ದೊಂದೇ ಒಂದು ಎಲೆಯಿಂದ ಚರ್ಮದ ಅನೇಕ ಕಾಯಿಲೆಗಳನ್ನು ಗುಣಪಡಿಸಬಹುದು ಎನ್ನುವ ಅಚ್ಚರಿಯ ವಿಚಾರವನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ ಬನ್ನಿ ಈ ಕಾಲದಲ್ಲಿ ಚರ್ಮ ರೋಗ ಅಥವಾ ಚರ್ಮ ಸಮಸ್ಯೆ ಸಾಕಷ್ಟು ಜನರಲ್ಲಿ ಕಂಡು ಬರುತ್ತದೆ. ಚರ್ಮರೋಗವು ಆಹಾರದ ವ್ಯತ್ಯಾಸದಿಂದ ಎಣ್ಣೆಯ ವ್ಯತ್ಯಾಸದಿಂದ ಕೂಡ ಬರುತ್ತದೆ. ಈ ಒಂದೇ ಒಂದು ಎಲೆಯನ್ನು ಬಳಸುವುದರಿಂದ ಚರ್ಮರೋಗದಿಂದ ಮುಕ್ತಿ ಪಡೆಯಬಹುದು ಅಷ್ಟೇ ಅಲ್ಲದೆ ಬಿಳಿ ಚಿಬ್ಬು ಕೂಡ ನಿವಾರಣೆಯಾಗುತ್ತದೆ.

 

 

ಈ ಎಲೆಯಿಂದ ಚರ್ಮರೋಗ ಬಿಳಿ ಚಿಬ್ಬು ಮಾತ್ರವಲ್ಲದೆ ತಲೆ ಹೊಟ್ಟು ಬೆನ್ನು ಕುತ್ತಿಗೆ ಕೈಕಾಲಿನ ಭಾಗದಲ್ಲಿ ಇರುವಂತಹ ಚಿಬ್ಬುಗಳು ಕೂಡ ಗುಣಮುಖವಾಗುತ್ತವೆ. ಆ ಎಲೆ ಯಾವುದು ಎಂದರೆ ಹೊಂಗೆ ಮರದ ಎಲೆ ಬೇಸಿಗೆಯ ಕಾಲ ಬಂದರೆ ಸಾಕು ಹೊಂಗೆ ಮರದ ನೆರಳು ತಂಪು ಎಂದು ಜನಪದ ಹಾಡನ್ನು ನಾವು ಕೇಳಿರುತ್ತೇವೆ ಹೊಂಗೆ ಮರ ಬೇಸಿಗೆ ಕಾಲದಲ್ಲಿ ಚೆನ್ನಾಗಿ ಗಾಳಿಯನ್ನು ಬೀಸುತ್ತದೆ ಆದ್ದರಿಂದ ತಂಪಾಗಿರುತ್ತದೆ ಅದೇ ರೀತಿ ಹೊಂಗೆ ಮರದ ಎಲೆ ಚರ್ಮರೋಗಕ್ಕೆ ರಾಮಬಾಣವಿದ್ದಂತೆ.

 

 

ಹೊಂಗೆ ಮರದ ಎಲೆ ಕಾಯಿ ಹೂ ಬೇರು ಎಲ್ಲವೂ ಕೂಡ ಔಷಧೀಯ ಗುಣವನ್ನು ಹೊಂದಿದೆ. ಆಯುರ್ವೇದದ ಪ್ರಕಾರ ಹೊಂಗೆ ಮರವು ಔಷಧೀಯ ಗುಣವನ್ನು ಹೊಂದಿದ್ದು ಹಲವಾರು ಔಷಧಗಳನ್ನು ತಯಾರಿಸುವಾಗ ಇದನ್ನು ಬಳಸುತ್ತಾರೆ. ನೀವು ಈ ಕೆಲಸವನ್ನು ಮಾಡುವುದರಿಂದ ಹೊಂಗೆ ಮರದಿಂದ ಚರ್ಮದ ವಿಚಾರವಾಗಿ ಸಾಕಷ್ಟು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.

 

 

ಬೆಳಗ್ಗೆ ಎದ್ದ ತಕ್ಷಣ ಯಾರ ಜೊತೆಯೂ ಮಾತನಾಡದಂತೆ ಹೊಂಗೆ ಮರದ ಬಳಿ ಹೋಗಿ ನಿಂತು ಅದರ ಎಲೆಗಳನ್ನು ಕಿತ್ತುಕೊಂಡು ನೀರಿನಲ್ಲಿ ಚೆನ್ನಾಗಿ ತೊಳೆದು ಕುಟ್ಟಣಿಗೆಗೆ ಹಾಕಿಟ್ಟಬೇಕು ಇದಕ್ಕೆ ಅರ್ಧ ಸ್ಪೂನ್ ಮಾತ್ರ ನೀರನ್ನು ಸೇರಿಸಬೇಕು ಎಲೆಯ ರಸವು ಬರುವವರೆಗೂ ಚೆನ್ನಾಗಿ ಕುಟ್ಟಬೇಕು ಅದನ್ನು ಒಂದು ಬಟ್ಟಲಿಗೆ ಶೋಧಿಸಿ ಇಟ್ಟುಕೊಳ್ಳಲಿ ನಿಮಗೆ ಯಾವ ಭಾಗದಲ್ಲಿ ಚರ್ಮದಾ ಸಮಸ್ಯೆ ಇದೆಯೋ ಅಲ್ಲಿಗೆ ಇದನ್ನು ಹಚ್ಚಿಕೊಂಡು ಎರಡು ಮೂರು ದಿನ ಇದೇ ರೀತಿ ಮಾಡಿದರೆ ಒಂದು ವಾರದಲ್ಲಿ ಚರ್ಮದಾ ಸಮಸ್ಯೆಗಳು ಮಾಯವಾಗುತ್ತವೆ

Leave a comment

Your email address will not be published. Required fields are marked *