ಇಷ್ಟು ವರ್ಷದ ಸಿನಿ ಜರ್ನಿಯಿಂದ ಕೂಡಿಟ್ಟ ಕೋಟಿ ಕೋಟಿ ಹಣ ಉಡೀಸ್ : ಪೊಲೀಸ್ ಠಾಣೆ ಮೊರೆ ಹೋದ ನಟಿ ವಿನಯ ಪ್ರಸಾದ್

ಬೆಂಗಳೂರು ನಗರದ ನಂದಿನಿ ಲೇಔಟ್ ನಲ್ಲಿರುವ ಖ್ಯಾತ ಬಹುಭಾಷಾ ನಟಿ ವಿನಯ್ ಪ್ರಸಾದ್ ರವರ ಮನೆಗೆ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಕಳ್ಳರು ಕನ್ನ ಹಾಕಿದ್ದಾರೆ. ದೀಪಾವಳಿ ಹಬ್ಬದ ಪ್ರಯುಕ್ತ ನಟಿ ವಿನಯ್ ಪ್ರಸಾದ್ ರವರ ಕುಟುಂಬ ತಮ್ಮ ಹುಟ್ಟೂರಿಗೆ ಹಬ್ಬವನ್ನು ಆಚರಿಸಲು ಹೋಗಿದ್ದರು. ಅವರು ಹಬ್ಬ ಮುಗಿಸಿಕೊಂಡು ಹಿಂತಿರುಗಿ ಮನೆಗೆ ಬಂದು ನೋಡಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಹತ್ತಿರದ ಪೊಲೀಸ್ ಠಾಣೆಯಲ್ಲಿ ವಿನಯ್ ಪ್ರಸಾದ್ ಕುಟುಂಬ ದೂರು ದಾಖಲಿಸಿದ್ದಾರೆ.

 

 

ವಿನಯ್ ಪ್ರಸಾದ್ ಕುಟುಂಬ ತಮ್ಮ ಹುಟ್ಟೂರಾದ ಉಡುಪಿಗೆ ದೀಪಾವಳಿ ಹಬ್ಬವನ್ನು ಆಚರಿಸಲು ಅಕ್ಟೋಬರ್ 22ರಂದು ತಮ್ಮ ಸ್ವಂತ ಊರಿಗೆ ಹೋದ ಹಿನ್ನೆಲೆಯಲ್ಲಿ. ಬೆಂಗಳೂರಿನ ನಂದಿನಿ ಲೇಔಟ್ ನಲ್ಲಿರುವ ವಿನಯ್ ಪ್ರಸಾದ್ ರವರ ಮನೆಗೆ ಕಳ್ಳರು ಮುತ್ತಿಗೆ ಹಾಕಿ ಬೆಡ್ ರೂಮಿನ ಡೋರ್ ಲಾಕ್ ಅನ್ನು ಮುರಿದು ಅದರಲ್ಲಿದ್ದ ಹಣವನ್ನೆಲ್ಲ ದೋಚಿದ್ದಾರೆ. ನಟಿ ವಿನಯ ಪ್ರಸಾದ್ ಕನ್ನಡವಲ್ಲದೆ ಹಲವಾರು ಭಾಷೆಗಳಲ್ಲಿ ನಟಿಸಿದ್ದಾರೆ. ಸದ್ಯಕ್ಕೆ ಕನ್ನಡದ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಪಾರು ಧಾರವಾಹಿಯಲ್ಲಿ ಅಖಿಲಾಂಡೇಶ್ವರಿ ಎಂಬ ಒಂದು ಮೇರು ಪಾತ್ರದಲ್ಲಿ ನಟಿಸುತ್ತಿದ್ದಾರೆ.

 

ಈ ಕುರಿತು ನಟಿ ವಿನಯ ಪ್ರಸಾದ್ ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಈ ಪ್ರಕರಣಕ್ಕೆ ಪ್ರತಿಕ್ರಿಯಿಸಿದ ಉತ್ತರ ವಿಭಾಗದ ಡಿಸಿಪಿ ವಿನಾಯಕ್ ಪಾಟೀಲ್, ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಮೂರ್ ನಾಲ್ಕು ಮನೆಗಳಲ್ಲಿ ಇದೇ ರೀತಿ ಕಳ್ಳತನವಾಗಿದೆ. ಕಳ್ಳರು ಡೋರ್ ಲಾಕ್ ಮುರಿದು ಮನೆಯಲ್ಲಿದ್ದ ಹಣ ಒಡವೆಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ನಾವು ಕಳ್ಳರನ್ನು ಹಿಡಿಯುವ ಯತ್ನದಲ್ಲಿ ಇದ್ದೇವೆ.

 

 

ನಂದಿನಿ ಲೇಔಟ್ ನಲ್ಲಿ ಇದ್ದ ವಿನಯ್ ಪ್ರಸಾದ್ ರವರ ಮನೆಯಲ್ಲಿ ಕೂಡ ಇದೇ ರೀತಿ ಕಳ್ಳತನವಾಗಿದೆ ಈ ಪ್ರಕರಣವನ್ನು ನಾವು ದಾಖಲಿಸಿಕೊಂಡು ನಂದಿನಿ ಲೇಔಟ್ ಹಾಗೂ ಇತರ ಕಳ್ಳತನವಾದ ಏರಿಯಾಗಳಲ್ಲಿ ವಿಚಾರಣೆಯನ್ನು ನಡೆಸುತ್ತೇವೆ ಎಂದಿದ್ದಾರೆ.

Be the first to comment

Leave a Reply

Your email address will not be published.


*