ಮದುವೆ ಕ್ಯಾನ್ಸಲ್​ ವೈಷ್ಣವಿ ಗೌಡ ಸ್ಪಷ್ಟನೆ:ವಿವಾಹವಾದರೆ ಒಂದೆರಡು ಮೂರು ವರ್ಷಗಳಲ್ಲಿ ಡೈವೋರ್ಸ್ ಕೊಡುವುದು ಖಚಿತ

ನಟಿ ವೈಷ್ಣವಿ ಗೌಡ ಅಗ್ನಿಸಾಕ್ಷಿ ಧಾರಾವಾಹಿಯ ಮೂಲಕ ಸನ್ನಿಧಿ ಪಾತ್ರದಲ್ಲಿ ಪ್ರತಿಯೊಬ್ಬರ ಮನಸ್ಸು ಗೆದ್ದಿದ್ದರು ತದನಂತರ ಬಿಗ್ ಬಾಸ್ ನಲ್ಲೂ ಕೂಡ ಭಾಗವಹಿಸಿದ್ದರು ಹಲವಾರು ಸಿನಿಮಾ ಹಾಗೂ ಸೀರಿಯಲ್ ಗಳ ಮೂಲಕ ಇವರು ಇನ್ನೂ ಕನ್ನಡದ ಕಿರುತೆರೆ ಹಾಗೂ ಹಿರಿತೆರೆಯಲ್ಲು ಆಕ್ಟಿವ್ ಆಗಿ ಇದ್ದಾರೆ. ಇವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಕೂಡ ಆಕ್ಟಿವ್ ಆಗಿರುತ್ತಾರೆ. ವೈಷ್ಣವಿ ಗೌಡ ಎಂಬ ಹೆಸರನ್ನು ಕೇಳುತ್ತಿದ್ದಂತೆ ಇವರ ಅಭಿಮಾನಿಗಳೆಲ್ಲರೂ ಇವರ ಮದುವೆ ಯಾವಾಗ ಎಂದು ಚರ್ಚಿಸುತ್ತಿದ್ದರು. ಈ ಹಿಂದೆ ಬಿಗ್ ಬಾಸ್ ಶೋ ನಲ್ಲೂ ಕೂಡ ವೈಷ್ಣವಿ ಕೂಡ ರವರು ತಮ್ಮ ಮದುವೆಯ ಬಗ್ಗೆ ಮಾತನಾಡಿದ್ದರು.

 

 

ತದನಂತರ ಇವರು ಬಿಗ್ ಬಾಸ್ ನಿಂದ ಆಚೆ ಬಂದು ಮನೆಯನ್ನು ಕೂಡ ಕಟ್ಟಿ ಅದರ ಅದ್ದೂರಿ ಗೃಹಪ್ರವೇಶವನ್ನು ಕೂಡ ಮಾಡಿದ್ದರು. ಇದೆಲ್ಲದರ ನಡುವೆ ವೈಷ್ಣವಿ ಗೌಡರವರ ಎಂಗೇಜ್ಮೆಂಟ್ ನಾ ವಿಡಿಯೋ ಕೂಡ ವೈರಲ್ ಆಗಿತ್ತು. ಆ ವಿಡಿಯೋದಲ್ಲಿ ನಟಿ ವೈಷ್ಣವಿ ಗೌಡರವರು ತಾವು ಮದುವೆಯಾಗುತ್ತಿರುವ ಹುಡುಗನ ಜೊತೆ ಹಾರವನ್ನು ಕೂಡ ಬದಲಾಯಿಸಿಕೊಂಡಿದ್ದರು. ಆ ಫೋಟೋದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಯಾದ ಶಂಕರ್ ಬಿದರಿ ರವರು ಕೂಡ ಹಾಜರಿದ್ದರು. ಆದ್ದರಿಂದ ಈ ವಿಡಿಯೋ ನೋಡಿದ್ದ ಪ್ರತಿಯೊಬ್ಬರೂ ಕೂಡ ವೈಷ್ಣವಿ ಗೌಡ ರವರು ಎಂಗೇಜ್ಮೆಂಟ್ ಆಗುತ್ತಿದ್ದಾರೆ ಎಂದು ಸುದ್ದಿಯನ್ನು ಹಬ್ಬಿಸಿದ್ದರು ಹಲವು ವಾಹಿನಿಗಳನ್ನು ಕೂಡ ಇದು ಪ್ರಸಾರವಾಗಿತ್ತು.

 

 

ನಟಿ ವೈಷ್ಣವಿ ಗೌಡರವರು ಕೂಡ ಇದಕ್ಕೆ ಸ್ಪಷ್ಟನೆಯನ್ನು ನೀಡಿದ್ದು ಹುಡುಗನ ಕಡೆಯವರು ನಮ್ಮ ಮನೆಗೆ ನೋಡಲು ಬಂದಿದ್ದರು ಆಗ ಹಾರ ಬದಲಾಯಿಸಿಕೊಂಡಿದ್ದೇವೆ ಅಷ್ಟೇ ಎಂದಿದ್ದರು. ಇದಕ್ಕೆ ಅಭಿಮಾನಿಗಳು ಹುಡುಗನ ಕಡೆಯವರು ನೋಡಲು ಬಂದಾಗ ಹಾರ ಬದಲಾಯಿಸಿಕೊಳ್ಳುತ್ತಾರಾ ಎಂದು ಶಂಕೆಯನ್ನು ಕೂಡ ವ್ಯಕ್ತಪಡಿಸಿದ್ದರು. ನಟಿ ವೈಷ್ಣವಿ ಗೌಡರವರು ಎಂಗೇಜ್ಮೆಂಟ್ ಮಾಡಿಕೊಂಡಿರುವ ಹುಡುಗನ ಹೆಸರು ವಿದ್ಯಾಭರಣ ಎನ್ನುದಾಗಿತ್ತು ಇವರು ಗಡಿ ಹಾಗೂ ವಿರಾಜ್ ಎನ್ನುವ ಸಿನಿಮಾಗಳನ್ನು ಮಾಡಿದ್ದರು ಜೊತೆಗೆ ಇನ್ನೂ ಹಲವಾರು ಸಿನಿಮಾಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಇವರು ಮೂಲತಃ ಮಂಡ್ಯ ಭಾಗದವರಾಗಿದ್ದು ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ ಇವರ ವಿರಾಜ್ ಸಿನಿಮಾ ಸದ್ದು ಕೂಡ ಮಾಡಿತ್ತು. ಇವರಿಬ್ಬರ ಎಂಗೇಜ್ಮೆಂಟ್ 11 ನೇ ತಾರೀಕು ನಡೆದಿದ್ದು ಈ ವಿಡಿಯೋ ಹಾಗೂ ಫೋಟೋಗಳು ನೆನ್ನೆ ಮೊನ್ನೆ ವೈರಲ್ ಆಗಿದ್ದವು. ಈಗ ಒಂದು ಆಡಿಯೋ ವೈರಲ್ ಆಗಿದ್ದು ಆ ಆಡಿಯೋದಲ್ಲಿ ವಿದ್ಯಾಭರಣ ರವರ ಮನೆಯವರು ಮೋಸಗಾರರ ಫ್ಯಾಮಿಲಿ ಅವರು ಇದೀಗ ವೈಷ್ಣವಿ ಗೌಡರವರ ಮನೆಯವರನ್ನು ಬುಟ್ಟಿಗೆ ಹಾಕಿಕೊಂಡಿದ್ದಾರೆ ಎಂದು ಚರ್ಚೆಗಳು ಆಗಿವೆ ಈ ಆಡಿಯೋದಲ್ಲಿ ಮಾತನಾಡಿದ ಒಬ್ಬರು ನಟಿಯಾಗಿದ್ದು ಇನ್ನೊಬ್ಬರು ವಿದ್ಯಾಭರಣ ರವರ ರವರಿಂದ ಮೋಸ ಹೋದ ಹುಡುಗಿ ಎಂದು ಹೇಳಲಾಗುತ್ತಿದೆ.

 

 

ವೈಷ್ಣವಿ ಗೌಡ ರವರ ಬಗ್ಗೆ ವೈರಲ್ ಆಗಿರುವ ಆಡಿಯೋದಲ್ಲಿ ಇಬ್ಬರು ಹುಡುಗಿಯರು ವಿದ್ಯಾಭರಣ ರವರ ಬಗ್ಗೆ ಮಾತನಾಡಿ ಇವರ ಫ್ಯಾಮಿಲಿ ಫುಲ್ ಫೇಕ್ ಎಲ್ಲಾ ಹುಡುಗಿಯರಿಗೂ ಇವರು ಮೋಸ ಮಾಡುತ್ತಾರೆ ವೈಷ್ಣವಿ ರವರನ್ನು ಕೂಡ ಹಲವು ದಿನಗಳಿಂದ ಇವರ ಮನೆಗೆ ಕರೆದುಕೊಂಡು ಹೋಗುತ್ತಿದ್ದಾರೆ ಹಲವಾರು ಪಾರ್ಟಿಗಳಿಗೂ ಕೂಡ ಕರೆದುಕೊಂಡು ಪಕ್ಕದಲ್ಲಿ ಕುಳಿತುಕೊಂಡು ಕುಡಿಯುವ ವಿಡಿಯೋ ಕೂಡ ನನ್ನ ಬಳಿ ಇದೆ. ಯಾರಾದರೂ ಒಬ್ಬ ಹುಡುಗ ಪ್ರೀತಿ ಮಾಡುತ್ತಿದ್ದೇನೆ ಎಂದು ಒಂದು ಹುಡುಗಿಯನ್ನು ಮನೆಗೆ ಕರೆದುಕೊಂಡು ಹೋದರೆ ಯಾವ ತಂದೆ ತಾಯಿ ತಾನೇ ಏನೆಂದು ವಿಚಾರಿಸದೆ ಒಪ್ಪಿಕೊಳ್ಳುತ್ತಾರೆ ವೈಷ್ಣವಿರವರಿಗೆ ತಂದೆ ಬೇರೆ ಇಲ್ಲ ಹಾಗಾಗಿ ಇವಳನ್ನು ಮದುವೆಯಾಗಿ ಮೋಸ ಮಾಡಬಹುದು ಎಂದು ನಂಬಿಸಿ ಈ ರೀತಿ ಮಾಡುತ್ತಿದ್ದಾರೆ ಎಂದು ಆಡಿಯೋ ವೈರಲ್ ಆಗಿದೆ.

ವಿದ್ಯಾಭರಣರವರ ಮನೆಗೆ ಎಷ್ಟು ಜನ ಹುಡುಗಿಯರು ಬರುತ್ತಾರೆ ಹೋಗುತ್ತಾರೆ ಎಂದು ನನಗೆ ಗೊತ್ತಿದೆ ದಸರಾ ಹಬ್ಬದ ದಿನವೂ ಕೂಡ ವೈಷ್ಣವಿ ಅವರನ್ನು ತಮ್ಮ ಮನೆಗೆ ಕರೆಸಿಕೊಂಡು ಮುದ್ದು ಮಾಡಿ ಊಟ ತಿನ್ನಿಸಿ, ಮನೆಯಲ್ಲಿ ರೆಸ್ಟ್ ಮಾಡು ಎಂದೆಲ್ಲ ಹೇಳುತ್ತಿದ್ದರು. ಇದಕ್ಕಿಂತ ಮೊದಲು ವಿದ್ಯಾಭರಣ ರವರ ತಾಯಿಯ ಬರ್ತಡೇ ಇತ್ತು. ಆಗ ಕೂಡ ನಾನು ಅವರ ಮನೆಗೆ ಹೋಗಿದ್ದೆ ವಿದ್ಯಾಭರಣ ಒಂದು ಕ್ರಿಶ್ಚಿಯನ್ ಹುಡುಗಿಯನ್ನು ಕರೆದುಕೊಂಡು ಬಂದಿದ್ದ ಅವರ ತಾಯಿ ತನ್ನ ಸೊಸೆಯಂತೆ ಹೇಳಿಕೊಂಡು ಮುದ್ದು ಮಾಡುತ್ತಿದ್ದರು.

 

ಈ ಆಡಿಯೋದಲ್ಲಿ ವಿದ್ಯಾಭರಣ ರವರಿಗೆ ಪರಿಚಯವಿದ್ದ ನಟಿ ಕೂಡ ಮಾತನಾಡಿ ನನಗೂ ಕೂಡ ವಿದ್ಯಾಭರಣ ಇದೆ ರೀತಿ ಫ್ರಾಡ್ ಮಾಡಿದ್ದ ನನ್ನ ಮನೆ ಹತ್ತಿರ ಬಂದು ನಾನು ನಿನ್ನನ್ನು ಮದುವೆ ಆಗುತ್ತೇನೆ ನಮ್ಮ ಮನೆಯಲ್ಲಿ ಒಪ್ಪಿಸುತ್ತೇನೆ ಎಂದೆಲ್ಲ ಹೇಳಿದ್ದ ನನಗೆ ಈಗಾಗಲೇ ಮದುವೆ ಫಿಕ್ಸ್ ಆಗಿದ್ದು ನಾನು ಒಪ್ಪಿಗೆ ಸೂಚಿಸಿರಲಿಲ್ಲ ಇವನ ಬಂಡವಾಳ ನನಗೆ ಮೊದಲೇ ಗೊತ್ತಿತ್ತು ಎಂದು ಹೇಳಿದ್ದಾರೆ.

ವಿದ್ಯಾಭರಣರವರಿಂದ ಮೋಸ ಹೋದ ಹುಡುಗಿಯು ಕೂಡ ಅವರ ತಂದೆಯ ಬಗ್ಗೆ ಮಾತನಾಡಿ ನಾವು ಕಾಲೇಜಿನಲ್ಲಿ ಇದ್ದಾಗಲೇ ನಮಗೆಲ್ಲ ಅವರ ತಂದೆ ಮೆಸೇಜ್ ಮಾಡುತ್ತಿದ್ದರು ಅವರ ವಯಸ್ಸಿಗೂ ಕೂಡ ಮರ್ಯಾದೆ ಕೊಡದೆ ಈ ರೀತಿ ನಡೆದುಕೊಳ್ಳುತ್ತಿದ್ದು ಒಂದು ಚೂರು ಸಭ್ಯತೆ ಎಂದು ನನಗೆ ಅನಿಸುವುದಿಲ್ಲ. ದೇವಸ್ಥಾನಕ್ಕೆ ಹೋದರು ಕೂಡ ಕಾಟ ಕೊಡುತ್ತಿದ್ದ ಆ ಮುದುಕನಿಗೆ ಹುಡುಗಿಯರ ಚಪಲ ಇದೆ. ಈಗಲೂ ಕೂಡ ಹುಡುಗಿಯರು ಬೇಕು ಎನ್ನುತ್ತಾನೆ ಅದೇ ರೀತಿ ಅವರ ಮಗ ವಿದ್ಯಾಭರಣ ಕೂಡ ಎಂದರು.

 

 

ವಿದ್ಯಾಭರಣ ಏನಾದರೂ ವೈಷ್ಣವಿ ಅವರನ್ನು ವಿವಾಹವಾದರೆ ಅವರು ಇನ್ನೂ ಒಂದೆರಡು ಮೂರು ವರ್ಷಗಳಲ್ಲಿ ಡೈವೋರ್ಸ್ ಕೊಡುವುದು ಖಚಿತ ಎಂದಿದ್ದಾರೆ. ಇಬ್ಬರು ಹುಡುಗಿಯರು ವೈಷ್ಣವಿ ರವರ ಬಾಳನ್ನು ಉಳಿಸಬೇಕು ಎಂದು ಈ ಆಡಿಯೋವನ್ನು ವೈರಲ್ ಮಾಡಿದ್ದಾರೆ ಈ ಆಡಿಯೋದಲ್ಲಿ ವಿದ್ಯಾ ಭರಣ ನಮ್ಮ ತಂದೆ ತಾಯಿಯ ಮುಂದೆ ಹುಡುಗಿಯರನ್ನು ಹಗ್ ಮಾಡುತ್ತಿದ್ದರು ರೂಮಿಗೆ ಬಾ ಎಂದು ಮೆಸೇಜ್ ಹಾಕುತ್ತಿದ್ದ ಇದೀಗ ಅವನ ಮೋಸದ ಎಲ್ಲಾ ವಿಡಿಯೋ ಗಳನ್ನು ವೈರಲ್ ಮಾಡುತ್ತೇವೆ ಎಂದು ಕೂಡ ಹೇಳಿದ್ದಾರೆ.

1 Trackback / Pingback

  1. ಅಂದು ನಾನು ಮಾಡಿದ ತಪ್ಪಿಗೆ ಇಂದು ಇದೆಲ್ಲಾ ನನಗೆ ಆಗಬೇಕಿತ್ತಾ ಎಂದು ಅಮ್ಮನ ಮಡಿಲಲ್ಲಿ ಮಲಗಿ ಕಣ್ಣೀರಿಟ್ಟ ವೈಷ್

Leave a Reply

Your email address will not be published.


*