ಸಿನಿಮಾ ಇಂಡಸ್ಟ್ರಿ ಯವರು ಸಿನಿಮಾ ಇಂಡಸ್ಟ್ರಿ ಅವರನ್ನು ಮದುವೆಯಾದ ಉದಾಹರಣೆಗಳು ಕಡಿಮೆ ಅಲ್ಲೊಂದು ಇಲ್ಲೊಂದು ಜೋಡಿಗಳನ್ನು ನೋಡುತ್ತಿರುತ್ತೇವೆ ಸುಮಲತಾ ಅಂಬರೀಶ್(sumalatha Ambarish) ದಂಪತಿಗಳು ವಿಷ್ಣುವರ್ಧನ್ ಭಾರತಿ (Bharti vishnuvardhan)ದಂಪತಿಗಳು ರಾಧಿಕಾ ಪಂಡಿತ್ ಹಾಗೂ ಯಶ್(Yash Radhika pandit) ದಂಪತಿಗಳು ಹೀಗೆ ಕೆಲವೊಂದು ಜೋಡಿಗಳು ಮಾತ್ರ ನಮಗೆ ನೆನಪಾಗುತ್ತಾ ಹೋಗುತ್ತವೆ. ಇದೀಗ ಮತ್ತೊಂದು ಜೋಡಿ ಮದುವೆ ಹಂತದವರೆಗೂ ಬಂದಿದ್ದು ಇದೀಗ ನಟ ವಸಿಷ್ಟ ಸಿಂಹ ಹಾಗೂ ನಟಿ ಹರಿಪ್ರಿಯಾ ಎಂಗೇಜ್ಮೆಂಟ್(Vashishtha Simha haripriya engagement) ಮಾಡಿಕೊಂಡಿದ್ದಾರೆ.

 

 

 

ನಟ ವಸಿಷ್ಟ ಸಿಂಹ ಹಾಗೂ ನಟಿ ಹರಿಪ್ರಿಯ ಹಲವಾರು ವರ್ಷಗಳಿಂದ ಗುಟ್ಟಾಗಿ ಪ್ರೀತಿಸುತ್ತಿದ್ದರು. ಇದೀಗ ಯಾರಿಗೂ ಹೇಳದಂತೆ ಸೀಕ್ರೆಟ್ ಆಗಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ನಟ ವಸಿಷ್ಟ ಸಿಂಹ ಆರಂಭದಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು ಇವರು ಕಂಚಿನ ಕಂಠದಿಂದಲೇ ಎಲ್ಲಾ ಕಡೆ ಫೇಮಸ್ ಆಗಿದ್ದಾರೆ. ಇವರು ಹಂಸಲೇಖರವರ(hamsalekha) ಜೊತೆ ಕೆಲಸ ಮಾಡಬೇಕೆಂಬ ಆಸೆಯನ್ನು ಹೊಂದಿದ್ದರಿಂದ ಇವರು ಗಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು ತದನಂತರ ಹಲವಾರು ಹಾಡುಗಳನ್ನು ಹಾಡಿ ಗಾಯನದಲ್ಲೂ ಸೈ ಎನಿಸಿಕೊಂಡರು.

 

 

ವಸಿಷ್ಟ ಸಿಂಹ ರವರ ಪಾತ್ರ ಮೊದಲಿಗೆ ಸೂಪರ್ ಹಿಟ್ ಆಗಿದ್ದು ರಾಜಾಹುಲಿ(Raja huli) ಸಿನಿಮಾದ ಮೂಲಕ ಅವರ ಮುಖವನ್ನು ಗುರುತು ಹಿಡಿಯುವಂತೆ ಮಾಡುತ್ತದೆ ತದನಂತರ ಗೋದಿ ಬಣ್ಣ ಸಾಧಾರಣ ಮೈಕಟ್ಟು(godi Banna sadharana mykattu) ಸಿನಿಮಾ ಕೂಡ ಇವರಿಗೆ ಪ್ರಖ್ಯಾತಿಯನ್ನು ತಂದುಕೊಡುತ್ತದೆ. ಮಫ್ತಿ(Mufti) ,ಟಗರು(tagaru), ಕೆಜಿಎಫ್, ಕೆಜಿಎಫ್ 2(KGF 2) ಮುಂತಾದ ಸಿನಿಮಾಗಳ ಮೂಲಕ ವಸಿಷ್ಟ ಸಿಂಹ ಪ್ರಖ್ಯಾತಿಯನ್ನು ಪಡೆದುಕೊಂಡಿದ್ದಾರೆ. ಕನ್ನಡ ಮಾತ್ರವಲ್ಲದೆ ತೆಲುಗು ತಮಿಳು ಸಿನಿಮಾಗಳಲ್ಲು ವಶಿಷ್ಟ ಸಿಂಹ ಆಕ್ಟಿವ್ ಆಗಿದ್ದಾರೆ.

 

 

ನಟಿ ಹರಿಪ್ರಿಯಾ ಆರಂಭಿಕವಾಗಿ ಡಾನ್ಸರ್ ಆಗಿದ್ದರು ತದನಂತರ ತುಳು ಸಿನಿಮಾ ಇಂಡಸ್ಟ್ರಿಯ ಮುಖಾಂತರ ಕನ್ನಡ ಸಿನಿಮಾ ಇಂಡಸ್ಟ್ರಿಗು ಕೂಡ ಎಂಟ್ರಿ ಕೊಟ್ಟ ಹರಿಪ್ರಿಯಾ ಮೊದಲು ಫ್ಲಾಪ್ ಸಿನಿಮಾಗಳನ್ನ ನೀಡುತ್ತಿದ್ದರು ತದನಂತರ ಕಳ್ಳರ ಸಂತೆ (kallara sante)ಎನ್ನುವ ಸಿನಿಮಾದ ಮೂಲಕ ಇವರು ಫೇಮಸ್ ಆಗುತ್ತಾ ಹೋದರು ಉಗ್ರಂ(ugram), ನೀರ್ ದೋಸೆ(neer dose) , ರಿಕ್ಕಿ(Ricky) ಮುಂತಾದ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ನಟಿ ಹರಿಪ್ರಿಯಾ ಕೂಡ ತೆಲುಗು ತಮಿಳು ಸಿನಿಮಾಗಳಲ್ಲಿ ಸಕ್ರಿಯ ರಾಗಿದ್ದಾರೆ.

 

 

ನಟಿ ಹರಿಪ್ರಿಯಾ ಹಾಗೂ ನಟ ವಸಿಷ್ಟ ಸಿಂಹ ತೆಲುಗು ಸಿನಿಮಾ ಒಂದರಲ್ಲಿ ಒಟ್ಟಾಗಿ ಒಟ್ಟಿಗೆ ಅಭಿನಯಿಸುತ್ತಿದ್ದು ಅಲ್ಲಿ ಡ್ಯಾನ್ಸ್ ಕ್ಲಾಸ್ ನ ಮೂಲಕ ಇವರಿಬ್ಬರ ಪ್ರೀತಿ ಶುರುವಾಗಿ ಇದೀಗ ಅವರು ಮದುವೆಯ ಹಂತಕ್ಕು ತಲುಪಿದ್ದಾರೆ. ವಶಿಷ್ಠ ಸಿಂಹನಿಗೆ ಇದಾಗಲೇ 34 ವರ್ಷ ವಯಸ್ಸಾಗಿತ್ತು(Vashishtha simha age) ನಟಿ ಹರಿಪ್ರಿಯಾ ರವರೆಗೂ(haripriya age) ಕೂಡ ಇದೀಗ 31 ವರ್ಷ ವಯಸ್ಸಾಗಿದೆ. ಇಬ್ಬರಿಗೂ ವಯಸ್ಸಾಗಿರುವ ಕಾರಣ ಮದುವೆಯಾಗಲು ಇವರಿಬ್ಬರು ಸಿದ್ದರಾಗಿದ್ದಾರೆ. ಹಾಗೆ ಇತ್ತೀಚಿಗಷ್ಟೇ ಇವರಿಬ್ಬರೂ ತಮ್ಮ ಎಂಗೇಜ್ಮೆಂಟ್ ಕೂಡ ಮಾಡಿಕೊಂಡಿದ್ದಾರೆ.

 

 

ಸಿನಿಮಾ ಇಂಡಸ್ಟ್ರಿಯಲ್ಲಿ ಈ ನಟನಟಿ ಪ್ರೀತಿಸುತ್ತಿದ್ದಾರೆ ಎನ್ನುವ ವಿಚಾರ ಯಾರಿಗಾದರೂ ತಿಳಿದರೆ ಅವರ ಕಾಲು ಎಳೆಯುವವರು ಹೆಚ್ಚಾಗಿರುತ್ತಾರೆ. ಹಾಗಾಗಿ ವಸಿಷ್ಟ ಸಿಂಹ ಹಾಗೂ ಹರಿಪ್ರಿಯ ಯಾವುದೇ ಕಾರ್ಯಕ್ರಮಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡಿಲ್ಲ ಹಾಗಾಗಿ ಇವರಿಬ್ಬರೂ ಮಾತನಾಡಿಕೊಂಡು ಬಹಳ ಸಿಂಪಲ್ ಆಗಿ ಉಂಗುರ ಬದಲಾಯಿಸಿಕೊಂಡು ತಮ್ಮ ಆಪ್ತರ ಸಮ್ಮುಖದಲ್ಲಿ ಎಂಗೇಜ್ಮೆಂಟ್(engagement) ಮಾಡಿಕೊಂಡಿದ್ದಾರೆ. ಎಂಗೇಜ್ಮೆಂಟ್ ಡೇಟ್ ಫಿಕ್ಸ್ ಮಾಡಿದ ನಂತರ ಕೂಡ ಹಲವಾರು ಜನ ಈ ವಿಚಾರವನ್ನು ಕಾಂಟ್ರವರ್ಸಿ ಮಾಡಬಹುದು ಎನ್ನುವ ಭಯದಿಂದ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಯಾರಿಗೂ ಹೇಳದೆ ಸೀಕ್ರೆಟ್ ಆಗಿ ಎಂಗೇಜ್ಮೆಂಟ್ ಮಾಡಿಕೊಂಡು ತದನಂತರ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ.

Leave a comment

Your email address will not be published. Required fields are marked *