ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್(Shiva Rajkumar) ತಮ್ಮ 125ನೇ ಸಿನಿಮಾ ವಾದ ವೇದ(Veda) ಸಿನಿಮಾದ ಪ್ರಮೋಷನ್ ನಲ್ಲಿ ಸಿಕ್ಕಾಪಟ್ಟೆ ಬಿಸಿಯಾಗಿದ್ದಾರೆ. ಇವರ 125ನೇ ಸಿನಿಮಾ ವೇದ ಇದೀಗ ಅಭಿಮಾನಿಗಳಲ್ಲಿ ನಿರೀಕ್ಷೆಯನ್ನು ಹುಟ್ಟು ಹಾಕಿದ್ದು ರಾಯಚೂರಿನಲ್ಲಿ ವೇದ ಸಿನಿಮಾದ ಅದ್ದೂರಿ ಟೀಸರ್ ಕೂಡ ರಿಲೀಸ್ ಮಾಡಿದರು ಹರ್ಷರವರ ನಿರ್ದೇಶನದಲ್ಲಿ ಮೂಡಿ ಬಂದಿರುವ ವೇದ ಚಿತ್ರ 1960ರ ದಶಕದಲ್ಲಿ ನಡೆದ ಕ್ರೂರ ಕಥೆಯನ್ನ ಆಧಾರವಾಗಿಟ್ಟುಕೊಂಡು ರಚಿಸಿದ್ದೇವೆ ಎಂದು ಚಿತ್ರತಂಡದವರು ಹೇಳಿಕೊಂಡಿದ್ದಾರೆ. ವೇದ ಸಿನಿಮಾದ ಟೀಸರ್ ರಿಲೀಸ್ ಇವೆಂಟ್ ನಲ್ಲಿ ಆಂಕರ್ ಅನುಶ್ರೀ ರವರು ನಿರೂಪಣೆಯನ್ನು ಮಾಡುತ್ತಿದ್ದರು ಅದೇ ವೇಳೆ ಅರ್ಜುನ್ ಜನ್ಯ(Arjun janya) ಹಾಗೂ ಆಂಕರ್ ಅನುಶ್ರೀ(anchor Anushree) ಸ್ಟೇಜ್ ಮೇಲೆ ಹುಚ್ಚೆದ್ದು ಕುಣಿದಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಶಿವಣ್ಣರವರ 125ನೇ(shivanna 125th movie) ಸಿನಿಮಾ ವಾದ ವೇದ ಚಿತ್ರವು ಅಭಿಮಾನಿಗಳಲ್ಲಿ ನಿರೀಕ್ಷೆಯನ್ನು ಹುಟ್ಟು ಹಾಕಿದ್ದು ಈ ಚಿತ್ರದ ಇದೀಗಾಗಲೇ ಬಿಡುಗಡೆಯಾಗಿತ್ತು. ಇದೀಗ ವೇದ ಸಿನಿಮಾದ ಎರಡನೇ ಟೀಸರ್ ರಾಯಚೂರಿನಲ್ಲಿ ಬಿಡುಗಡೆ ಮಾಡಲಾಗಿದೆ. ಟೀಸರ್ ರಿಲೀಸ್ ಕಾರ್ಯಕ್ರಮದಲ್ಲಿ ಶಿವರಾಜ್ ಕುಮಾರ್ ರವರು ರಾಯಚೂರು ಜನತೆಯನ್ನು ಉದ್ದೇಶಿಸಿ ಮಾತನಾಡಿ ರಾಯಚೂರಿನ ಜನರು ನನ್ನನ್ನು ನೋಡಲು ಬೆಂಗಳೂರಿಗೆ ಬರುತ್ತೀರಿ ಬಂದಾಗ ಉಡುಗೊರೆಯಲ್ಲಿ ನೀಡಿ ಸಿಹಿಯನ್ನು ನೀಡಿ ಹೋಗುತ್ತೀರಿ ಆದರೆ ನಿಮ್ಮ ಜಿಲ್ಲೆಯಲ್ಲಿರುವ ಕಷ್ಟ ನಷ್ಟಗಳು ನನ್ನ ಬಳಿ ಎಂದಿಗೂ ಹೇಳಿಕೊಂಡಿಲ್ಲ.
ರಾಯಚೂರು ಜಿಲ್ಲೆಯ ಹಿಂದುಳಿದ ಜಿಲ್ಲೆಯಾಗಿದ್ದು ಹಲವಾರು ಸಮಸ್ಯೆಗಳಿಂದ ಬಳಲಿ ಬೆಂಡಾಗಿದೆ. ಹಾಗಾಗಿ ಏಮ್ಸ್(Aaims) ಸ್ಥಾಪನೆಗೆ ನಾನು ಕೂಡ ಸಹಕರಿಸುತ್ತೇನೆ. ಇವತ್ತು ಪ್ರೆಸ್ ಮೀಟ್ ನಲ್ಲಿ ಕೂಡ ನಾನು ರಾಯಚೂರಿನ ಸಮಸ್ಯೆಗಳ ಬಗ್ಗೆ ಮಾತನಾಡಿದ್ದೇನೆ ಇದೊಂದು ಗಡಿ ಜಿಲ್ಲೆಯಾಗಿದ್ದು ರಾಯಚೂರಿನ ಸಮಸ್ಯೆಗಳಿಗೆ ಯಾರು ಸ್ಪಂದಿಸುತ್ತಿಲ್ಲ ನಾನು ಕೂಡ ಈವರೆಗೂ ಇಲ್ಲಿಗೆ ಬರಲಾಗಿಲ್ಲ ದಯವಿಟ್ಟು ನನ್ನನ್ನು ಕ್ಷಮಿಸಿ ಎಂದು ಶಿವಣ್ಣ ರಾಯಚೂರಿನ ಜನತೆಯ ಬಳಿ ಕ್ಷಮೆ ಕೇಳಿದ್ದಾರೆ.
ರಾಯಚೂರಿನ ಎಲ್ಲಾ ಸಮಸ್ಯೆಗಳಿಗೂ ನಟರೆಲ್ಲರೂ ನಿಮ್ಮೊಟ್ಟಿಗೆ ಇರುತ್ತೇವೆ ನಿಮಗೆ ಏನೇ ಸಹಾಯ ಬೇಕಿದ್ದರೂ ನಮ್ಮನ್ನು ನಿಸ್ಸಂಕೋಚವಾಗಿ ನೀವು ಕೇಳಬಹುದು Aaims ಸ್ಥಾಪನೆಗಾಗಿ ಹೋರಾಟ ನಡೆಯುತ್ತಿದೆ ನಾನು ಕೂಡ ಅದರಲ್ಲಿ ಭಾಗವಹಿಸುತ್ತೇನೆ. ಕರ್ನಾಟಕದ ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರವರನ್ನು ಭೇಟಿಯಾಗಿ ರಾಯಚೂರಿನ ಏಮ್ಸ್ ಸ್ಥಾಪನೆ ಕುರಿತಂತೆ ಚರ್ಚಿಸುತ್ತೇನೆ ಎಂದು ಶಿವಣ್ಣರವರು ತಮ್ಮ ವೇದ ಸಿನಿಮಾದ ಟೀಸರ್ ಬಿಡುಗಡೆಯ ದಿನದಂದು ರಾಯಚೂರನ್ನು ಉದ್ದೇಶಿಸಿ ಮಾತನಾಡಿದ್ದಾರೆ.
ವೇದ ಸಿನಿಮಾದ ರಿಲೀಸ್ ಡೇಟ್ ಕೂಡ ರಿವಿಲ್ ಆಗಿದ್ದು ವೇದ ಸಿನಿಮಾ ಡಿಸೆಂಬರ್ 23 ರಂದು ರಾಜ್ಯದಾದ್ಯಂತ ತೆರೆಗೆ ಬರಲಿದೆ. ಹರ್ಷ ರವರ ನಿರ್ದೇಶನದಲ್ಲಿ ಮೂಡಿ ಬಂದಿದ್ದ ವಜ್ರಕಾಯ, ಭಜರಂಗಿ, ಭಜರಂಗಿ 2 ಈ ಎಲ್ಲಾ ಚಿತ್ರಗಳು ಯಶಸ್ಸನ್ನು ಕಂಡಿದ್ದವು ಇದೀಗ ವೇದ ಚಿತ್ರದಲ್ಲೂ ಕೂಡ ಶಿವಣ್ಣ ರಗಡ್ ಲುಕಿನಲ್ಲಿ ಕಾಣಿಸಿಕೊಳ್ಳುತ್ತಿದ್ದು ಅಭಿಮಾನಿಗಳು ಕೂಡ ಕುತೂಹಲದಿಂದ ಸಿನಿಮಾಗಾಗಿ ಕಾಯುತ್ತಿದ್ದಾರೆ.
ಸರಿಗಮಪ ರಿಯಾಲಿಟಿ ಶೋನಲ್ಲಿ ಆಂಕರ್ ಅನುಶ್ರೀ ಅರ್ಜುನ್ ಜನ್ಯರವರನ್ನು ವಿವಾಹವಾಗುವಂತೆ ಕಾಮಿಡಿ ಮಾಡುವುದನ್ನು ನಾವೆಲ್ಲರೂ ನೋಡಿದ್ದೇವೆ. ಇದರ ಬಗ್ಗೆ ಕೂಡ ಅರ್ಜುನ್ ಜನ್ಯ ರವರ ಪತ್ನಿ ಗೀತಾರವರು ಅನುಶ್ರೀಗೆ ಬೈದಿದ್ದರೂ ಎಂಬೆಲ್ಲ ವದಂತಿಗಳು ಕೇಳಿ ಬಂದಿದ್ದವು ಇದೀಗ ಶಿವರಾಜ್ ಕುಮಾರ್ ರವರ ಈ 125ನೇ ಸಿನಿಮಾವಾದ ವೇದ ಚಿತ್ರದ ಟೀಸರ್ ರಿಲೀಸ್ ಇವೆಂಟ್ ನಲ್ಲಿ ಆಂಕರ್ ಅನುಶ್ರೀ ಹಾಗೂ ಅರ್ಜುನ್ ಜನ್ಯ ರವರು ಹುಚ್ಚೆದ್ದು ಕುಣಿದಿರುವ ವಿಡಿಯೋ ಇದೀಗ ಎಲ್ಲಾ ಕಡೆ ವೈರಲ್ ಆಗಿದೆ.