ಟಾಲಿವುಡ್ ಯಂಗ್ ಹೀರೋ ಮೆಗಾಸ್ಟಾರ್ ಕುಟುಂಬದ ಮನೆ ಮಗ ವರುಣ್ ತೇಜ್(Varun Tej) ಮದುವೆಗೆ ಸಕಲ ಸಿದ್ಧತೆಗಳು ನಡೆಯುತ್ತಿದೆ. ನಟಿ ಲಾವಣ್ಯ(Lavanya Tripathi) ಜೊತೆಗೆ ವರುಣ್ ಮದುವೆ ಎಂಬ ಎಲ್ಲಾ ಊಹಾಪೋಹಗಳಿಗೂ ಈಗ ಸ್ಪಷ್ಟನೆ ದೊರಕಿದೆ. ಟಾಲಿವುಡ್ ನಟ ವರುಣ್ ತೇಜ್ ತನ್ನ ಬಹು ಕಾಲದ ಗೆಳತಿ ಲಾವಣ್ಯ (Varun Tej and Lavanya Tripathi movies)ಜೊತೆ ಶೀಘ್ರದಲ್ಲೇ ಹಸೆ ಮಣೆ ಏರಲಿದ್ದಾರೆ. ವರುಣ್ ತೇಜ್ ಲಾವಣ್ಯ ತ್ರಿಪದಿ ಸಾಕಷ್ಟು ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದಾರೆ.
ಚಿತ್ರರಂಗದಲ್ಲಿ ಮದುವೆಯ ಸದ್ದು ಸಾಕಷ್ಟು ಸುದ್ದಿ ಮಾಡುತ್ತಿದೆ. ಮದುವೆಯ ಮಂಗಳವಾದ್ಯ ಎಲ್ಲಾ ಕಡೆ ಸೌಂಡ್ ಮಾಡುತ್ತಿದೆ. ಅತಿಯಾ ಶೆಟ್ಟಿ (athiya Shetty)ಜೋಡಿ ಸಿದ್ದು ಕಿಯರ (siddh kiyara)ಜೋಡಿ ಹೀಗೆ ಹಲವಾರು ಸ್ಟಾರ್ ಜೋಡಿಗಳು ಹಸೆ ಮಣೆಯನ್ನು ಏರುತ್ತಿದ್ದಾರೆ. ಇದೀಗ ಮೆಗಾ ಸ್ಟಾರ್ ಕುಟುಂಬದ ಕುಡಿ ವರುಣ್ ತೇಜ್ ನಿಶ್ಚಿತಾರ್ಥಕ್ಕೆ ಕೌಂಟ್ ಡೌನ್ ಶುರು ಆಗಿದೆ.
ನಟಿ ಲಾವಣ್ಯ ತ್ರಿಪದಿ ಜೊತೆ ವರುಣ್ (Varun Tej Lavanya Tirupati engagement)ಕಳೆದ ಐದಾರು ವರ್ಷಗಳಿಂದ ಡೇಟ್ ಮಾಡುತ್ತಿದ್ದಾರೆ. ಕುಟುಂಬದವರು ಕೂಡ ಇವರಿಬ್ಬರ ಪ್ರೀತಿಗೆ ಸಮ್ಮತಿಯನ್ನು ಸೂಚಿಸಿದ್ದಾರೆ. ಜೂನ್ ಒಂಬತ್ತಕ್ಕೆ ವರುಣ್ ಲಾವಣ್ಯ ಎಂಗೇಜ್ಮೆಂಟ್ ಡೇಟ್ ಫಿಕ್ಸ್ ಆಗಿದೆ. ಹೈದರಾಬಾದ್ ನಲ್ಲಿ ಸರಳವಾಗಿ ಆಪ್ತರ ಸಮ್ಮುಖದಲ್ಲಿ ನಿಶ್ಚಿತಾರ್ಥ ಜರುಗಲಿದೆ.
ಶ್ರೀಜಾ ನಿಹಾರಿಕಾ ಕೊಂಡೆಲಾ ಡಿವೋರ್ಸ್(sreeja Niharika kondela divorce) ಸಂಗತಿ ನಡುವೆ ವರುಣ್ ತೇಜ್ ಮದುವೆಗೆ ಸಿದ್ಧತೆ ನಡೆಯುತ್ತಿದೆ. ಸದ್ಯದಲ್ಲೇ ವರುಣ್ ಲಾವಣ್ಯ ಮದುವೆ ಕೂಡ ರಿವಿಲ್ ಆಗಲಿದೆ