Darshan Wife Vijayalakshmi Visits Him In Parappana Agrahara jail:ಈ ಮೊದಲು ದರ್ಶನ್ ಪತ್ನಿ ವಿಜಯಲಕ್ಷ್ಮಿ ಜೊತೆ ಬಟ್ಟೆ, ಆಭರಣ, ವಾಹನ ವಿಚಾರದಲ್ಲಿ ಪೈಪೋಟಿಗೆ ಬಿದ್ದ ಪವಿತ್ರ ಗೌಡ ಈಗ ಕೊಲೆ ಪ್ರಕರಣದಲ್ಲಿ ಜೈಲು ಸೇರಿದರೂ ತನ್ನ ಪೈಪೋಟಿ ಮನೋಭಾವ ಬಿಟ್ಟಿಲ್ಲ. ಜೈಲಿನಲ್ಲಿದ್ದರೂ ಕೂಡ ವಿಜಯಲಕ್ಷ್ಮಿ ಹೋದಾಗ ಪವಿತ್ರ ಗೌಡ ಎಂತಹ ಕೆಲಸ ಮಾಡಿದ್ದಾರೆ ಗೊತ್ತಾ? ಕೇಳಿದ್ರೆ ನಿಜಕ್ಕೂ ಶಾಕ್ ಆಗ್ತೀರಾ? ಹಾಗಾದ್ರೆ ಏನಿದು ಅಂತ ಸಂಪೂರ್ಣವಾಗಿ ನೋಡೋಣ ಬನ್ನಿ..
ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನಟಿ ಪವಿತ್ರ ಗೌಡ ಆರೋಪಿಯಾಗಿದ್ದು, ಇತ್ತೀಚೆಗಷ್ಟೇ ಪೊಲೀಸ್ ಕಸ್ಟಡಿಯಿಂದ ನ್ಯಾಯಾಂಗ ಬಂಧನಕ್ಕೊಳಗಾಗಿದ್ದರು. ಅದರಂತೆ ಸದ್ಯಕ್ಕೆ ಅವರು ಇತರೆ ಆರೋಪಿಗಳೊಂದಿಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಮೊನ್ನೆಯಷ್ಟೇ ಪರಪ್ಪನ ಅಗ್ರಹಾರ ಜೈಲಿಗೆ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮತ್ತು ಪುತ್ರ ವಿನೀಶ್ ಬಂದು ಭೇಟಿ ಮಾಡಿಕೊಂಡು ಹೋಗಿದ್ದರು. ಪತ್ನಿ ಪುತ್ರರನ್ನು ನೋಡಿದ ದರ್ಶನ್ ಭಾವುಕರಾದರು ಎನ್ನಲಾಗಿತ್ತು.
ಇದರ ಬೆನ್ನಲ್ಲೇ ಪವಿತ್ರ ಮನೆಗೆ ಕರೆ ಮಾಡಿ ನನ್ನನ್ನು ನೋಡಲು ಯಾರೂ ಬರುತ್ತಿಲ್ಲ ಯಾಕೆ ಎಂದು ಕೂಗಾಡಿದ್ದಾರಂತೆ. ದರ್ಶನ್ ಗಿಂತ ಮೊದಲೇ ಪವಿತ್ರ ನ್ಯಾಯಾಂಗ ಬಂಧನಕ್ಕೀಡಾಗಿದ್ದರು. ಈ ನಡುವೆ ಒಮ್ಮೆ ಮಾತ್ರ ಅವರ ತಾಯಿ ಹಾಗೂ ಸಹೋದರ ನೋಡಲು ಬಂದಿದ್ದರು. ಆದರೆ ಮಗಳು ಇದುವರೆಗೆ ಬಂದಿರಲಿಲ್ಲ. ಇದೀಗ ದರ್ಶನ್ ಪುತ್ರ ಬಂದ ಬೆನ್ನಲ್ಲೇ ಮನೆಗೆ ಕರೆ ಮಾಡಿ ನನ್ನನ್ನು ನೋಡಲು ಯಾಕೆ ಬಂದಿಲ್ಲ ಎಂದು ಮನೆಗೆ ಕರೆ ಮಾಡಿ ಅತ್ತು ಕರೆದು ಮಗಳನ್ನು ಕರೆಸಿಕೊಂಡಿದ್ದಾರೆ ಎನ್ನಲಾಗಿದೆ. ನೆನ್ನೆಷ್ಟೇ ಮೊದಲ ಬಾರಿಗೆ ಪವಿತ್ರ ಮಗಳು ಖುಷಿ ತನ್ನ ಅಜ್ಜಿ ಜೊತೆ ಜೈಲಿಗೆ ಬಂದು ಅಮ್ಮನನ್ನು ನೋಡಿಕೊಂಡು ಹೋಗಿದ್ದರು.
ಅಷ್ಟೇ ಅಲ್ಲದೆ ಜೈಲಿನಲ್ಲಿದ್ದರೂ ಕೂಡ ವಾಶ್ರೂಮ್ಗೆ ಹೋಗಿ ಪವಿತ್ರ ಗೌಡ ಮೇಕಪ್ ಮಾಡಿಕೊಂಡು ಬಂದಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇದನ್ನು ನೋಡಿ ಜೈಲಿಗೆ ಹೋದವರು ವಿಜಯಲಕ್ಷ್ಮಿ ಜೊತೆ ಪವಿತ್ರ ಗೌಡ ಸ್ಪರ್ಧೆ ಬಿಟ್ಟಿಲ್ಲ ಎನ್ನುತ್ತಿದ್ದಾರೆ ನೆಟ್ಟಿಗರು. ಮೇಕಪ್ ಮಾಡಿಕೊಂಡು ಟಾಂಗ್ ಕೊಟ್ಟಿದ್ದಾರೆ.. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಪ್ಪದೇ ಕಮೆಂಟ್ ಮಾಡಿ ತಿಳಿಸಿ.