ವೀಕೆಂಡ್ ವಿತ್ ರಮೇಶ್ (weekend with Ramesh)ಕಾರ್ಯಕ್ರಮದಲ್ಲಿ ಅತಿಥಿಯಾಗಿ ಆಗಮಿಸಿದ ಜೈ ಜಗದೀಶ್ ರವರು(Jai Jagadish) ತಮ್ಮ ಬಾಲ್ಯದ ಬಗ್ಗೆ ತಾವು ಮೊದಲು ಚಿತ್ರರಂಗಕ್ಕೆ ಪ್ರವೇಶ ಮಾಡಿದ ಬಗ್ಗೆ ಮಾತನಾಡುತ್ತಾ ತಮ್ಮ ಮೊದಲ ಪತ್ನಿಯ(Jai Jagadish first wife) ಬಗ್ಗೆ ಮಾತನಾಡಿದ್ದಾರೆ. ಇಲ್ಲಿಯವರೆಗೂ ಎಲ್ಲಿಯೂ ಮೊದಲ ಪತ್ನಿಯ ಬಗ್ಗೆ ಮನ ಬಿಚ್ಚಿ ಮಾತನಾಡದ ಜೈ ಜಗದೀಶ್ ಮೊದಲ ಬಾರಿಗೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಮೊದಲ ಪತ್ನಿಯ ಬಗ್ಗೆ ಹೇಳಿಕೊಂಡಿದ್ದಾರೆ.
ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಜೈ ಜಗದೀಶ್ ರವರ ಮೊದಲ ಪತ್ನಿಯ ವಿಚಾರವನ್ನು ಜೈ ಜಗದೀಶ್ ರವರ ಎರಡನೆಯ ಪತ್ನಿ ವಿಜಯಲಕ್ಷ್ಮಿ(Jai Jagadish second wife Vijayalakshmi) ಪ್ರಸ್ತಾಪ ಮಾಡಿದ್ದಾರೆ. ಮಾಡಿರುವ ತಪ್ಪಿಗೆ ಪಶ್ಚಾತಾಪಕ್ಕಿಂತ ಶಿಕ್ಷೆ ಮತ್ತೊಂದು ಇಲ್ಲ ಅವರ ಜೀವನದಲ್ಲಿ ಮಾಡಿಕೊಂಡಿರುವ ಯಡವಟ್ಟಿಗೆ ಇಂದಿಗೂ ಅವರು ಪಶ್ಚಾತಾಪ ಪಡುತ್ತಿದ್ದಾರೆ.
ಜೈ ಜಗದೀಶ್ 1954 ರಲ್ಲಿ(Jai Jagadish date of birth) ಜನಿಸಿದರು ಬಾಲ್ಯದಿಂದಲೇ ಸಿನಿಮಾ ಬಗ್ಗೆ ಸಾಕಷ್ಟು ಕನಸುಗಳನ್ನು ಇಟ್ಟುಕೊಂಡಿದ್ದರು ಮೊದಲು ನಾಟಕಗಳಲ್ಲಿ ಅಭಿನಯಿಸುತ್ತಿದ್ದರು “ಫಲಿತಾಂಶ” ಎನ್ನುವ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು ಗಾಳಿಮಾತು ,ಬೆಂಕಿಯಲ್ಲಿ ಅರಳಿದ ಹೂವು, ಬಂಧನ (bandhana movie), ಮದುವೆ ಮಾಡು ತಮಾಷೆ ನೋಡು ಮುಂತಾದ ಸಾಲು ಸಾಲು ಸಿನಿಮಾದಲ್ಲಿ ನಟಿಸಿದ್ದಾರೆ. ಒಳ್ಳೆಯ ಸಿನಿಮಾಗಳಲ್ಲಿ ನಟಿಸುತ್ತಿದ್ದ ಜೈ ಜಗದೀಶ್ ಗೆ ಅಹಂಕಾರ ಕೂಡ ಬರುತ್ತದೆ ಹಣ ಐಶ್ವರ್ಯ ಎಲ್ಲ ಇರುತ್ತದೆ. 1980 ರಲ್ಲಿ ರೂಪ ಎನ್ನುವವರು ಪರಿಚಯವಾಗುತ್ತಾರೆ. ಪರಸ್ಪರ ಪ್ರೀತಿಸಿ ಮದುವೆಯಾಗೋಣ(Jai Jagadish first marriage) ಎಂದು ಇಬ್ಬರು ನಿರ್ಧಾರ ತೆಗೆದುಕೊಳ್ಳುತ್ತಾರೆ. ಆದರೆ ಮನೆಯವರಿಂದ ಬಾರಿ ವಿರೋಧ ವ್ಯಕ್ತವಾಗುತ್ತದೆ.
ಈ ವಿಚಾರ ತಿಳಿದು ವಿಷ್ಣುವರ್ಧನ್(Dr vishnuvardhan) ಎಂಟ್ರಿ ಕೊಡುತ್ತಾರೆ. ಜೈ ಜಗದೀಶ್ ಹಾಗೂ ವಿಷ್ಣುವರ್ಧನ್ ಉತ್ತಮ ಸ್ನೇಹಿತರಾಗಿದ್ದರು ವಿಷ್ಣುವರ್ಧನ್ ಮುಂದೆ ನಿಂತು ಜೈ ಜಗದೀಶ್ ಹಾಗೂ ರೂಪ ರವರ ಮದುವೆಯನ್ನು ಮಾಡಿಸುತ್ತಾರೆ. ನಂತರ ಅವರಿಗೆ ಅರ್ಪಿತ ಎನ್ನುವ ಮಗಳು(Jai Jagadish first wife daughter) ಕೂಡ ಜನಿಸುತ್ತಾರೆ ಮದುವೆಯಾಗಿ 6 ವರ್ಷದ ನಂತರ ಇಬ್ಬರ ನಡುವೆ ಜಗಳ ಶುರುವಾಗಿ ಜೈ ಜಗದೀಶ್ ಮನೆ ಬಿಟ್ಟು ಹೋಗುತ್ತಾರೆ.
ಮಗಳು ಇದ್ದ ಕಾರಣ ಜೈ ಜಗದೀಶ್ ರೂಪಾಗೆ ಡಿವೋರ್ಸ್(divorce) ನೀಡಿರಲಿಲ್ಲ ರೂಪ ವಿಚ್ಛೇದನಕ್ಕೆ ಸಹಿ ಹಾಕಿಸಿಕೊಂಡು ಹೋಗುತ್ತಾರೆ. ಮಗಳು ಅಪ್ಪನಿಂದ ದೂರವಾಗುತ್ತಾಳೆ ಹಲವಾರು ವರ್ಷಗಳ ನಂತರ ಮಗಳು ಮತ್ತೆ ಸಿಗುತ್ತಾಳೆ ಆದರೆ ಮಗಳ ಸಂಸಾರವು ಕೂಡ ತುಂಬಾ ದಿನ ಉಳಿಯುವುದಿಲ್ಲ ಮಗಳಿಗೂ ಡಿವೋರ್ಸ್ ಆಗುತ್ತದೆ.
ಹಲವು ವರ್ಷಗಳ ನಂತರ ರಾಜೇಂದ್ರ ಬಾಬು (Rajendra Babu)ರವರ ತಂಗಿ ವಿಜಯಲಕ್ಷ್ಮಿಯನ್ನು ಮದುವೆಯಾಗುತ್ತಾರೆ ರಾಜೇಂದ್ರ ಬಾಬು ಜೈ ಜಗದೀಶ್ ಸ್ನೇಹಿತರಾಗಿದ್ದರು. ವಿಜಯಲಕ್ಷ್ಮಿ ಪರಿಚಯವಾಗಿ ಪ್ರೀತಿಸಿ ಮದುವೆಯಾಗುತ್ತಾರೆ(Jai Jagdish second marriage). ಜೈ ಜಗದೀಶ್ ವಿಜಯಲಕ್ಷ್ಮಿ ರವರನ್ನು ಮದುವೆಯಾಗಿರುವ ವೇಳೆ ತಮ್ಮ ಬದುಕಿನಲ್ಲಿ ನಡೆದ ಘಟನೆಗಳನ್ನು ವಿವರಿಸಿ ಹೇಳುತ್ತಾರೆ. ವಿಜಯಲಕ್ಷ್ಮಿ ಒಪ್ಪಿಕೊಂಡ ನಂತರ ಇಬ್ಬರೂ ಮದುವೆಯಾಗುತ್ತಾರೆ. ಇವರಿಗೆ ಮೂವರು ಹೆಣ್ಣು(Jai Jagadish three daughters) ಮಕ್ಕಳಿದ್ದಾರೆ ಮೊದಲ ಪತ್ನಿ ಮಗಳು ಅರ್ಪಿತ ಕೂಡ ಇವರ ಜೊತೆಯಲ್ಲಿ ತುಂಬಾ ಸಂತೋಷವಾಗಿ ಇದ್ದಾರೆ.