ಕಳೆದ ಒಂದು ವಾರದ ಕಿಚ್ಚ ಸುದೀಪ್(Kiccha sudeep) ಹಾಗೂ ದರ್ಶನ್(Darshan tugudeep) ಸಾಕಷ್ಟು ಸುದ್ದಿಯಲ್ಲಿದ್ದಾರೆ. ಕಳೆದ ವಾರವಷ್ಟೇ ಡಿ ಬಾಸ್ ದರ್ಶನ್(D boss) ತಮ್ಮ ಕ್ರಾಂತಿ ಸಿನಿಮಾದ “ಬೊಂಬೆ ಬೊಂಬೆ” ಹಾಡನ್ನು ರಿಲೀಸ್ ಮಾಡಲು ಹೋಗಿರುವ ಸಮಯದಲ್ಲಿ ಕಿಡಿಗೇಡಿಗಳು ಡಿ ಬಾಸ್ ದರ್ಶನ್ ಮೇಲೆ ಚಪ್ಪಲಿಯನ್ನು (hospet incident)ಎಸೆದಿದ್ದಾರೆ. ಈ ವಿಚಾರವೂ ಎಲ್ಲರಿಗೂ ಕೂಡ ತಿಳಿದೇ ಇದೆ. ಇದೀಗಾಗಲೇ ಈ ಘಟನೆಯನ್ನು ಖಂಡಿಸಿ ಕನ್ನಡ ಚಿತ್ರರಂಗದ ಖ್ಯಾತ ನಟ ನಟಿಯರು ರಾಜಕೀಯ ನಾಯಕರು (polititions)ಕೂಡ ದರ್ಶನ್ ಗೆ ಬೆಂಬಲವನ್ನು ಸೂಚಿಸಿದ್ದಾರೆ.
ಹಿಂದೆ ಅಂಬರೀಶ್ (ambarish)ಹಾಗೂ ವಿಷ್ಣುವರ್ಧನ್(vishnuvardhan) ರೀತಿ ಕುಚುಕು ಗೆಳೆಯರಾಗಿದ್ದ ಡಿ ಬಾಸ್ ದರ್ಶನ್ ಹಾಗೂ ಕಿಚ್ಚ ಸುದೀಪ್ ಯಾವುದೋ ಕಾರಣಾಂತರಗಳಿಂದ ದೂರ ದೂರವಾಗಿದ್ದರು ಆದರೆ ಇದೀಗ ಹೊಸಪೇಟೆಯ ಘಟನೆಗೆ ಕಿಚ್ಚ ಸುದೀಪ್ ತಮ್ಮ ವೈಶಮ್ಯವನ್ನು ಮರೆತು ತಮ್ಮ ಗೆಳೆತನವನ್ನು ಮೆರೆದಿದ್ದಾರೆ. ಇಷ್ಟೇ ಅಲ್ಲದೆ ಡಿ ಬಾಸ್ ದರ್ಶನ್ ರವರಿಗೆ ಹೊಸಪೇಟೆಯ ಸಂದರ್ಭಕ್ಕೆ ಬೆಂಬಲವನ್ನು ಕೂಡ ಸೂಚಿಸಿ ದೀರ್ಘ ಪತ್ರ ಒಂದನ್ನು ಬರೆದಿದ್ದಾರೆ.
ಕಿಚ್ಚ ಸುದೀಪ್ ದರ್ಶನ್ ನನ್ನು ಉದ್ದೇಶಿಸಿ ದೀರ್ಘ ಪತ್ರವನ್ನು ಬರೆದಿರುವುದನ್ನು ನೋಡಿದ ಅಭಿಮಾನಿಗಳು ಕೂಡ ಖುಷಿಪಟ್ಟಿದ್ದಾರೆ. ಅಭಿಮಾನಿಗಳು ಕೂಡ ಕಿಚ್ಚ ಸುದೀಪ್ ದರ್ಶನ್ ಒಂದಾಗಬೇಕು ಚಂದನವನವನ್ನು ಬೆಳಗಬೇಕು ಎಂದು ಆಶಿಸುತ್ತಿದ್ದಾರೆ. ಒಂದು ಕಾಲದ ಆಪ್ತ ಸ್ನೇಹಿತ ಇಂದು ತನಗಾದ ಅನ್ಯಾಯದ ಬಗ್ಗೆ ನಾಲ್ಕು ಒಳ್ಳೆಯ ಮಾತುಗಳನ್ನು ಆಡಿದ್ದಕ್ಕೆ ಕೃತಜ್ಞತೆಯಿಂದ ದರ್ಶನ್ ಕೂಡ ಧನ್ಯವಾದಗಳನ್ನು ತಿಳಿಸಿದ್ದಾರೆ.
ದರ್ಶನ್ ಹಾಗೂ ಕಿಚ್ಚ ಒಂದಾಗಲಿ ಎಂದು ಅವರ ಅಭಿಮಾನಿಗಳು (kiccha fans) (D boss fans)ಕೂಡ ಆಶಿಸಿ ಹೋರಾಟವನ್ನು ಕೂಡ ನಡೆಸುತ್ತಿದ್ದಾರೆ. ಈ ಬೆನ್ನಲ್ಲೇ ಚಂದನವನದಲ್ಲಿ ಮತ್ತೊಂದು ಸುದ್ದಿ ಹರಿದಾಡುತ್ತಿದ್ದು ದರ್ಶನ್ ರವರ ಕ್ರಾಂತಿ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭಕ್ಕೆ ಕಿಚ್ಚ ಸುದೀಪ್ ಅತಿಥಿಯಾಗಿ ಆಗಮಿಸುತ್ತಾರೆ ಎಂದು ಹೇಳಲಾಗುತ್ತಿದೆ.
ಇದೀಗಾಗಲೇ ಚಿತ್ರದಂಡ ಸುದೀಪ್ ರವರನ್ನು ಸಂಪರ್ಕಿಸಿದ್ದು ಸುದೀಪ್ ಕ್ರಾಂತಿ ಸಿನಿಮಾದ ಟ್ರೈಲರ್(Kranti trailer launch) ಲಾಂಚ್ ಬಿಡುಗಡೆಯ ದಿನ ಬರುತ್ತಾರೆ ಎನ್ನುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಕೂಡ ವೈರಲಾಗುತ್ತಿದೆ. ಇದೀಗ ಡಿ ಬಾಸ್ ದರ್ಶನ್ ಹಾಗೂ ಕಿಚ್ಚ ಸುದೀಪ್ ಅಭಿಮಾನಿಗಳ ಆಸೆಯಂತೆ ಒಂದಾಗಿದ್ದು ನಾವು ಇಬ್ಬರಲ್ಲ ಒಬ್ಬರೇ ಎಂದು ಡಿ ಬಾಸ್ ದರ್ಶನ್ ಹೇಳುತ್ತಿದ್ದಾರೆ.