ಇಂದಿರಾ ಗಾಂಧಿ ಈ ದೇಶದ ಧೀಮಂತ ನಾಯಕಿ ಕೋಟ್ಯಾನು ಕೋಟಿ ಜನರ ನಿಜ ದೇವತೆ ದೀನದಲಿತರ ಉದ್ಧಾರಕಿ ಈ ಮಣ್ಣಿನ ಮಹಿಳೆಯರು ಸ್ವಾಭಿಮಾನದ ಪ್ರತೀಕ ಹೆಣ್ಣು ಎನ್ನುವ ವಿಚಾರವನ್ನು ಜಗತ್ತಿಗೆ ಸಾರಿದ ನಾಯಕಿ ಇಂತಹ ಇಂದಿರಾ ಗಾಂಧಿಗೂ ಕೂಡ ಸೋಲಿನ ಭಯ ಹುಟ್ಟಿತ್ತು ಅದು ಯಾರೋ ದೊಡ್ಡ ರಾಜಕಾರಣಿಯ ವಿರುದ್ಧವಲ್ಲ ಬದಲಾಗಿ ರಾಜಕಾರಣವೇ ಗೊತ್ತಿಲ್ಲದ ನಟನಿಂದ.
ಡಾಕ್ಟರ್ ರಾಜಕುಮಾರ್ ಎನ್ನುವ ಹೆಸರು ಇಂದಿರಾಗಾಂಧಿ ಎನ್ನುವ ಪ್ರಭಾವಿ ನಾಯಕಿಯನ್ನೇ ಬೆವರುವಂತೆ ಕಲ್ಪನೆಯನ್ನು ಕಾಣದ ಸೋಲು ಸನಿಹವೇ ನಿಂತಿದೆ ಎಂಬಂತೆ ಭಾಸವಾಗಿತ್ತು ಇಂದಿರಾ ಗಾಂಧಿ ಎಷ್ಟರ ಮಟ್ಟಿಗೆ ಪ್ರಭಾವಿ ಆಗಿದ್ದರು ಎಂದರೆ ಅವರ ಹೆಸರಿನಲ್ಲಿ ಒಂದು ಕತ್ತೆಯನ್ನು ಎಲೆಕ್ಷನ್ಗೆ ನಿಲ್ಲಿಸಿದ್ದರು ಕೂಡ ಗೆಲ್ಲುತ್ತಾರೆ ಎನ್ನುವ ಮಾತೊಂದು ಇತ್ತು.
ಅದನ್ನು ಎಷ್ಟು ಸಲ ಈ ದೇಶದ ಜನರು ಸಾಕ್ಷಿಕರಿಸಿದ್ದರು ಅಂತಹ ನಾಯಕಿ ಒಮ್ಮೆ ಚಿಕ್ಕಮಗಳೂರಿನಲ್ಲಿ ಎಲೆಕ್ಷನ್ ನಿಗೆ ನಿಲ್ಲಬೇಕು ಎಂದು ಯೋಚಿಸಿದ್ದರು ಅದು ಕಾರ್ಯರೂಪಕ್ಕೆ ಕೂಡ ಬಂದಿತ್ತು ಇಂದಿರಾ ಗಾಂಧಿ ಚಿಕ್ಕಮಂಗಳೂರಿನಲ್ಲಿ ನಾಮಪತ್ರವನ್ನು ಕೂಡ ಸಲ್ಲಿಸಿದರು ಆಗಲು ಅವರೇ ಗೆಲ್ಲುವುದು ಎಂದು ನಿರ್ಧಾರವಾಗಿತ್ತು.
ಯಾಕೆ ಎಂದರೆ ಅಲ್ಲಿ ಅವರಿಗೆ ಸಮರ್ಥ ಎದುರಾಳಿ ಇರಲಿಲ್ಲ ಇಂತಹ ಸಮಯದಲ್ಲೇ ಇಂದಿರಾಗಾಂಧಿ ರವರನ್ನು ಸೋಲಿಸುವ ತಾಕತ್ತು ಇರುವುದು ಈ ನಾಡಿನ ಡಾ. ರಾಜಕುಮಾರ್ ರವರಿಗೆ ಮಾತ್ರ ಎಂದು ಅವರ ವಿರೋಧಿಗಳಿಗೆ ತಿಳಿದಿತ್ತು ಹಾಗೆ ಎನಿಸಿದ್ದೆ ತಡ ಇಂದಿರಾಗಾಂಧಿ ರವರ ಎದುರು ರಾಜ್ ಸ್ಪರ್ಧಾಳಿ ಎನ್ನುವ ರೀತಿ ಪ್ರಚಾರವಾಗಿತ್ತು.ಅಲ್ಲಿಯವರೆಗೂ ಡಾಕ್ಟರ್ ರಾಜಕುಮಾರ್ ಬಗ್ಗೆ ಇಂದಿರಾಗಾಂಧಿಗೆ ಅಷ್ಟೇನೂ ಗೊತ್ತಿರಲಿಲ್ಲಅಲ್ಲಿಯವರೆಗೂ ನನ್ನ ಎದುರು ಯಾರೋ ಒಬ್ಬರು ದೊಡ್ಡ ರಾಜಕಾರಣಿ ನಿಲ್ಲಬಹುದು ಎಂದು ಕೊಂಡರೆ ಒಬ್ಬ ನಟನನ್ನು ನಿಲ್ಲಿಸಿದ್ದಾರಲ್ಲ ಎಂದುಕೊಂಡಿದ್ದರು ನಂತರ ಮಾಧ್ಯಮಗಳಲ್ಲಿ ರಾಜಕುಮಾರ್ ಹೆಸರು ರಾರಾಜಿಸ ತೊಡಗಿತು.
ಆಗ ಇಂದಿರಾ ಗಾಂಧಿಗೂ ಡಾ. ರಾಜಕುಮಾರ್ ಬಗ್ಗೆ ತಿಳಿದುಕೊಳ್ಳುವ ಮನಸಾಯಿತು ಅದರಂತೆ ರಾಜ್ ಎಂದರೆ ಕೇವಲ ನಟರಲ್ಲ ಅವರು ಈ ನಾಡಿನ ಶಕ್ತಿ ಎನ್ನುವುದು ಇಂದಿರಾ ಗಾಂಧಿ ರವರಿಗೆ ತಿಳಿಯಿತು ಆಗ ಮೊದಲ ಬಾರಿಗೆ ಇಂದಿರಾಗಾಂಧಿಗೆ ಸೋಲಿನ ಭಯ ಕಾಡಿತ್ತು ಈ ಸಮಯದಲ್ಲಿ ಇಂದಿರಾಗಾಂಧಿಗೆ ಎಂಜೆ ಅರ್ ಡಾಕ್ಟರ್ ರಾಜಕುಮಾರ್ ಆತ್ಮೀಯರು ಎಂದು ತಿಳಿಯಿತು.
ಎಂ ಜೆ ಆರ್ ರವರನ್ನು ಇಂದಿರಾ ಗಾಂಧಿ ಸಂಪರ್ಕಿಸಿದ್ದರು ಎಂ ಜೆ ಆರ್ ಕೂಡ ರಾಜಕುಮಾರ್ ರವರನ್ನು ಗುಣಗಾನ ಮಾಡಿದ್ದರು ಜೊತೆಗೆ ರಾಜ್ ಕುಮಾರ್ ರವರಿಗೆ ರಾಜಕೀಯಕ್ಕೆ ಬರುವ ಯೋಚನೆ ಇಲ್ಲ ನೀವು ನಿಶ್ಚಿಂತೆಯಿಂದ ಇರಿ ಎಂದು ಆಶ್ವಾಸನೆಯನ್ನು ನೀಡಿದರು ಈ ಮಧ್ಯಾಹ್ನ ಯಾವುದೇ ಕಾರಣಕ್ಕೂ ರಾಜಕೀಯಕ್ಕೆ ಬರುವುದಿಲ್ಲ ಎಂದು ಪತ್ರಿಕೆಗಳಿಗೆ ಡಾಕ್ಟರ್ ರಾಜಕುಮಾರ್ ಹೇಳಿಕೆಯನ್ನು ಕೊಟ್ಟರು ನಂತರ ಚಿಕ್ಕಮಂಗಳೂರಿನಿಂದ ಇಂದಿರಾಗಾಂಧಿ ಗೆದ್ದರು ಗೆದ್ದು ಬಂದ ನಂತರ ಚಿಕ್ಕಮಂಗಳೂರು ಕ್ಷೇತ್ರದ ಮತದಾರರ ಉದ್ದೇಶಿಸಿ ಮಾಡಿದ್ದ ಭಾಷಣದಲ್ಲಿ ಇಂದಿರಾ ಗಾಂಧಿ ರಾಜಕುಮಾರ್ ರವರ ಬಗ್ಗೆ ಪುಟಗಟ್ಟಲೆ ಮಾತನಾಡಿದರು ಇಷ್ಟು ಸಾಕಲ್ಲವೇ ಡಾಕ್ಟರ್ ರಾಜಕುಮಾರ್ ಎನ್ನುವ ಹೆಸರು ಎಂತಹ ಶಕ್ತಿ ಎಂದು ತಿಳಿಯುವುದಕ್ಕೆ