ನ್ಯಾಷನಲ್ ಸ್ಟಾರ್ ಯಶ್ ಮನೆಯಲ್ಲಿ ರಾಖಿ ಹಬ್ಬ ಆಚರಿಸಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಯಶ್ ತಮ್ಮ ಮನೆಯಲ್ಲಿ ರಕ್ಷಾ ಬಂಧನ ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಹಬ್ಬದ ಸಂಭ್ರಮದ ಫೋಟೋವನ್ನು ಯಶ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

 

 

ದೇಶದೆಲ್ಲೆಡೆ ರಾಖಿ ಹಬ್ಬವನ್ನು ಆಚರಿಸಲಾಗುತ್ತದೆ. ‘ಕೆಜಿಎಫ್’ ಸ್ಟಾರ್ ಯಶ್ ಮನೆಯಲ್ಲೂ ರಾಖಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಪ್ರತಿ ವರ್ಷದಂತೆ ಈ ವರ್ಷವೂ ರಾಖಿ ಹಬ್ಬವನ್ನು ಆಚರಿಸಲಾಗುತ್ತದೆ. ಅಣ್ಣ ತಂಗಿಯರ ಬಾಂಧವ್ಯವನ್ನು ಸಾರುವ ಹಬ್ಬ ಇದಾಗಿದ್ದು, ಯಶ್ ಹಾಗೂ ತಂಗಿ ನಂದಿನಿ ಈ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದರು.

 

 

ಸಹೋದರ ಯಶ್ ಗೆ ಆರತಿ ಬೆಳಗಿದ ನಂತರ ರಾಖಿ ಕಟ್ಟಿ ಸಂಭ್ರಮದಿಂದ ಹಬ್ಬ ಆಚರಿಸಿದರು. ಈ ಫೋಟೋಗಳನ್ನು ಯಶ್ ಕೂಡ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

Leave a Reply

Your email address will not be published. Required fields are marked *