ಇತ್ತೀಚಿಗಷ್ಟೇ ಅಂಬರೀಶ್ ಹಾಗೂ ಸುಮಲತಾ ದಂಪತಿಗಳ ಮಗ ಅಭಿಷೇಕ್ ಅಮರೇಶ್ವರ ಎಂಗೇಜ್ಮೆಂಟ್ ಅವಿವಾರ ಅವರ ಜೊತೆ ನಡೆದಿತ್ತು ಅಭಿಷೇಕ ಅಂಬರೀಶ್ 36 ಲಕ್ಷದ ವಜ್ರದ ಉಂಗುರವನ್ನು ಅವಿವಾ ಬೆರಳಿಗೆ ತೊಡಿಸಿದ್ದರು ಅಭಿಷೇಕ್ ಹಾಗೂ ಅವಿಭಾ ಒಳ್ಳೆಯ ಜೋಡಿ ಎಂದು ನೆಟ್ಟಿಗರು ಕೂಡ ಅಭಿಪ್ರಾಯ ಪಟ್ಟಿದ್ದರು ಅವಿವ ಅವರಿಗೆ ಕನ್ನಡ ಬರುತ್ತದೆಯೇ ಎಂದು ಸಾಕಷ್ಟು ಮಂದಿ ಪ್ರಶ್ನಿಸಿದ್ದರು ಇದೀಗ ಅಭಿಷೇಕ್ ರವರ ಭಾವಿ ಪತ್ನಿ ಅವಿವಾ ಕನ್ನಡದಲ್ಲಿ ಮಾತನಾಡಿರುವ ವಿಡಿಯೋ ವೈರಲಾಗುತ್ತಿದೆ.
ಈ ವಿಡಿಯೋದ ಎಲ್ಲಾ ಕಡೆ ನಟ ಅಂಬರೀಶ್ ಫೋಟೋಗಳು ಕಾಣಿಸುತ್ತಿದ್ದು ಸ್ಯಾಂಡಲ್ ವುಡ್ ಅಲ್ಲಿ ಸಾಕಷ್ಟು ಜೋಡಿಗಳು ಒಬ್ಬರ ಹಿಂದೆ ಒಬ್ಬರಂತೆ ಸಾಲುಗಟ್ಟಿ ಮದುವೆಯಾಗುತ್ತಿದ್ದಾರೆ. ಕಳೆದ ವಾರವಷ್ಟೇ ಅದಿತಿ ಪ್ರಭುದೇವ ಅವರು ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದರು ನಟ ವಸಿಷ್ಟ ಸಿಂಹ ಹಾಗೂ ನಟಿ ಹರಿಪ್ರಿಯಾ ರವರು ಯಾರಿಗೂ ಗೊತ್ತಿಲ್ಲದಂತೆ ಗುಟ್ಟಾಗಿ ತಮ್ಮ ಎಂಗೇಜ್ಮೆಂಟ್ ಕೂಡ ಮಾಡಿಕೊಂಡಿದ್ದಾರೆ. ಇದರ ಬೆನ್ನೆಲುದೆ ಅಭಿಷೇಕ ಅಂಬರೀಶ್ ಹಾಗೂ ಅವಿವ ತಮ್ಮ ನಿಶ್ಚಿತಾರ್ಥವನ್ನು ಅದ್ದೂರಿಯಾಗಿ ಮಾಡಿಕೊಂಡಿದ್ದಾರೆ.
ಅವಿವಾ ಹಾಗೂ ಅಭಿಷೇಕ್ ಕಳೆದ ನಾಲ್ಕು ವರ್ಷಗಳಿಂದ ಪ್ರೀತಿಸುತಿದ್ದರು ಇವರಿಬ್ಬರೂ ಕೂಡ ತಮ್ಮ ಕುಟುಂಬದವರ ಒಪ್ಪಿಗೆಯನ್ನು ಪಡೆದು ತಮ್ಮ ನಿಶ್ಚಿತಾರ್ಥವನ್ನು ಅದ್ದೂರಿಯಾಗಿ ಬೆಂಗಳೂರಿನ ಖಾಸಗಿ ಹೋಟೆಲಲ್ಲಿ ಮಾಡಿಕೊಂಡಿದ್ದಾರೆ. ಅಭಿಷೇಕ್ ಹಾಗೂ ಅವಿವ ಬಿದ್ದಪ್ಪ 2023ರ ಸಂಕ್ರಾಂತಿ ಹಬ್ಬದಂದು ಮದುವೆಯಾಗುತ್ತಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಅವಿವ ವಿದ್ದಪ್ಪ ಹಾಗೂ ಅಭಿಷೇಕ ಅಂಬರೀಶ್ ಎಂಗೇಜ್ಮೆಂಟ್ ಕಾರ್ಯಕ್ರಮಕ್ಕೆ ನಟ ಯಶ್ ಹಾಗೂ ರಾಧಿಕಾ ಪಂಡಿತ್ ದಂಪತಿಗಳು, ರಾಕ್ಲೈನ್ ವೆಂಕಟೇಶ್, ಹಲವಾರು ಸ್ಯಾಂಡಲ್ವುಡ್ ತಾರೆಯರು ಬಂದು ಹಾರೈಸಿದ್ದರು ರಾಜಕೀಯ ವ್ಯಕ್ತಿಗಳಾದ ಸಚಿವ ಆರ್ ಅಶೋಕ್, ಅಶ್ವಥ್ ನಾರಾಯಣ್, ಸುಧಾಕರ್ ಮುಂತಾದ ರಾಜಕೀಯ ಗಣ್ಯರು ಕೂಡ ಅವಿವಾ ಹಾಗೂ ಅಭಿಷೇಕ್ ಎಂಗೇಜ್ಮೆಂಟ್ ಗೆ ಬಂದಿದ್ದರು.
ಅಭಿಷೇಕ ಅಂಬರೀಶ್ ಎಂಗೇಜ್ಮೆಂಟ್ ನಲ್ಲಿ ಎಲ್ಲಿ ನೋಡಿದರೂ ಅಂಬರೀಶ್ ರವರ ಫೋಟೋಗಳೇ ರಾರಾಜಿಸುತ್ತಿದ್ದವು ಇದನ್ನು ನೋಡಿದ ಅಭಿಮಾನಿಗಳು ಕೂಡ ಇಂದು ಅಂಬರೀಶ್ ಬದುಕಿದ್ದರೆ ತಮ್ಮ ಮಗನ ನಿಶ್ಚಿತಾರ್ಥವನ್ನು ನೋಡಿ ಎಷ್ಟು ಖುಷಿ ಪಡುತ್ತಿದ್ದರು ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಸುಮಲತಾ ರವರು ಕೂಡ ಮುಂದೆ ನಿಂತು ತಮ್ಮ ಮಗನ ನಿಶ್ಚಿತಾರ್ಥವನ್ನು ಅದ್ದೂರಿಯಾಗಿ ನಡೆಸಿ ಕೊಟ್ಟಿದ್ದಾರೆ.
ಅವಿಮ ಬಿದ್ದಪ್ಪ ಭಾರತದಲ್ಲಿ ಡಿಮ್ಯಾಂಡ್ ಇರುವ ಫ್ಯಾಷನ್ ಡಿಸೈನರ್ ಆಗಿದ್ದು ಇವರಿಗೆ ಇನ್ಸ್ಟಾಗ್ರಾಮಿನಲ್ಲಿ 44,000ಕ್ಕೂ ಹೆಚ್ಚಿನ ಫಾಲೋವರ್ಸ್ ಇದ್ದಾರೆ. ಅವಿಮ ವಿದ್ದಪ್ಪ ಭಾರತದ ಖ್ಯಾತ ಫ್ಯಾಶನ್ ಡಿಸೈನರ್ ಗಳಲ್ಲಿ ಒಬ್ಬರಾಗಿದ್ದಾರೆ. ಅವಿವಾ ಪ್ರಸಾದ್ ಬಿದ್ದಪ್ಪ ಹಾಗೂ ಜುಡಿತ ಬಿದ್ದಪ್ಪ ರವರ ಪುತ್ರಿ ಅವಿವ ರವರಿಗೆ ಆಡಂ ಎನ್ನುವ ತಮ್ಮ ಕೂಡ ಇದ್ದಾನೆ.
ಅವಿವಾ ಅಭಿಷೇಕ್ ರವರಿಗೆ ನಾಲ್ಕು ವರ್ಷ ದೊಡ್ಡವರು ಎಂದು ಸೋಶಿಯಲ್ ಮೀಡಿಯಾ ದಲ್ಲಿ ಸುದ್ದಿಯಾಗುತ್ತಿದೆ. ಅಷ್ಟೇ ಅಲ್ಲದೆ ಅವಿವಾ ಈ ಮೊದಲೇ ಮದುವೆಯಾಗಿದ್ದರು ಇದೀಗ ಎರಡನೇ ಮದುವೆಯಾಗಿ ಅಭಿಷೇಕ್ ರವರ ಜೊತೆ ಆಗುತ್ತಿದ್ದಾರೆ ಎನ್ನುವ ಸುದ್ದಿಗಳು ಕೂಡ ಹಬ್ಬಿತು ಆದರೆ ಅವಿವಾ ಅಥವಾ ಅಭಿಷೇಕ್ ಇದರ ಬಗ್ಗೆ ಏನೆನ್ನು ಕೂಡ ಮಾತನಾಡಿಲ್ಲ ಅವಿವ ಆರ್ ಜೆ ಅಂಗೀರ್ ಜೊತೆ ರೆಡ್ ಎಫ್ಎಮ್ ನಲ್ಲಿ ಕಾಣಿಸಿಕೊಂಡಿದ್ದು ಅವಿವ ರೆಡ್ ಎಫ್ ಎಂ ನಲ್ಲಿ ಏನೆಲ್ಲಾ ಮಾತನಾಡಿದ್ದಾರೆ ಎನ್ನುವ ವಿಡಿಯೋ ಈಗ ಎಲ್ಲಾ ಕಡೆ ವೈರಲ್ ಆಗುತ್ತಿದೆ.