ದೆಹಲಿ ಕನ್ನಡ ಸಂಘದ 75ನೇ ವರ್ಷದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಎಲ್ಲಾದರು ಇರು ಎಂತಾದರು ಇರು ಎಂದೆಂದಿಗು ನೀ ಕನ್ನಡವಾಗಿರು ಎಂದು ಕುವೆಂಪು ಪದ್ಯದ ಸಾಲನ್ನು ಹಾಡುವ ಮೂಲಕ ಭಾಷಣ ಆರಂಭಿಸಿದರು.
ಭಾಷಣ ಮುಂದುವರೆಸಿದ ಮೋದಿ ಅವರು, ನಮ್ಮ ದೇಶವು 75 ವರ್ಷದ ಅಮೃತ ಮಹೋತ್ಸವದಲ್ಲಿದೆ. ಈ ಸಂಘದ ಭವಿಷ್ಯ ಕಂಡ ಎಲ್ಲಾ ಮಹನಿಯರಿಗೂ ನನ್ನ ನಮನ 75 ವರ್ಷ ಸಂಘ ನಡೆಸೋದು ಅಷ್ಟು ಸುಲಭವಲ್ಲ, ಎಲ್ಲಾ ಸದಸ್ಯರಿಗೂ ನಾನು ಅಭಿನಂದಿಸುತ್ತನೆ. ಕರ್ನಾಟಕಟ ಹೊರತು ಪಡಿಸಿ ಭಾರತವನ್ನು ಊಹಿಸಲು ಸಾಧ್ಯವಿಲ್ಲ.
ಹುನುಮ ನಿರದ ರಾಮನೂ ಇಲ್ಲ ರಾಮಾಯಣನೂ ಇಲ್ಲ, ಪುರಾಣ ಕಾಲದಿಂದಲೂ ಕರ್ನಾಟಕದ ಮಹತ್ವವಿದೆ, ಕರ್ನಾಟಕದಲ್ಲಿ ಸಮಾನತೆ ಸಾರಲು ಬಸವಣ್ಣ, ಡೊಹರ ಕಕ್ಕಯ್ಯ ಎದ್ದು ಬಂದರು ಎಂದು ಹೇಳಿದರು.
ಕನ್ನಡ ಭಾಷೆ ಓದುವುದರಿಂದ ಓದುವ ಹವ್ಯಾಸ ಚೆನ್ನಾಗಿರುತ್ತದೆ. ಈ ಕೌಶಲ್ಯ ಬೇರೆ ಭಾಷೆಗಳಲ್ಲಿ ಇಲ್ಲ. ಅನುಭವ ಮಂಟಪದ ಮೂಲಕ, ಅವರ ವಚನಗಳ ಮೂಲಕ ಬಸವಣ್ಣ ಪ್ರಕಾಶಿಸುತ್ತಿದ್ದಾರೆ. ನನಗೆ ಲಂಡನ್ ನಲ್ಲಿ ಅವರ ಪ್ರತಿಮೆ ಉದ್ಘಾಟಿಸುವ ಅವಕಾಶ ಸಿಕ್ಕಿತು. ಕರ್ನಾಟಕದ ವಿಚಾರ ಪರಂಪರೆ ಮತ್ತು ಪ್ರಭಾವ ಎಂದೆಂದಿಗೂ ಅಮರ, ಕರ್ನಾಟಕ ಸಿರಿಧಾನ್ಯಗಳ ಪ್ರಮುಖ ಕೇಂದ್ರ, ಅನ್ನ, ರಾಗಿ ಕರ್ನಾಟಕ ಸಂಸ್ಕೃತಿಯ ಭಾಗ. ಯಡಿಯೂರಪ್ಪ ಸಿಎಂ ಆಗಿದ್ದಾಗ ಸಿರಿಧಾನ್ಯಕ್ಕೆ ಉತ್ತೇಜನ ನೀಡುವ ಕೆಲಸ ಶುರು ಮಾಡಿದ್ದರು. ಈಗ ಇಡೀ ವಿಶ್ವದಲ್ಲೇ ಇದರ ಬೇಡಿಕೆ ಆರಂಭವಾಗಿದೆ ಎಂದು ನರೇಂದ್ರ ಮೋದಿ ಹಾಡಿ ಹೊಗಳಿದ್ದಾರೆ.