ಡಾಲಿ ಧನಂಜಯ್(Dali dananjay) ರವರು ತಮ್ಮ “ಜಮಾಲಿ ಗುಡ್ಡ”(Jamali gudda) ಎನ್ನುವ ಚಿತ್ರದ ಸಂದರ್ಶನ ಒಂದರಲ್ಲಿ ಮಾತನಾಡಿ ನಾನು ಇದೀಗ ಪುಷ್ಪ -2 ಚಿತ್ರದಲ್ಲಿ ಬಿಸಿಯಾಗಿದ್ದೇನೆ. ಪುಷ್ಪ 2 (Pushpa 2)ಚಿತ್ರವನ್ನು ಮಾಡಬೇಕು ಎಂದು ಹೇಳಿದ್ದಾರೆ ಅದರ ಡಬ್ಬಿಂಗ್ ಕೂಡ ನೀವೇ ಮಾಡುತ್ತೀರಾ ಎಂದು ಸಂದರ್ಶಕರು ಕೇಳಿದಾಗ ಹೌದು ಡಬ್ಬಿಂಗ್ ಕೂಡ ನಾನೇ ಮಾಡುತ್ತೇನೆ ಎಂದು ಉತ್ತರಿಸಿದ್ದಾರೆ.
ಪುಷ್ಪ ಟು ಸಿನಿಮಾ ಹಾಗೂ ಕನ್ನಡದಿಂದ ರಶ್ಮಿಕ ಮಂದಣ್ಣ(rashmika mandanna) ರವರನ್ನು ಬ್ಯಾನ್ ಮಾಡಬೇಕು ಎನ್ನುವ ಮಾತುಗಳು ಕೇಳಿ ಬರುತ್ತಿದ್ದು ಅದಕ್ಕೆ ನಿಮ್ಮ ಉತ್ತರವೇನು ಎಂದು ಡಾಲಿ ಧನಂಜಯ್ ರವರನ್ನು ಸಂದರ್ಶಕರು ಕೇಳಿದಾಗ ಅದಕ್ಕೆ ಉತ್ತರಿಸಿದ ಡಾಲಿ ರಶ್ಮಿಕ ಮಂದಣ್ಣ ರವರನ್ನು ಯಾಕೆ ಬ್ಯಾನ್ ಮಾಡಬೇಕು ಎನ್ನುವ ಪ್ರಶ್ನೆಯನ್ನು ಕೇಳಿದ್ದಾರೆ.
ಚಿತ್ರರಂಗದಲ್ಲಿ ಎಲ್ಲರಿಗೂ ಕೂಡ ಜೀವನವಿದೆ ಚಿತ್ರರಂಗದಲ್ಲಿ ಯಾರು ಬೇಕಾದರೂ ಜೀವನವನ್ನು ಕಟ್ಟಿಕೊಳ್ಳಬಹುದು ಅವರಿಗೆ ಅವರದೇ ಆದ ಜೀವನವಿರುತ್ತದೆ. ಯಾರಿಗೂ ಕೂಡ ನೀವು ಚಿತ್ರರಂಗಕ್ಕೆ ಬರಬೇಡಿ ಎಂದು ಹೇಳಲು ಸಾಧ್ಯವಿಲ್ಲ ಯಾರನ್ನಾದರೂ ಈ ರೀತಿಯ ಪ್ರಶ್ನೆಯನ್ನು ಕೇಳುವ ಮೊದಲು ನೀವು ಕೂಡ ಯೋಚಿಸಬೇಕು ಎಂದು ಸಂದರ್ಶಕರಿಗೆ ಉತ್ತರಿಸಿದ್ದಾರೆ.
ನಟಿ ಭಾವನ(actress Bhavana) ಕೂಡ ರಶ್ಮಿಕಾ ಮಂದಣ್ಣ ರವರ ಬಗ್ಗೆ ಮಾತನಾಡಿ ರಶ್ಮಿಕ ಮಂದಣ್ಣ ರವರ ಬಗ್ಗೆ ಕನ್ನಡದ ಬಗ್ಗೆ ಹಾಗೂ ರಿಶಬ್ ಶೆಟ್ಟಿರವರ(Rishabh Shetty) ಬಗ್ಗೆ ಕೆಟ್ಟದಾಗಿ ಮಾತನಾಡಿರುವ ಮಾತುಗಳು ಇವೆ ಎಂಬುದು ನನಗೂ ಕೂಡ ಗೊತ್ತಿದೆ. ಒಬ್ಬ ಕನ್ನಡದ ಹುಡುಗಿ ತೆಲುಗು ,ಹಿಂದಿ ಅಷ್ಟರಮಟ್ಟಿಗೆ ಬೆಳೆದು ನಿಂತಿರುವುದು ನಮಗೆಲ್ಲ ಹೆಮ್ಮೆಯ ವಿಚಾರ ಕನ್ನಡದವರು ಯಾರಾದರೂ ಸಾಧನೆ ಮಾಡುತ್ತಿದ್ದಾರೆ ಎಂದರೆ ಅವರಿಗೆ ನಾವು ಪ್ರೋತ್ಸಾಹ ಮಾಡಬೇಕು. ರಶ್ಮಿಕ ಮಂದಣ್ಣ ರವರನ್ನು ಬ್ಯಾನ್ ಮಾಡುವುದು ಉತ್ತಮವಲ್ಲ ವೈಯಕ್ತಿಕ ವಿಚಾರಕ್ಕೂ ಹಾಗೂ ಚಿತ್ರರಂಗಕ್ಕೂ ಸಂಬಂಧವೇ ಇರುವುದಿಲ್ಲ ನಾವು ಚಿತ್ರದಲ್ಲಿ ಕಲಾವಿದರಾಗಿರುತ್ತೇವೆ ಹಾಗೂ ನಮ್ಮ ಜೀವನದಲ್ಲಿ ನಮ್ಮ ಫ್ಯಾಮಿಲಿ ನಮಗೆ ಮುಖ್ಯವಾಗಿರುತ್ತದೆ.
ಚಿತ್ರರಂಗದಲ್ಲಿ ಹುಡುಗಿಯರು ಸಾಧನೆ ಮಾಡುವುದು ಎಂದರೆ ಸುಲಭದ ಮಾತಲ್ಲ ರಶ್ಮಿಕಾ ಮಂದಣ್ಣ ಅಷ್ಟು ದೂರದವರೆಗೂ ಹೋಗಿ ಸಾಧನೆ ಮಾಡಿದ್ದಾಳೆ. ಈ ಮಧ್ಯೆ ಡಾಲಿ ಧನಂಜಯ್ ಕೂಡ ಮಾತನಾಡಿ ರಶ್ಮಿಕಾ ಮಂದಣ್ಣ ರವರನ್ನು ಬ್ಯಾನ್(rashmika mandanna ban) ಮಾಡುತ್ತಾರೆ ಎನ್ನುವ ವಿಚಾರವೇ ನನಗೆ ಗೊತ್ತಿರಲಿಲ್ಲ ನೀವು ಹೇಳಿದ ನಂತರವೇ ನನಗೂ ಕೂಡ ಗೊತ್ತಾಗಿದ್ದು ಎಂದಿದ್ದಾರೆ.
ರಶ್ಮಿಕ ಮಂದಣ್ಣ ಎಲ್ಲಿದ್ದರೂ ಕೂಡ ಕನ್ನಡದ ಹುಡುಗಿ ಮನೆಯಲ್ಲಿ ಯಾರಾದರೂ ತಪ್ಪು ಮಾಡಿದ್ದಾರೆ ಎಂದ ತಕ್ಷಣ ಅವರನ್ನು ಬ್ಯಾನ್ ಮಾಡಲು ಸಾಧ್ಯವಾಗುವುದಿಲ್ಲ ಎಲ್ಲರ ಜೀವನದಲ್ಲೂ ಹೋರಾಟ ಇದ್ದೇ ಇರುತ್ತದೆ ರಶ್ಮಿಕಾ ಮಂದಣ್ಣ ತುಂಬಾ ಕ್ಯೂಟ್ ಹುಡುಗಿ ಅವಳನ್ನು ಬ್ಯಾನ್ ಮಾಡಬೇಡಿ ಎಂದು ಡಾಲಿ ಧನಂಜಯ್ ಹಾಗೂ ಭಾವನ ರವರು ರಶ್ಮಿಕಾ ಮಂದಣ್ಣ ರವರನ್ನು ವಹಿಸಿಕೊಂಡು “ಜಮಾಲಿಗುಡ್ಡ” (Jamali gudda)ಸಿನಿಮಾದ ಸಂದರ್ಶನದ ವೇಳೆ ಮಾತನಾಡಿದ್ದಾರೆ.