ಗುರು ಬ್ರಹ್ಮ ಗುರು ವಿಷ್ಣು ಗುರು ದೇವ ಮಹೇಶ್ವರಃ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ ಈ ಶ್ಲೋಕವನ್ನು ನಾವು ಚಿಕ್ಕವರಿದ್ದಾಗಿನಿಂದಲೂ ಕೇಳಿಕೊಂಡು ಜೀವಿಸುತ್ತಿದ್ದೇವೆ. ಗುರು ಎಂದರೆ ದೇವರ ಸ್ಥಾನದಲ್ಲಿಟ್ಟು ಪೂಜಿಸುತ್ತಾರೆ. ಗುರು ನಾವು ಚಿಕ್ಕಮಗು ಇದ್ದಾಗಿನಿಂದ ಹಿಡಿದು ದೊಡ್ಡವರಾಗಿ ನಮ್ಮ ಕಾಲ ಮೇಲೆ ನಾವು ನಿಂತು ಕೆಲಸಕ್ಕೆ ಹೋಗುವವರೆಗೂ ಮಾರ್ಗದರ್ಶನವನ್ನು ನೀಡುತ್ತಾ ನಮ್ಮ ಬೆನ್ನೆಲುಬಾಗಿ ನಿಂತಿರುತ್ತಾರೆ. ಹಾಗಾಗಿಯೇ ಗುರುಗಳನ್ನು ದೇವರ ಸ್ಥಾನದಲ್ಲಿ ಇಟ್ಟು ಪೂಜೆ ಮಾಡುತ್ತೇವೆ.
ಗುರು ಹಾಗೂ ಮಕ್ಕಳ ನಡುವೆ ಅದೆಷ್ಟೇ ಪ್ರೀತಿ ಗುರು ಶಿಷ್ಯರ ಸಂಬಂಧ ಬಾಂಧವ್ಯ ಇದ್ದರೂ ಕೂಡ ಗುರು ಶಿಷ್ಯರ ನಡುವೆ ಒಂದು ಅಂತರ ಇದ್ದೇ ಇರುತ್ತದೆ ಏಕೆಂದರೆ ಅವರಿಬ್ಬರ ನಡುವೆ ಇರುವ ಪ್ರೀತಿ ಗೌರವಪೂರ್ಣವಾಗಿರುತ್ತದೆ. ನಮ್ಮ ಗುರುಗಳು ಎಲ್ಲೇ ಕಾಣಿಸಿದರು ಸಿಕ್ಕರೂ ಕೂಡ ಅವರಿಗೆ ನಮಸ್ಕಾರ ಹೇಳಬೇಕು ಎಂಬುದನ್ನು ನಾವು ಚಿಕ್ಕ ವಯಸ್ಸಿನಿಂದಲೂ ಕೇಳಿಕೊಂಡು ಬರುತ್ತಿದ್ದೇವೆ.
ಮನೆಯೇ ಮೊದಲ ಪಾಠಶಾಲೆ ತಾಯಿಯೇ ಮೊದಲ ಗುರು ಎಂದು ಹೇಳುತ್ತಾರೆ. ತಾಯಿ ಚಿಕ್ಕ ವಯಸ್ಸಿನಿಂದ ನಮಗೆ ಅಕ್ಷರಗಳನ್ನು ಕಲಿಸುತ್ತಾಳೆ. ತದನಂತರ ನಾವು ಶಾಲೆಯಲ್ಲಿ ಗುರುಗಳ ಮಾರ್ಗದರ್ಶನವನ್ನು ಪಡೆದು ಜೀವನದಲ್ಲಿ ಏನಾದರೂ ಸಾಧಿಸಬೇಕು ಎನ್ನುವ ಗುರಿಯನ್ನು ಹೊತ್ತು ನಡೆಯುತ್ತೇವೆ ಗುರಿ ಯಾವುದು ಎನ್ನುವುದಕ್ಕಿಂತ ನಾವು ಗುರಿಯನ್ನು ಹೇಗೆ ತಲುಪುತ್ತೇವೆ ಅದಕ್ಕೆ ನಮಗೆ ಶಿಕ್ಷಕರು ಹೇಗೆ ನೆರವಾಗುತ್ತಾರೆ ಎನ್ನುವುದು ತುಂಬಾ ಮುಖ್ಯವಾಗಿದೆ.
ಇಂದು ಶಾಲಾ ಶಿಕ್ಷಕರು ಒಬ್ಬರು ತಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಡಾನ್ಸ್ ಹೇಳಿ ಕೊಟ್ಟಿದ್ದಾರೆ ಈ ವಿಡಿಯೋ ಇದೀಗ ಎಲ್ಲಾ ಕಡೆ ವೈರಲ್ ಆಗುತ್ತಿದ್ದು ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ನೆಟ್ಟಿಗರು ಕೂಡ ಈ ಶಿಕ್ಷಕಿ ಅಖಾಡಕ್ಕೆ ಇಳಿದು ಮಕ್ಕಳಿಗೆ ಡಾನ್ಸ್ ಹೇಳಿ ಕೊಡುತ್ತಿರುವುದನ್ನು ನೋಡಿ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ.