World passport ranking 2023:ಪಾಸ್ ಪೋರ್ಟ್ ಎನ್ನುವುದು ಬೇರೆ ದೇಶಕ್ಕೆ ಪ್ರಯಾಣ ಮಾಡಲು ಮುಖ್ಯವಾಗಿ ಬೇಕಾಗಿರುವ ಅಂಶವಾಗಿದೆ. ನಾವು ಬೇರೆ ದೇಶಕ್ಕೆ ಪ್ರಯಾಣಿಸಲು ಕೂಡ ಪಾಸ್ಪೋರ್ಟ್ ಅವಶ್ಯಕತೆ ಅಷ್ಟೇ ಅಲ್ಲದೆ ಪಾಸ್ಪೋರ್ಟ್ ನಿಂದ ಪೌರತ್ವವನ್ನು ಕೂಡ ಸಾಬೀತುಪಡಿಸಿಕೊಳ್ಳಬಹುದು ಪಾಸ್ ಪೋರ್ಟ್ ಇಲ್ಲವಾದಲ್ಲಿ ನೀವು ಯಾವ ದೇಶದವರು ಯಾವ ದೇಶದ ಪೌರತ್ವವನ್ನು ಹೊಂದಿದ್ದೀರಿ ಎನ್ನುವುದನ್ನು ಕಂಡುಹಿಡಿಯಲು ಕಷ್ಟವಾಗುತ್ತದೆ. 2023ರಲ್ಲಿ ಮತ್ತೊಮ್ಮೆ ಪಾಸ್ಪೋರ್ಟ್ ಶ್ರೇಯಾಂಕ ಬಂದಿದೆ ಇದರಲ್ಲಿ ಭಾರತ ಮತ್ತು ಪಾಕಿಸ್ತಾನದ ಪಾಸ್ಪೋರ್ಟ್ ನಡುವೆ ಅಜಗಜಾಂತರ ವ್ಯತ್ಯಾಸವಿದೆ.

 

 

ಪಾಕಿಸ್ತಾನ ದೇಶದ ಪಾಸ್ಪೋರ್ಟ್ ಸಿರಿಯ, ಇರಾಕ್, ಆಫ್ಘಾನಿಸ್ತಾನ ಮುಂತಾದ ದುರ್ಬಲ ದೇಶಗಳ ಪಾಸ್ಪೋರ್ಟ್ ಶ್ರೇಯಾಂಕದ (world passport ranking)ಹತ್ತಿರಕ್ಕೆ ಬಂದಿದೆ ಆದರೆ ಭಾರತದ ಪಾಸ್ಪೋರ್ಟ್ ಶ್ರೇಯಾಂಕ ಮುನ್ನೆಲೆಗೆ ಬಂದಿದೆ. ಪ್ರಪಂಚದ ಉತ್ತಮ ಪಾಸ್ಪೋರ್ಟ್ ಎನ್ನುವ ಖ್ಯಾತಿಯಲ್ಲಿ ಜಪಾನ್ ನಂಬರ್ ಒನ್ ಸ್ಥಾನವನ್ನು ಪಡೆದುಕೊಂಡಿದೆ.

 

 

2023ರ ಪಾಸ್ಪೋರ್ಟ್ ಶ್ರೇಯಾಂಕವನ್ನು(most powerful passport 2023 list) ಲಂಡನ್ ಮೂಲದ ಟ್ರಾವೆಲ್ ಹೆನ್ಲಿ (Henley passport index)ಮತ್ತು ಪಾರ್ಟ್ನರ್ಸ್ ಪಾಸ್ ಪೋರ್ಟ್ ಶ್ರೇಯಾಂಕ ವನ್ನು ಬಿಡುಗಡೆಗೊಳಿಸಿದ್ದಾರೆ. ಬಿಡುಗಡೆಗೊಳಿಸಿರುವ 109 ದೇಶಗಳ ಪಾಸ್ಪೋರ್ಟ್ ಶ್ರೇಯಾಂಕದ ಪಟ್ಟಿಯಲ್ಲಿ ಕಳಪೆ ಪಾಸ್ಪೋರ್ಟ್(least powerful passport) ಸ್ಥಾನದಲ್ಲಿ ಪಾಕಿಸ್ತಾನ ಕೂಡ ಕಾಣಿಸಿಕೊಂಡಿದೆ.

 

 

ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ 227 ಪ್ರಯಾಣದ ಸ್ಥಳಗಳಿವೆ ಅದರಲ್ಲಿ 35 ಸ್ಥಳಗಳ ಪ್ರವೇಶವನ್ನು ಪಾಕಿಸ್ತಾನ ಪಾಸ್ಪೋರ್ಟ್ ಹೊಂದಿರುವವರು ವೀಸಾ ಮುಕ್ತ ಅಥವಾ ವೀಸಾ ಆನ್ ಆಗಮನ (Visa on entry)ಪ್ರವೇಶವನ್ನು ಪಡೆಯಬಹುದಾಗಿದೆ ಅಷ್ಟೇ ಅಲ್ಲದೆ ಸಿರಿಯಾ ದೇಶ 25 ಗಮ್ಯ ಸ್ಥಾನ, ಇರಾಕ್ 29 ಗಮ್ಯ ಸ್ಥಾನ, ಆಫ್ಘಾನಿಸ್ತಾನ 27 ಗಮ್ಯ ಸ್ಥಾನ ಗಳನ್ನು ಪಡೆದುಕೊಂಡಿದೆ.

 

 

ಲಂಡನ್ ಬಿಡುಗಡೆ ಮಾಡಿರುವ ಮೂರು ತಿಂಗಳುಗಳ ವರದಿಯ ಪ್ರಕಾರ ಭಾರತದ ಪಾಸ್ಪೋರ್ಟ್ ಪಾಕಿಸ್ತಾನದ ಪಾಸ್ಪೋರ್ಟ್ ಗಿಂತ ಉತ್ತಮವಾಗಿದೆ ಹಾಗೆಯೇ ಭಾರತದ ಪಾಸ್ಪೋರ್ಟ್ 85ನೇ ಸ್ಥಾನವನ್ನು(India passport ranking) ಪಡೆದುಕೊಂಡಿದೆ ಭಾರತವು 59 ಸ್ಥಳಗಳಿಗೆ ವೀಸಾ ಮುಕ್ತ ಅವಕಾಶವನ್ನು ನೀಡುತ್ತದೆ. ಜಪಾನ್ ದೇಶ ಪ್ರಪಂಚದ ಶಕ್ತಿಶಾಲಿ ಪಾಸ್ಪೋರ್ಟ್ ಹೊಂದಿದ್ದು ಈ ದೇಶದಲ್ಲಿ 193 ತಾಣಗಳಿಗೆ ಮೀಸ ಮುಕ್ತ ಪ್ರವೇಶವನ್ನು ನೀಡಲಾಗುತ್ತದೆ. ಸತತ ಐದು ವರ್ಷಗಳಿಂದ ಜಪಾನ್ ಮೊದಲ ಸ್ಥಾನದಲ್ಲಿ ಕಂಡುಬರುತ್ತದೆ.

 

 

ಇನ್ನು ಎರಡನೆಯ ಸ್ಥಾನದಲ್ಲಿ ಸಿಂಗಾಪುರ ಮತ್ತು ದಕ್ಷಿಣ ಕೊರಿಯಾ ಉಳಿದುಕೊಂಡಿವೆ ನಂತರದ ಸ್ಥಾನದಲ್ಲಿ ಜರ್ಮನಿ ಸ್ಪೇನ್ ಇತರೆ ಯುರೋಪಿಯನ್ ರಾಷ್ಟ್ರಗಳು ಬರುತ್ತವೆ. ಅಮೇರಿಕಾ ದೇಶವು 22ನೇ ಸ್ಥಾನವನ್ನು ಪಡೆದುಕೊಂಡಿದೆ ಅಮೆರಿಕಾದ ಜೊತೆಗೆ ಸ್ವಿಜರ್ಲ್ಯಾಂಡ್, ನ್ಯೂಜಿಲೆಂಡ್ ಮತ್ತು ನಾರ್ವೆ ಕೂಡ ಇವೆ(top 10 strongest passport in the world)
ಇನ್ನು 59ನೇ ಸ್ಥಾನದಲ್ಲಿ ಚೀನಾ ಮತ್ತು ಭೂಮಿಯ ದೇಶಗಳು ಸ್ಥಾನವನ್ನು ಹಂಚಿಕೊಂಡಿವೆ ಈ ರಾಷ್ಟ್ರಗಳು 80 ಗಮ್ಯ ಸ್ಥಾನಗಳನ್ನು ವೀಸಾ ಮುಕ್ತ ಪ್ರವೇಶಕ್ಕಾಗಿ ಕಾಯ್ದಿರಿಸಿವೆ ರಷ್ಯಾ ದೇಶವು 37ನೇ ಸ್ಥಾನದಲ್ಲಿ ಇದ್ದು 118 ಸ್ಥಳಗಳಿಗೆ ವಿಸಾಮುಕ್ತ ಪ್ರವೇಶ ನೀಡಲು ಸಜ್ಜಾಗಿದೆ.

Leave a comment

Your email address will not be published. Required fields are marked *