ಕಾಡು ಎನ್ನುವುದು ತುಂಬಾ ಸುಂದರವಾದ ಜಗತ್ತಾಗಿದೆ. ಕಾಡಿನಲ್ಲಿರುವ ಮೃಗ ಕಗಾ ಪಕ್ಷಿಗಳು ಒಂದೊಂದು ಅಚ್ಚರಿಯನ್ನು ಉಂಟು ಮಾಡುತ್ತವೆ. ಪ್ರಾಣಿ ಪಕ್ಷಿಗಳ ಶಕ್ತಿ ಸಾಮರ್ಥ್ಯದ ಮೇಲೆ ಇಲ್ಲಿ ಪ್ರಾಣಿ-ಪಕ್ಷಿಗಳು ಜೀವಿಸುತ್ತದೆ. ಬಲಶಾಲಿಯಾದ ಪ್ರಾಣಿ, ಸಾಕಷ್ಟು ವರ್ಷಗಳ ಕಾಲ ಬದುಕಿದೆ ನಿಶಬ್ದ ಪ್ರಾಣಿ ಕೆಲವೇ ತಿಂಗಳಗಳಲ್ಲಿ ಸಾಯುತ್ತವೆ. ಮನುಷ್ಯನಿಗೆ ಹೋಲಿಸಿದಾಗ ಪ್ರಾಣಿ-ಪಕ್ಷಿಗಳ ಸಾಮರ್ಥ್ಯದ ಬಗ್ಗೆ ಅಚ್ಚರಿ ಉಂಟಾಗುತ್ತದೆ. ನಾವು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ವನ್ಯ ಪ್ರಾಣಿಗಳ ವಿಡಿಯೋಗಳನ್ನು ನೋಡುತ್ತಲೇ ಇರುತ್ತೇವೆ ಇಂದು ಕಾಡಿನ ಮೂಲಕ ಹಲವು ಪ್ರಾಣಿ ಪಕ್ಷಿಗಳು ನಾಡಿಗೆ ಧಾವಿಸಿ ಜನರಿಗೆ ಸಾಕಷ್ಟು ಕಷ್ಟ ನಷ್ಟವನ್ನು ಉಂಟು ಮಾಡುತ್ತವೆ. ಅಂತಹದ್ದೇ ಒಂದು ವಿಡಿಯೋ ಇದೀಗ ವೈರಲ್ ಆಗಿದೆ.
ಚಿರತೆಗಳು ಬೇಟೆಯಾಡುವ ಮಾಸ್ಟರ್ ಗಳು(hunting monster cheetah) ಎಂದೆ ಹೆಸರನ್ನು ಪಡೆದುಕೊಂಡಿವೆ. ಯಾರಿಗೂ ಕಾಣದಂತೆ ಪೊದೆಯಲ್ಲಿ ಅಡಗಿದ್ದು ಹೊಂಚುವತಿ ಮಾನವರ ಮೇಲೆ ಅಥವಾ ತಾವು ಬೇಟೆಯಾಡಬೇಕಾದ ಪ್ರಾಣಿಗಳ ಮೇಲೆ ಚಿರತೆಗಳು ದಾಳಿ ಮಾಡುತ್ತವೆ. ಓಡುವುದರಲ್ಲಿ ಆಗಲಿ ಅಥವಾ ಬೇಟೆಯಾಡುವುದರಲ್ಲಿ ಆಗಲಿ ಚಿರತೆಗಳು ಹೆಚ್ಚು ಪರಿಣಿತಿಯನ್ನು ಪಡೆದುಕೊಂಡಿರುವ ಹಾಗೆ ವರ್ತಿಸುತ್ತವೆ. ತಾವು ಬೇಟೆಯಾಡಬೇಕು ಎಂದುಕೊಂಡ ಪ್ರಾಣಿಯನ್ನು ಎಲ್ಲಿದ್ದರೂ ಕೂಡ ಬಿಡದಂತೆ ಎರಗಿ ಬೇಟೆಯಾಡುತ್ತವೆ.
ಕಾಡಿನ ನಾಶದಿಂದ ಪ್ರಾಣಿ-ಪಕ್ಷಿಗಳು ಊರಿಗೆ ಧಾವಿಸುತ್ತಿವೆ. ಸಾಕಷ್ಟು ಪ್ರಾಣ ಹಾನಿ ಬೆಳೆ ಹಾನಿಯನ್ನು ಕೂಡ ಕಾಡಿನ ಪ್ರಾಣಿಗಳು ಉಂಟು ಮಾಡುತ್ತಿದ್ದು ಚಿರತೆಗಳಂತೂ ಮನೆಯ ಅಂಗಳಕ್ಕೆ ನುಗ್ಗಿ ದನ ಶ್ವಾನ ಬೆಕ್ಕು ಕುರಿ ಕೋಳಿ ಮುಂತಾದವುಗಳನ್ನು ಹಿಡಿದು ತಿನ್ನುತ್ತಿವೆ. ಸಾಕಷ್ಟು ಮನುಷ್ಯರನ್ನು ಕೂಡ ಬೇಟೆಯಾಡುತ್ತಿವೆ. ಇಂತಹ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ ವೈರಲ್ (viral video)ಆಗುತ್ತಲೇ ಇರುತ್ತವೆ.
ಇಂತಹ ಕ್ರೂರ ಅಪಾಯಕಾರಿಯದ ಪ್ರಾಣಿಗಳು ಕಾಡಿನಿಂದ ನಾಡಿಗೆ ನುಗ್ಗಿ ಬಂದು ಜನರಿಗೆ ಪ್ರಾಣ ಹಾನಿ ದನ ಹಾನಿಯನ್ನು ಉಂಟುಮಾಡುತ್ತಿರುವುದು ಹಲವಾರು ವರ್ಷಗಳಿಂದ ಕಂಡು ಬರುತ್ತಿದೆ. ಈ ರೀತಿ ವಿಡಿಯೋಗಳನ್ನು ನೋಡುವಾಗ ಒಮ್ಮೆ ಎದೆ ಜಲ್ ಎನ್ನುವುದು ಖಚಿತ ಒಮ್ಮೊಮ್ಮೆ ಕಾಡು ಪ್ರಾಣಿಗಳಿಗೆ ಇಷ್ಟೊಂದು ಶಕ್ತಿ ಸಾಮರ್ಥ್ಯ ಎಲ್ಲಿಂದ ಬರುತ್ತದೆ ಎಂದು ಅಚ್ಚರಿಯೂ ಕೂಡ ಉಂಟಾಗುತ್ತದೆ. ಅರಣ್ಯ ಪ್ರದೇಶಗಳಿಗೆ ಚಾಚಿಕೊಂಡಂತಹ ಹೆದ್ದಾರಿಗಳು ಊರುಗಳಿಗೆ ಪ್ರಾಣಿಗಳು ನುಗ್ಗುವುದು ಹೆಚ್ಚಾಗಿಯೇ ಇರುತ್ತದೆ. ಒಮ್ಮೊಮ್ಮೆ ಕಾಡಿನಲ್ಲಿ ಆಹಾರ ಸಿಗದೇ ನಾಡಿಗೂ ಕೂಡ ಪ್ರಾಣಿಗಳು ದಾಳಿ ಮಾಡುತ್ತವೆ.