Weekend With Ramesh: ಕನ್ನಡದ ಬಹುನಿರೀಕ್ಷಿತ ಕಿರುತೆರೆ ಕಾರ್ಯಕ್ರಮ ಬಂದಿದೆ. ರಮೇಶ್ ಅರವಿಂದ್ ಅವರ ‘ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮ ಶೀಘ್ರದಲ್ಲೇ ಪ್ರಸಾರವಾಗಲಿದೆ, ಪ್ರೋಮೋ ಬಿಡುಗಡೆಯಾಗಿದೆ. ರಮೇಶ್ ಅರವಿಂದ್ ಜೊತೆ ನಟಿ ರಾಧಿಕಾ ಚೇತನ್ ಇರುವ ಪ್ರೋಮೋವನ್ನು ವಾಹಿನಿ ಬಿಡುಗಡೆ ಮಾಡಿದೆ.

 

 

ಇಷ್ಟೆಲ್ಲಾ ಫೇಮಸ್ ಆಗಿದ್ದ ಈ ಶೋ ಕಳೆದ ಮೂರು ವರ್ಷಗಳಿಂದ ತೆರೆಮೇಲೆ ಕಾಣದೇ ಜನ ಬೇಸರಗೊಂಡಿದ್ದರು. ಆದರೆ ಈಗ ಹಾಗಲ್ಲ. ಇನ್ನು ಕೆಲವೇ ದಿನಗಳಲ್ಲಿ ವೀಕೆಂಡ್ ವಿತ್ ರಮೇಶ್ ಸೀಸನ್ 5 ಆರಂಭವಾಗಲಿದೆ.

ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮವನ್ನು ಎವರ್ ಗ್ರೀನ್ ಸ್ಟಾರ್ ರಮೇಶ್ ಅರವಿಂದ್ ನಡೆಸಿಕೊಟ್ಟರು. ರಮೇಶ್ ಅವರ ಕನ್ನಡ ಭಾಷೆಯ ಹಿಡಿತ, ಎಲ್ಲವನ್ನೂ ಹೋಸ್ಟ್ ಮಾಡುವ ರೀತಿ ಸೂಪರ್. ರಮೇಶ್ ಅವರೇ ಈ ಕಾರ್ಯಕ್ರಮವನ್ನು ನಡೆಸಿಕೊಡುವುದು ಸರಿಯಾಗಿದೆ. ಇದೀಗ ಮತ್ತೆ ಕಿರುತೆರೆಗೆ ಬರಲಿದ್ದು, ಈ ಬಾರಿಯೂ ರಮೇಶ್ ಅವರೇ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಕಾರ್ಯಕ್ರಮದಲ್ಲಿ ಸಾಧಕರನ್ನು ಪರಿಚಯಿಸಲಾಗುವುದು. ಈ ಸುದ್ದಿ ಕೇಳಿದ ನಂತರ ಕಾರ್ಯಕ್ರಮವನ್ನು ನೋಡಲು ಜನ ಕಾಯುತ್ತಿದ್ದಾರೆ.

 

 

ಪ್ರೋಮೋ ನೋಡಿದ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾಘವೇಂದ್ರ ಹುಣಸೂರು ಅವರ ಪೋಸ್ಟ್‌ಗೆ ರಮೇಶ್ ಅರವಿಂದ್ ಪ್ರತಿಕ್ರಿಯಿಸಿದ್ದು, ಮರಳಿ ಬಂದಿದ್ದಕ್ಕೆ ಖುಷಿಯಾಗಿದೆ.

 

 

ಮೂಲಗಳ ಪ್ರಕಾರ ಮೊದಲ ಸಂಚಿಕೆಯಲ್ಲಿ ಬರಿ ರಿಷಬ್ ಶೆಟ್ಟಿ ಇರಲಿದ್ದಾರೆ. ಎರಡನೇ ಸಂಚಿಕೆಯಲ್ಲಿ ಡಾಲಿ ಧನಂಜಯ್ ಇರಲಿದ್ದಾರೆ. ಇಬ್ಬರ ಚಿತ್ರೀಕರಣ ಮುಗಿದಿದ್ದು, ಕಳೆದ ವಾರ ಪ್ರೋಮೋ ಶೂಟ್ ಕೂಡ ಮುಗಿದಿದೆ ಎಂದು ಹೇಳಲಾಗುತ್ತಿದೆ.

Leave a comment

Your email address will not be published. Required fields are marked *