ್ದಾರೆ.

Be the first to comment

Leave a Reply

Your email address will not be published.


*