ಗೌರಿ ಲಂಕೇಶ್ ಹತ್ಯೆಯ ಆರೋಪಿಗಳಲ್ಲಿ ಒಬ್ಬನಾದ ಮಂಡ್ಯದ ನವೀನ್ ಕುಮಾರ್ ಇತ್ತೀಚೆಗೆ ಜಾಮೀನಿನ ಮೇಲೆ ಹೊರಬಂದಿದ್ದ. ಮೈಸೂರಿನ ಮಾಜಿ ಸಂಸದ ಪ್ರತಾಪ್ ಸಿಂಹ ಅವರ ಮನೆಗೆ ತೆರಳಿ ಆರೋಗ್ಯ ವಿಚಾರಿಸಿದ್ದು ಭಾರೀ ಟೀಕೆಗೆ ಗುರಿಯಾಗಿದೆ.

ನವೀನ್ ಕುಮಾರ್ ಅವರನ್ನು ಭೇಟಿಯಾಗಿ ಹಣ್ಣಿನ ಬುಟ್ಟಿಯನ್ನು ನೀಡಿದ ಫೋಟೋಗಳನ್ನು ಸ್ವತಃ ಪ್ರತಾಪ್ ಸಿಂಹ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಕೊಲೆ ಪ್ರಕರಣದ ಆರೋಪಿ ಬಿಜೆಪಿ ಮುಖಂಡ ಪ್ರತಾಪ್ ಸಿಂಹ ಅವರ ಸ್ನೇಹಿತ ಎಂಬುದು ಈಗ ಚರ್ಚೆಯಾಗುತ್ತಿದೆ. ಅಲ್ಲದೆ, ಮಾಜಿ ಸಂಸದ ಪ್ರತಾಪ್ ಸಿಂಹ ಅವರ ಕ್ರಮವನ್ನು ಕಾಂಗ್ರೆಸ್ ನಾಯಕರು ತೀವ್ರವಾಗಿ ಖಂಡಿಸಿದರು.

 

ಪ್ರತಾಪ್ ಸಿಂಹ ನಡೆ ವಿರುದ್ಧ ಕಿಡಿಕಾರಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಪ್ರತಾಪ್ ಸಿಂಹ ಹಾಗೂ ನವೀನ್ ಕುಮಾರ್ ಅವರ ಫೋಟೋ ಶೇರ್ ಮಾಡಿ ಇದು ಗೋಡ್ಸೆ ಆರಾಧಕ ಬಿಜೆಪಿಯ ಅಸಲಿ ಮುಖ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಮದ್ದೂರಿನ ನವೀನ್ ಕುಮಾರ್ ನನ್ನ ಸ್ನೇಹಿತ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. ಇದು ಗೋಡ್ಸೆ ಆರಾಧಕ ಬಿಜೆಪಿಯ ನಿಜವಾದ ಮುಖ.

ಸಮಾಜದ ಶಾಂತಿ ಕದಡುವ, ಕೊಲೆ, ಸುಲಿಗೆಯಂತಹ ವಿಧ್ವಂಸಕ ಕೃತ್ಯ ಎಸಗುವವರೆಲ್ಲ ಬಿಜೆಪಿಯ ಗರ್ಭಗುಡಿಯಲ್ಲಿಯೇ ಇರುತ್ತಾರೆ ಎಂಬುದಕ್ಕೆ ಇದೊಂದು ನಿದರ್ಶನ. ವೀರ ಪತ್ರಕರ್ತೆಯಾಗಿದ್ದ ಗೌರಿ ಲಂಕೇಶ್ ಅವರನ್ನು ವಿನಾಕಾರಣ ಕೊಂದ ಆರೋಪಿಗಳ ಕೃತ್ಯವನ್ನು ಖಂಡಿಸುವ ಬದಲು ಬಿಜೆಪಿಯ ಮಾಜಿ ಸಂಸದರು ಆರೋಪಿಯ ಹೆಗಲ ಮೇಲೆ ಕೈಯಿಟ್ಟು ಚಿತ್ರ ತೆಗೆದರೆ ಸಮಾಜಕ್ಕೆ ಯಾವ ಸಂದೇಶ ರವಾನಿಸುತ್ತಾರೆ..?’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.

 

‘ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಮೊದಲ ಆರೋಪಿ ನಂ-1, ನಂತರ ಆರೂವರೆ ವರ್ಷ ಜೈಲಿನಲ್ಲಿದ್ದು ಇತ್ತೀಚೆಗಷ್ಟೇ ಜಾಮೀನು ಪಡೆದ ಆರೋಪಿ-17, ಸ್ನೇಹಿತ ಮದ್ದೂರು ನವೀನ್ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದರು. ಮದ್ದೂರಿನ ಯುವ ಗೆಳೆಯರೂ ಜೊತೆಗಿದ್ದರು’ ಎಂದು ಬರೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *