ಹಿಂದೆ ಪ್ರೀತಿ ಎಂಬ ಪದಕ್ಕೆ ಸಾಕಷ್ಟು ಮಹತ್ವವಿತ್ತು ಆದರೆ ಈಗ ಬರ ಬರುತ್ತಾ ಕಾಲ ಬದಲಾದಂತೆ ಪ್ರೀತಿಗೆ ಅರ್ಥವೇ ಇಲ್ಲದಂತಾಗಿದೆ. ವಯಸ್ಸಿಗೆ ಬಂದ ಹುಡುಗ ಹುಡುಗಿಯರು ಪಾರ್ಕು ಸಿನಿಮಾ ಎಂದು ಸುತ್ತಾಡುವುದು ಇಂದು ಕಾಮನ್ ಅಂದ ಚೆಂದ ಇದ್ದಾಗ ಎಲ್ಲರೂ ಕೂಡ ಪ್ರೀತಿಸಿ ಒಬ್ಬರನ್ನೊಬ್ಬರು ಇಷ್ಟಪಡುತ್ತಾರೆ. ಆದರೆ ಅವರಿಗೆ ವಯಸ್ಸಾಗುತ್ತಿದ್ದಂತೆ ಒಬ್ಬರ ಮೇಲೆ ಇನ್ನೊಬ್ಬರ ಆಕರ್ಷಣೆ ಕಡಿಮೆಯಾಗಿ ಡಿವೋರ್ಸ್ ಕೂಡ ತೆಗೆದುಕೊಂಡಿರುವ ಉದಾಹರಣೆಗಳು ಇವೆ.

 

 

ಮುಂಬೈನಲ್ಲಿ ಮನೋಜ್ ಎನ್ನುವ ಶ್ರೀಮಂತ ಹುಡುಗನೊಬ್ಬ ಪ್ರಿಯಾ ಎನ್ನುವ ಬಡ ರೈತರ ಮಗಳನ್ನು ನೋಡುತ್ತಾನೆ. ಪ್ರಿಯಾ ಮೇಲೆ ಮನೋಜ್ ಗೆ ಲವ್ ಆಗುತ್ತದೆ. ನಾನು ಮದುವೆಯಾದರೆ ಇವಳನ್ನು ಮದುವೆಯಾಗಬೇಕು ಎಂದು ಆಸೆ ಕೂಡ ಹುಟ್ಟುತ್ತದೆ. ಮನೋಜ್ ಪ್ರಿಯಾಮಣಿ ಹೋಗಿ ನಾನು ನಿನ್ನನ್ನು ಪ್ರೀತಿಸುತ್ತೇನೆ ನನ್ನನ್ನು ಮದುವೆ ಮಾಡಿಕೋ ಎಂದು ಕೇಳುತ್ತಾನೆ. ಗೊತ್ತು ಗುರಿ ಇಲ್ಲದ ಹುಡುಗನೊಬ್ಬ ಬಂದು ಈ ರೀತಿ ಹೇಳಿದರೆ ಯಾರು ಕೂಡ ಒಮ್ಮೆಲೆ ಒಪ್ಪಿಕೊಳ್ಳುವುದಿಲ್ಲ ಹಾಗಾಗಿ ಪ್ರಿಯಾ ಕೂಡ ಅದನ್ನು ತಿರಸ್ಕರಿಸಿ ಹೋಗುತ್ತಾಳೆ.

ಮನೋಜ್ ಪ್ರಿಯಾ ರವರ ತಂದೆ ತಾಯಿಯ ಬಳಿ ತಾಲೂಕು ಶ್ರೀಮಂತ ನನಗೆ ನಿಮ್ಮ ಮಗಳನ್ನು ಮದುವೆ ಮಾಡಿ ಕೊಡಿ ನನ್ನ ಹತ್ತಿರ ಸಾಕಷ್ಟು ಆಸ್ತಿ ಇದೆ ನಿಮ್ಮ ಮಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಮದುವೆ ಮಾಡಿಕೊಡಿ ಎಂದು ಕೇಳುತ್ತಾನೆ. ಪ್ರಿಯಾಳ ತಂದೆ ತಾಯಿ ಕೂಡ ಇದನ್ನು ನಂಬಿ ನನ್ನ ಮಗಳು ಶ್ರೀಮಂತರ ಮನೆಯಲ್ಲಿ ಸುಖವಾಗಿರುತ್ತಾಳೆ ಎಂದು ಆತನನ್ನು ನಂಬಿ ಮದುವೆ ಮಾಡಿಕೊಡುತ್ತಾರೆ.

 

 

ಮನೋಜ್ ಜೊತೆ ಪ್ರಿಯ ಮದುವೆ ಕೂಡ ನಡೆದು ಹೋಗುತ್ತದೆ. ಮನೋಜ್ ಇಷ್ಟೊಂದು ಶ್ರೀಮಂತನಾಗಿದ್ದರೂ ಕೂಡ ನನ್ನನ್ನು ಮದುವೆಯಾಗಲು ಕಾರಣ ನಾನು ನೋಡಲು ತುಂಬಾ ಚೆನ್ನಾಗಿದ್ದಾನೆ ಸೌಂದರ್ಯವತಿ ಆದ್ದರಿಂದ ನಾನು ಬಡವರಾಗಿದ್ದರು ಕೂಡ ನನ್ನನ್ನು ಮನೋಜ್ ಮದುವೆಯಾಗಿದ್ದಾನೆ ಎಂದುಕೊಂಡಿರುತ್ತಾರೆ. ಮದುವೆಯಾದ ನಂತರ ಮನೋಜ್ ಹಾಗೂ ಪ್ರಿಯ ಸಂಸಾರ ತುಂಬಾ ಚೆನ್ನಾಗಿ ಸಾಗುತ್ತಿತ್ತು

ಮನೋಜ್ ಕೊಟ್ಟ ಮಾತಿನಂತೆ ಪ್ರಿಯಾಳನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದ ಹೀಗೆ ಕಾಲ ಕಳೆಯುತ್ತಿತ್ತು ದಿನ ಕಳೆದಂತೆ ಪ್ರಿಯಾ ಒಂದು ವಿಚಾರದ ಬಗ್ಗೆ ತುಂಬಾ ಯೋಚನೆ ಮಾಡಲು ಶುರು ಮಾಡಿದಳು ಆ ವಿಚಾರ ಪ್ರಿಯಾಳ ಸೌಂದರ್ಯ ಪ್ರಿಯಾ ಮದುವೆಗೂ ಮೊದಲು ಸ್ಲಿಮ್ ಆಗಿ ಸುಂದರವಾಗಿದ್ದಲು ಮದುವೆಯ ನಂತರ ಪ್ರಿಯಾಳ ಬಾಡಿ ತುಂಬಾ ದಪ್ಪವಾಗಿತ್ತು ಪ್ರಿಯಾ ಮುಖದ ಮೇಲೆ ರಿಂಕಲ್ಸ್ ಕೂಡ ಬರಲು ಶುರುವಾಯಿತು ಈ ವಿಚಾರ ಪ್ರಿಯಾ ತುಂಬಾ ಯೋಚನೆ ಮಾಡುವಂತೆ ಮಾಡಿತ್ತು.

 

 

ನನ್ನ ಸೌಂದರ್ಯವನ್ನು ನೋಡಿ ನನ್ನನ್ನು ಮದುವೆ ಮಾಡಿಕೊಂಡಿರುವ ಮನೋಜ್ ಸುಂದರವಾಗಿಲ್ಲ ಎಂಬ ಕಾರಣಕ್ಕೆ ನನ್ನನ್ನು ಬಿಟ್ಟು ಹೋಗುತ್ತಾನೆ ಎಂದು ದಿನ ಯೋಚನೆ ಮಾಡುತ್ತಿದ್ದರು ಪ್ರಿಯ ಯೋಚನೆ ಮಾಡಿ ಮಾಡಿ ಅವಳ ಆರೋಗ್ಯ ಕೂಡ ಹಾಳಾಗುತ್ತದೆ. ಒಂದು ದಿನ ಮನೋಜ್ ಕಾರಿಗೆ ಆಕ್ಸಿಡೆಂಟ್ ಆಗಿಬಿಡುತ್ತದೆ. ಅಪಘಾತದಲ್ಲಿ ಎರಡು ಕಣ್ಣುಗಳನ್ನು ಕಳೆದುಕೊಂಡು ಕುರುಡನಾಗುತ್ತಾನೆ.

ಪತಿ ಕುರುಡನಾಗಿರುವ ವಿಚಾರ ತಿಳಿದು ಪ್ರಿಯ ದುಃಖ ಪಡುತ್ತಾಳೆ ತದನಂತರ ಅವನು ಕುರುಡನಾಗಿದ್ದು ಒಳ್ಳೆಯದು ಅವನು ಇನ್ನು ಮೇಲೆ ನನನ್ನು ಬಿಟ್ಟು ಹೋಗುವುದಿಲ್ಲ ಎಂದುಕೊಳ್ಳುತ್ತಾಳೆ ಹಲವು ವರ್ಷಗಳು ಕಳೆದರೂ ಕೂಡ ಪ್ರಿಯ ತನ್ನ ಗಂಡನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಳು ನಂತರ ಅನಾರೋಗ್ಯದಿಂದ ಮನೋಜ್ ಪತ್ನಿ ಪ್ರಿಯ ಸತ್ತು ಹೋಗುತ್ತಾಳೆ ಹೆಂಡತಿ ಸಾವಿನ ವಿಚಾರ ತಿಳಿದು ಮನೋಜ್ ಕಣ್ಣೀರು ಹಾಕುತ್ತಾನೆ.

 

 

ಪ್ರಿಯಾ ಇಲ್ಲದ ಮೇಲೆ ನಾನು ಈ ಊರಿನಲ್ಲಿ ಇರುವುದಿಲ್ಲ ನಾನು ಬೇರೆ ದೇಶಕ್ಕೆ ಹೋಗಿ ಕೆಲಸ ಮಾಡುತ್ತೇನೆ ಇಂದು ಮನೋಜ್ ಊರಿನ ಜನರ ಬಳಿ ಹೇಳಿದಾಗ ಜನರು ನೀವು ಮೊದಲೇ ಕುರುಡ ಹೊರದೇಶದಲ್ಲಿ ಕಣ್ಣು ಕಾಣಿಸದೆ ಹೇಗೆ ಜೀವಿಸುತ್ತಿಯ ಎಂದು ಕೇಳಿದಾಗ ಮನೋಜ್ ಉತ್ತರಿಸಿ ನಾನು ಕುರುಡ ಅಲ್ಲ ನನಗೆ ಆಕ್ಸಿಡೆಂಟ್ ಆದಾಗ ಕಣ್ಣು ಏನು ಆಗಿರಲಿಲ್ಲ ನನ್ನ ಹೆಂಡತಿಪ್ರಿಯ ತನ್ನ ಸೌಂದರ್ಯ ಹಾಳಾದರೆ ಬಿಟ್ಟು ಹೋಗುತ್ತಾನೆ ಎಂದು ಯೋಚಿಸುತ್ತಿದ್ದಳು ಹಾಗಾಗಿ ನನ್ನ ಹೆಂಡತಿಯ ಖುಷಿಗಾಗಿ ಇಷ್ಟು ವರ್ಷಗಳ ಕಾಲ ನಾನು ಕುರುಡನಂತೆ ನಾಟಕ ಮಾಡಿದೆ. ನಾನು ಪ್ರಿಯ ಸೌಂದರ್ಯವನ್ನು ನೋಡಿ ಮದುವೆಯಾಗಲಿಲ್ಲ ಆಕೆ ನನ್ನ ಪ್ರಾಣವಾಗಿದ್ದಳು ಎಂದು ಹೇಳಿದಾಗ ಊರಿನವರೆಲ್ಲ ಮನೋಜ್ ಟ್ರೂ ಲವ್ ಸ್ಟೋರಿ ಕೇಳಿ ಖುಷಿ ಪಟ್ಟರು

Leave a comment

Your email address will not be published. Required fields are marked *