ಹಾಸ್ಯನಟ ಬುಲೆಟ್ ಪ್ರಕಾಶ್ ಅವರ ಪುತ್ರ ರಕ್ಷಕ್ ಸಾಮಾಜಿಕ ಜಾಲತಾಣಗಳಲ್ಲಿ ಒಂದಿಲ್ಲೊಂದು ವಿಚಾರಕ್ಕೆ ಬುಲೆಟ್ ಟ್ರೋಲ್ ಆಗುತ್ತಲೇ ಇದ್ದಾರೆ. ರೋಸ್ಟ್ ಅನ್ನೋ ಹೆಸರಲ್ಲಿ ನಾನಾ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡ್ತಾನೆ ಇರ್ತಾರೆ. ಅದರಲ್ಲೂ ಬಿಗ್ ಬಾಸ್ ಗೆ ಹೋದ ಮೇಲೆ ಸ್ವಲ್ಪ ಜಾಸ್ತಿ ಆಗಿದೆ. ರಕ್ಷಕ ಬುಲೆಟ್ ಅವರ ಸಾಮಾಜಿಕ ಮಾಧ್ಯಮ ಪೋಸ್ಟ್ಗಳು ವಿವಿಧ ಕಾಮೆಂಟ್ಗಳಿಂದ ಹೆಚ್ಚು ಪ್ರಭಾವಿತವಾಗಿವೆ. ಆದರೆ, ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳುವುದಿಲ್ಲ ಎನ್ನುತ್ತಾರೆ ರಕ್ಷಕ ಬುಲೆಟ್.
ಕಳೆದ ವರ್ಷ ಬಿಗ್ ಬಾಸ್ ಕನ್ನಡ ಸೀಸನ್ 10ಕ್ಕೆ ಎಂಟ್ರಿ ಕೊಟ್ಟಿದ್ದ ರಕ್ಷಕ ಬುಲೆಟ್ ಹೆಚ್ಚು ದಿನ ಬಿಗ್ ಮನೆಯಲ್ಲಿ ಇರಲಿಲ್ಲ. ಅವರ ನಡತೆ, ಸಹ ಸ್ಪರ್ಧಿಗಳ ಜೊತೆ ನಡೆದುಕೊಳ್ಳುವ ರೀತಿ, ಮಾತನಾಡುವ ರೀತಿ ಹೆಚ್ಚು ಚರ್ಚೆಗೆ ಕಾರಣವಾಗಿತ್ತು. ಪ್ರೇಕ್ಷಕರಿಂದ ಕಟುವಾದ ಟೀಕೆಗಳು ಬಂದವು. ಅವರ ಎಲಿಮಿನೇಷನ್ಗೆ ಕಾರಣ ಎಗರಿ ಡ್ರೋನ್ ಪ್ರತಾಪ್ ಅವರ ಕೋಪದ ಪ್ರದರ್ಶನ. ಕಿಚ್ಚನ ಪಂಚಾಯ್ತಿಯಲ್ಲೂ ಸುದೀಪ್ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೀಗ ಇದೇ ರಕ್ಷಕ್ ಸೋಷಿಯಲ್ ಮೀಡಿಯಾ ಟ್ರೋಲ್ ಮತ್ತು ಕೆಟ್ಟ ಕಾಮೆಂಟ್ಗಳ ಬಗ್ಗೆ ಮಾತನಾಡಿದ್ದಾರೆ.
“ಈ ಕಾಮೆಂಟ್ ಪಾಸ್ ಮಾಡೋದು, ಸ್ಪ್ರೆಡ್ ಆಗೋದರ ಬಗ್ಗೆ ನಾವು ಜಾಸ್ತಿ ತಲೆ ಕೆಡಿಸಿಕೊಳ್ಳಬಾರದು. ನಾನಂತೂ ಮೊದಲೇ ತಲೆ ಕೆಡಿಸಿಕೊಳ್ಳಲ್ಲ. ಸಖತ್ತಾಗಿಯೇ ನಾನು ಎಂಜಾಯ್ ಮಾಡ್ತಿನಿ. ಓದ್ತಿನಿ. ನೀಟಾಗಿ ಅದನ್ನು ನೋಡಿ ಮಜಾ ತಗೋತಿನಿ. ಯಾರೂ ಬಂದು ಒರಿಜಿನಲ್ ಫ್ರೊಫೈಲ್ನಿಂದ ಕಾಮೆಂಟ್ ಹಾಕಲ್ಲ. ಯಾಕಂದ್ರೆ ಅವರಿಗೆ *** ಅದಿಲ್ಲ ಅಂತ ಅರ್ಥ. ನೇರವಾಗಿ ಬಂದು ಕಾಮೆಂಟ್ರ ಹಾಕ್ರಪ್ಪ. ನಾವೂ, ಓಹ್ ನೀವೇನಾ ಕಾಮೆಂಟ್ ಹಾಕಿದ್ದು ಅಂತ ನೋಡಿ ಖುಷಿ ಪಡ್ತೀವಿ ಎಂದಿದ್ದಾರೆ.
“ನೀವು ನಮ್ಮನ್ನು ನೋಡಿಯೇ ಕಾಮೆಂಟ್ ಹಾಕಿರ್ತೀರಾ ಅಂದ ಮೇಲೆ, ನಾವೂ ನಿಮ್ಮನ್ನು ನೋಡಬೇಕಲ್ಲವೇ. ಆದರೆ, ನಿಮಗೆ ಯಾವುದೇ ಐಡೆಂಟಿಟಿ ಇರಲ್ಲ. ಜೀರೋ ಫಾಲೋವರ್ಸ್ ಇರ್ತಾರೆ. ಬಂದು ಕಾಮೆಂಟ್ ಪಾಸ್ ಮಾಡ್ತೀರಾ. ಒಬ್ಬರಿಗೆ ಮನೆ ಇರುತ್ತೆ, ಫ್ಯಾಮಿಲಿ ಇರುತ್ತೆ. ಮನೆಯಲ್ಲಿ ಅಪ್ಪ ಅಮ್ಮ ಇರ್ತಾರೆ. ಸಾವಿರ ಜನ ಇರ್ತಾರೆ. ಅವ್ರಿಗೆ ಅಂತ ಪ್ರೀತ್ಸೋ ಮನಸ್ಸುಗಳು ಇರ್ತಾವೆ. ಒಂದಷ್ಟು ಜನರನ್ನು ಸಂಪಾದನೆ ಮಾಡಿರ್ತಾರೆ. ನೀವು ಬಂದು ಕಾಮೆಂಟ್ ಮಾಡಿದಾಗ, ಅದಕ್ಕೆ ಇನ್ನೊಬ್ಬ ಬಂದು ಕಾಮೆಂಟ್ ಮಾಡ್ತಾನೆ.
ದಯವಿಟ್ಟು ಇದನ್ನು ಮಾಡಬೇಡಿ. ನಾವು ಚೆನ್ನಾಗಿ ಹೋಗ್ತಿದ್ದೀವಿ. ಅದೇ ದಾರಿಯಲ್ಲಿ ಹೋಗೋಣ. ನಮಗೆ ಏನಾದರೂ ಒಳ್ಳೆಯದಾದರೆ ಎಲ್ಲರೂ ಬಂದು ನಮ್ಮನ್ನು ಬೆಂಬಲಿಸುತ್ತಾರೆ. ಹಾಗೆಯೇ ನೀವು ಸಹ ಬೆಂಬಲಿಸಿ ಮತ್ತು ಉತ್ತಮ ಕಾಮೆಂಟ್ ಅನ್ನು ರವಾನಿಸಿ. ಆಲ್ ದಿ ಬೆಸ್ಟ್, ಥ್ಯಾಂಕ್ಯೂ ಸೋ ಮಚ್’’ ಎಂದು ತಮ್ಮದೇ ಶೈಲಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟ ಕಮೆಂಟ್ ಹಾಕಿದವರಿಗೆ ಮನವಿ ಮಾಡಿದ್ದಾರೆ.