ವಿಜಯಲಕ್ಷ್ಮಿ ದರ್ಶನ್ ಗೆ ಅಭಿಮಾನಿಗಳು ಕೊಟ್ಟ ಭರ್ಜರಿ ಉಡುಗೊರೆ ಏನು ಗೊತ್ತಾ?

ಇಂದು ಡಿ ಬಾಸ್ ದರ್ಶನ್ ರವರ ಮುದ್ದಿನ ಮಡದಿ ವಿಜಯಲಕ್ಷ್ಮಿ ರವರ ಹುಟ್ಟುಹಬ್ಬದ ಇರುವುದರಿಂದ ಅವರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಎಲ್ಲೆಡೆ ವೈರಲ್ ಆಗುತ್ತಿವೆ. ಡಿ ಬಾಸ್ ದರ್ಶನ್ ರವರ ಅಭಿಮಾನಿಗಳು ಟ್ವಿಟ್ಟರ್ ಹಾಗೂ ಫೇಸ್ಬುಕ್ ಇಂಸ್ಟ ಖಾತೆಗಳಲ್ಲಿ ವಿಜಯಲಕ್ಷ್ಮಿ ರವರ ಫೋಟೋಗಳನ್ನು ಪೋಸ್ಟ್ ಮಾಡಿ ಶುಭಾಶಯಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ.

 

 

View this post on Instagram

 

A post shared by Vijayalakshmi darshan (@viji.darshan)

 

ವಿಜಯ ಲಕ್ಷ್ಮಿ ದರ್ಶನ್ ರವರ ಫೋಟೋಗಳನ್ನೆಲ್ಲ ಮರ್ಜ್ ಮಾಡಿ ಕೊಲಾಜ್ ಮಾಡಿ ಎಲ್ಲಾ ಕಡೆ ಅವರ ಫೋಟೋಗಳನ್ನು ಅಪ್ಲೋಡ್ ಮಾಡುತ್ತಿದ್ದಾರೆ. ಅತ್ತಿಗೆಗೆ ಶುಭಾಶಯಗಳು ಎಂದು ಡಿ ಬಾಸ್ ದರ್ಶನ್ ರವರ ಪತ್ನಿಗೆ ಶುಭಾಶಯಗಳ ಮಳೆಯನ್ನೇ ದರ್ಶನ್ ಅಭಿಮಾನಿಗಳು ಸುರಿಸುತ್ತಿದ್ದಾರೆ.

ವಿಜಯಲಕ್ಷ್ಮಿ ರವರ ಹುಟ್ಟುಹಬ್ಬದ ಪ್ರಯುಕ್ತ ಡಿ ಬಾಸ್ ದರ್ಶನ್ ರವರು ತಮ್ಮ ಮುದ್ದಿನ ಮಡದಿ ವಿಜಯಲಕ್ಷ್ಮಿಯನ್ನು ಮೈಸೂರಿನ ಚಾಮುಂಡೇಶ್ವರಿ ಬೆಟ್ಟಕ್ಕೆ ಕರೆದುಕೊಂಡು ಹೋಗಿ ಚಾಮುಂಡೇಶ್ವರಿಯ ದರ್ಶನವನ್ನು ಪಡೆದು ಜೊತೆಯಾಗಿ ಹಲವು ಫೋಟೋಗಳನ್ನು ಕ್ಲಿಕ್ಕಿಸಿಕೊಂಡು ಮನೆಗೆ ಮರಳಿದ್ದಾರೆ. ಡಿ ಬಾಸ್ ಹಾಗೂ ಅವರ ಪತ್ನಿ ಜೊತೆಗಿರುವ ಫೋಟೋಗಳನ್ನು ನೋಡಿದ ಅಭಿಮಾನಿಗಳು ಕೂಡ ಖುಷಿಪಟ್ಟಿದ್ದಾರೆ.

 

 

ಡಿ ಬಾಸ್ ದರ್ಶನ್ ಹಾಗೂ ವಿಜಯಲಕ್ಷ್ಮಿ ದಂಪತಿಗಳ ಮುದ್ದಿನ ಮಗ ವಿನೀಶ್ ತೂಗುದೀಪ್ ಅಭಿಮಾನಿಗಳ ಪಾಲಿನ ಚೋಟಬಾಸ್ ಕೂಡ ತಮ್ಮ ಅಮ್ಮನಿಗೆ ಹುಟ್ಟು ಹಬ್ಬದ ಶುಭಾಶಯಗಳು ತಿಳಿಸಿದ್ದಾರೆ. ಡಿ ಬಾಸ್ ದರ್ಶನ್ ರವರು ತಮ್ಮ ಮುದ್ದಿನ ಮಡದಿ ವಿಜಯಲಕ್ಷ್ಮಿ ಅವರ ಹುಟ್ಟುಹಬ್ಬವನ್ನು ರೆಸಾರ್ಟ್ ಒಂದರಲ್ಲಿ ಆಯೋಜಿಸಿದ್ದು ತಮ್ಮ ಕುಟುಂಬಸ್ಥರ ಸಮ್ಮುಖದಲ್ಲಿ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ್ದಾರೆ. ಡಿ ಬಾಸ್ ದರ್ಶನ್ ತಮ್ಮ ಮಡದಿ ವಿಜಯಲಕ್ಷ್ಮಿಗೆ ಹುಟ್ಟುಹಬ್ಬಕ್ಕಾಗಿ ಡೈಮಂಡ್ ರಿಂಗ್ ಒಂದನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

Be the first to comment

Leave a Reply

Your email address will not be published.


*