Mahesh Babu’s wife praises Sudha Murthy’s simplicity at Ambani wedding: ಅಂಬಾನಿ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ವಿವಾಹ ಅದ್ಧೂರಿಯಾಗಿ ನೆರವೇರಿತು. ಮಹೇಶ್ ಬಾಬು ಅವರ ಪತ್ನಿ ನಮ್ರತಾ ಶಿರೋಡ್ಕರ್ ಅವರು ಮದುವೆಯಲ್ಲಿ ಭಾಗಿಯಾಗಿದ್ದ ಇನ್ಫೋಸಿಸ್ ಫೌಂಡೇಶನ್ನ ಮಾಜಿ ಅಧ್ಯಕ್ಷೆ ಮತ್ತು ರಾಜ್ಯಸಭಾ ಸಂಸದೆ ಸುಧಾ ಮೂರ್ತಿ ಅವರೊಂದಿಗಿನ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಈ ಕ್ಷಣವನ್ನು ನಾನು ಮರೆಯುವುದಿಲ್ಲ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಸುಧಾ ಮೂರ್ತಿ ಅವರೊಂದಿಗಿನ ಫೋಟೋವನ್ನು ಹಂಚಿಕೊಂಡಿರುವ ನಮ್ರತಾ ಶಿರೋಡ್ಕರ್ ಅವರು ಈ ಕ್ಷಣವನ್ನು ಎಂದಿಗೂ ಮರೆಯುವುದಿಲ್ಲ ಎಂದು ಬರೆದಿದ್ದಾರೆ. ನಾನು ಈ ಬುದ್ಧಿವಂತ ಮಹಿಳೆಯ ಬಗ್ಗೆ ತುಂಬಾ ಕೇಳಿದ್ದೆ, ಮತ್ತು ಅವಳನ್ನು ಭೇಟಿಯಾದ ನಂತರ, ನನ್ನ ನಂಬಿಕೆ ನಿಜವಾಯಿತು.
View this post on Instagram
ಮಹೇಶ್ ಬಾಬು ಅವರ ಪತ್ನಿ ನಮ್ರತಾ ಅವರು ಹುರುಪಿನವರಾಗಿದ್ದರು ಮತ್ತು ಜೀವನದಲ್ಲಿ ನೀಡಲು ತುಂಬಾ ಪ್ರೀತಿಯನ್ನು ಹೊಂದಿದ್ದಾರೆ ಎಂದು ಬಣ್ಣಿಸಿದರು. ನನ್ನ ಅಜ್ಜಿ ಮತ್ತು ಈಗ ನನ್ನ ಪತಿ ಮತ್ತು ಮಗಳ ಮೇಲಿನ ಅವರ ಅಭಿಮಾನ ನನ್ನನ್ನು ವಿನಮ್ರಗೊಳಿಸಿತು.ಬಿಲಿಯನೇರ್ ಲೇಡಿ ಹಾಕಿದ್ದು ಮಂಗಳಸೂತ್ರ ಮಾತ್ರ ಈ ನೆನಪುಗಳನ್ನು ಎಂದಿಗೂ ಶಾಶ್ವತವಾಗಿ ನೆನಪಿಸಿಕೊಳ್ಳುತ್ತೇನೆ ಎಂದು ಅವರು ಬರೆದಿದ್ದಾರೆ.
ಅನಂತ್ ಮತ್ತು ರಾಧಿಕಾ ಮದುವೆಯಲ್ಲಿ ಸುಧಾ ಮೂರ್ತಿ ಕೂಡ ಭಾಗವಹಿಸಿದ್ದರು. ಈ ವೇಳೆ ತೆಲುಗು ನಟ ಮಹೇಶ್ ಬಾಬು ಅವರ ಪತ್ನಿ ನಮ್ರತಾ ಶಿರೋಡ್ಕರ್ ಅವರು ಸುಧಾ ಮೂರ್ತಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ನಟಿ ನಮ್ರತಾ ಅವರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ಈ ಪೋಸ್ಟ್ ಅನ್ನು ಅಭಿಮಾನಿಗಳು ಮೆಚ್ಚಿದ್ದಾರೆ.ಅಂದಹಾಗೆ, ತೆಲುಗಿನ ಮಹೇಶ್ ಬಾಬು ಅವರ ಪತ್ನಿ ನಮ್ರತಾ ಶಿರೋಡ್ಕರ್ ನಟಿ, ನಿರ್ಮಾಪಕಿ ಮತ್ತು ಮಾಡೆಲ್ ಆಗಿ ಗುರುತಿಸಿಕೊಂಡಿದ್ದಾರೆ.ಚೋರ ಚಿತ್ತ ಚೋರ ಎಂಬ ಕನ್ನಡ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. ಬಹುಭಾಷಾ ನಟಿಯಾಗಿ ಗಮನ ಸೆಳೆದಿದ್ದಾರೆ.