ಸಿನಿಮಾ ಶೂಟಿಂಗ್ ಮಾಡುವುದು ಎಂದರೆ ಅಷ್ಟು ಸುಲಭದ ಮಾತಲ್ಲ ಸಾಹಸ ದೃಶ್ಯಗಳನ್ನು ಮಾಡುವಾಗ ಪ್ರಾಣಕ್ಕೆ ಕುತ್ತು ಬಂದು ಒದಗಬಹುದು ಸರಿಯಾದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದೆ ಎಷ್ಟೋ ಜನ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಅಂತಹದ್ದೇ ಒಂದು ಸಂದರ್ಭದಲ್ಲಿ ಸಾವಿನ ದವಡೆಯನ್ನು ನಟಿ ರಾಧಿಕಾ ಪಂಡಿತ್ ಮುಟ್ಟಿ ಬಂದಿದ್ದಾರೆ.

 

 

ಅಜಯ್ ರಾವ್ ಹಾಗೂ ನಟಿ ರಾಧಿಕಾ ಪಂಡಿತ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದ “ಕೃಷ್ಣನ್ ಲವ್ ಸ್ಟೋರಿ” ಸಿನಿಮಾದಲ್ಲಿ ಕ್ಲೈಮ್ಯಾಕ್ಸ್ ಶೂಟಿಂಗ್ ನಡೆಯುತ್ತಿದ್ದ ಸಂದರ್ಭ ಹರಿಯುವ ನದಿಯಲ್ಲಿ ತೆಪ್ಪದಲ್ಲಿ ಹೋಗುವ ರಾಧಿಕಾ ಪಂಡಿತ್ ಜಲಪಾತದ ಕೆಳಗೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವ ಸೀನ್ ಒಂದು ಆ ಚಿತ್ರದಲ್ಲಿ ಶೂಟಿಂಗ್ ನಡೆಯುತ್ತಿತ್ತು.

 

 

ಸೀನ್ ಪ್ರಕಾರ ಕೃಷ್ಣನ್ ಲವ್ ಸ್ಟೋರಿ ಸಿನಿಮಾದಲ್ಲಿ ನಟಿ ರಾಧಿಕಾ ಪಂಡಿತ್ ತೇಪ್ಪವನ್ನು ಓಡಿಸಿಕೊಂಡು ಹೋಗಬೇಕಾಗಿತ್ತು ಒಂದೆರಡು ದಿನ ತೆಪ್ಪ ಓಡಿಸುವುದು ಹೇಗೆ ಎಂದು ನಿಂತ ನೀರಿನಲ್ಲಿ ರಾಧಿಕಾ ಪಂಡಿತ್ ರವರಿಗೆ ಟ್ರೈನಿಂಗ್ ಕೂಡ ಕೊಡಲಾಗಿತ್ತು ಆದರೆ ಸೀನ್ ಮಾಡಬೇಕಾಗಿದ್ದಿದ್ದು ರಭಸವಾಗಿ ಹರಿಯುವ ನೀರಿನಲ್ಲಿ ಈ ಸೀನನ್ನು ಫೈಟ್ ಮಾಸ್ಟರ್ ರವಿವರ್ಮ ಡೈರೆಕ್ಟ್ ಮಾಡುತ್ತಿದ್ದರು.

 

 

ಈ ಸೀನ್ ಅನ್ನು ಶಿವನಸಮುದ್ರದ ಬರಚುಕ್ಕಿ ಜಲಪಾತದ ಬಳಿ ಚಿತ್ರೀಕರಿಸಲಾಗುತ್ತಿತ್ತು ಬೆಳಗ್ಗೆ ಕ್ಲೈಮ್ಯಾಕ್ಸ್ ಶೂಟಿಂಗ್ ಶುರುವಾಯಿತು ತೆಪ್ಪದಲ್ಲಿ ಕುಳಿತಿರುವ ರಾಧಿಕಾ ಪಂಡಿತ್ ತೆಪ್ಪವನ್ನು ಓಡಿಸಿಕೊಂಡು ಹೋಗುತ್ತಿದ್ದರು ಆದರೆ ತೆಪ್ಪಕ್ಕೇ ತೂತು ಬಿದ್ದ ಕಾರಣ ತೆಪ್ಪಕ್ಕೆ ನೀರು ನುಗ್ಗಿತ್ತು ತೆಪ್ಪದಲ್ಲಿ ನೀರು ಜಾಸ್ತಿಯಾದಾಗ ತೇಪ್ಪ ಉಲ್ಟಾ ಬಿತ್ತು.

 

 

ಆಗ ರಾಧಿಕಾ ಪಂಡಿತ್ ನೀರಿನಲ್ಲಿ ಬಿದ್ದರು ದುರಾದೃಷ್ಟಕ್ಕೆ ನೀರು ತುಂಬ ರಭಸವಾಗಿ ಹರಿಯುತ್ತಿತ್ತು ರಾಧಿಕಾ ಪಂಡಿತ್ ಕೈ ಎತ್ತಿ ಸಹಾಯಕ್ಕಾಗಿ ಕೂಗುತ್ತಿದ್ದರು ಅಲ್ಲಿದ್ದವರಿಗೆ ಒಂದು ಕ್ಷಣ ಶಾಕ್ ಆಗಿತ್ತು ಇದನ್ನು ನೋಡಿದ ರಾಧಿಕಾ ಪಂಡಿತ್ ತಾಯಿ ಅಳುತ್ತಾ ಕುಳಿತುಬಿಟ್ಟರು ನೀರು ರಬಸವಾಗಿ ಚಲಿಸುತ್ತಿದ್ದ ಕಾರಣ ಏನು ಮಾಡಲು ಆಗದಂತ ಪರಿಸ್ಥಿತಿಯಲ್ಲಿ ಎಲ್ಲರೂ ನಿಂತಿದ್ದರು.

 

 

ಆಗ ಸ್ವಲ್ಪ ಧೈರ್ಯ ಮಾಡಿ ಐದು ಜನ ಸ್ಟಂಟ್ ಅಸಿಸ್ಟೆಂಟ್ಗಳು ನೀರಿಗೆ ಧುಮುಕಿದರು ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ರಾಧಿಕಾ ಪಂಡಿತ್ ರವರನ್ನು ಹಿಡಿದು ನೀರಿನಿಂದ ಆಚೆ ಕರೆ ತಂದರು ಒಂದು ಚೂರು ಎಡವಿದ್ದರೂ ದೊಡ್ಡ ದುರಂತವೇ ನಡೆದು ಹೋಗುತ್ತಿತ್ತು ಈ ದುರಂತವನ್ನು ನೆನಪಿಸಿಕೊಂಡರೆ ಈಗಲೂ ಭಯವಾಗುತ್ತದೆ ಎಂದು ರಾಧಿಕಾ ಪಂಡಿತ್ ಸಂದರ್ಶನ ಒಂದರಲ್ಲಿ ಕೇಳಿಕೊಂಡಿದ್ದಾರೆ.

Leave a comment

Your email address will not be published. Required fields are marked *