ಕನ್ನಡ ಕಿರುತೆರೆಯ ಅಗ್ನಿಸಾಕ್ಷಿ(agnisakshi serial) ಧಾರಾವಾಹಿ ಖ್ಯಾತಿಯ ನಟಿ ಸನ್ನಿಧಿ ಅಲಿಯಾಸ್ ವೈಷ್ಣವಿ ಗೌಡವರ(vaishnavi Gowda engagement) ನಿಶ್ಚಿತಾರ್ಥ ಮೊನ್ನೆ ಅಷ್ಟೇ ಮುರಿದು ಬಿದ್ದಿತ್ತು ನಟಿ ವೈಷ್ಣವಿ ಗೌಡ ವಿರಾಟ್ ಎನ್ನುವ ಚಿತ್ರದ ನಾಯಕ ನಟನಾದ ವಿದ್ಯಾಭರಣ ಎನ್ನುವ ವ್ಯಕ್ತಿಯೊಬ್ಬರನ್ನು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇವರಿಬ್ಬರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಎಲ್ಲಾ ಕಡೆ ಹರಿದಾಡಿದ್ದರೂ ಕೂಡ ನಟಿ ವೈಷ್ಣವಿ ಗೌಡ ನಾವಿಬ್ಬರು ಎಂಗೇಜ್ಮೆಂಟ್ ಆಗಿಲ್ಲ ಇದು ಕೇವಲ ಬಟ್ಟು ಇಡುವ ಶಾಸ್ತ್ರವೆಂದು ಹೇಳಿದ್ದರು. ನಟಿ ವೈಷ್ಣವಿ ಗೌಡ ಹಾಗೂ ನಟ ವಿದ್ಯಾಭರಣ ರವರು ಹಾರ ಬದಲಾಯಿಸಿಕೊಂಡು ಸಿಹಿ ತಿನಿಸಿದ ವಿಡಿಯೋ ಎಲ್ಲಾ ಕಡೆ ವೈರಲ್ ಆಗಿತ್ತು. ಇದೀಗ ನಟಿ ವೈಷ್ಣವಿ ಗೌಡ ನಾನು ಮಾಡಿದ ತಪ್ಪಿನಿಂದಲೇ ಇದೆಲ್ಲಾ ಆಗಿರುವುದು ಎಂದು ಅಮ್ಮನ ಮಡಿಲಲ್ಲಿ ಮಲಗಿ ಕಣ್ಣೀರಿಟ್ಟಿದ್ದಾರೆ.

 

 

ನಟಿ ವೈಷ್ಣವಿ ಗೌಡ ಹಾಗೂ ನಟ ವಿದ್ಯಾಭರಣರವರು(Vidya Bharan) ಎಂಗೇಜ್ಮೆಂಟ್ ಮಾಡಿಕೊಂಡಿದ್ದ ಫೋಟೋ ಹಾಗೂ ವಿಡಿಯೋಗಳು ಎಲ್ಲಾ ಕಡೆ ವೈರಲ್ ಆಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ್ದವು ಈ ಫೋಟೋ ಹಾಗೂ ವಿಡಿಯೋಗಳಲ್ಲಿ ನಿವೃತ್ತ ಐಪಿಎಸ್ ಅಧಿಕಾರಿ ಶಂಕರ್ ಬಿದಿರೆರವರು ಸೇರಿದಂತೆ ಸನ್ನಿಧಿ ಹಾಗೂ ವಿದ್ಯಾಭರಣ ಅವರ ಕುಟುಂಬದ ಅನೇಕ ಸದಸ್ಯರು ಕೂಡ ಇದ್ದರು ಇದನ್ನು ನೋಡಿದ ಅಭಿಮಾನಿಗಳೆಲ್ಲರೂ ಕೂಡ ನಟಿ ಸನ್ನಿಧಿ ಗುಟ್ಟಾಗಿ ಅಥವಾ ಯಾರಿಗೂ ತಿಳಿಸದೆ ತಮ್ಮ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ ಎಂದು ಸುದ್ದಿಯಲ್ಲ ಕಡೆ ಹಬ್ಬಿತು.

 

 

ನಟಿ ವೈಷ್ಣವಿ ಗೌಡ ಈ ಫೋಟೋ ಹಾಗೂ ವಿಡಿಯೋಗಳು ವೈರಲ್ ಆದ ನಂತರ ತಾನೇ ತಮ್ಮ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ಈ ಮದುವೆಗೆ ಒಪ್ಪಿಗೆ ಕೊಟ್ಟಿಲ್ಲ ಹಾಗೆಯೇ ಇದು ಎಂಗೇಜ್ಮೆಂಟ್ ಕೂಡ ಅಲ್ಲ ಎಂದು ತಿಳಿಸಿದರು ವೈಷ್ಣವಿ ರವರು ತಿಳಿಸಿದರು ಈ ಮಾತುಗಳನ್ನು ಕೇಳಿ ಅಭಿಮಾನಿಗಳು ಕೂಡ ಗೊಂದಲಕ್ಕೆ ಒಳಗಾಗಿದ್ದರು

ಕಳೆದ ಎರಡು ದಿನಗಳಿಂದ ವಿದ್ಯಾಭರಣರವರ ವ್ಯಕ್ತಿತ್ವಕ್ಕೆ ಸಂಬಂಧಪಟ್ಟ ಹಾಗೆ ಕೆಲವು ಆಡಿಯೋಗಳು ಕೂಡ ಅಪ್ಲೋಡ್ ಆಗಿದ್ದವು ಕಿರುತೆರೆ ನಟಿ ಎಂದು ಹೇಳಿಕೊಂಡಿರುವ ಒಬ್ಬಳು ಯುವತಿ ಹಾಗೂ ಇನ್ನೋರ್ವ ನಟಿ ಈ ಆಡಿಯೋದಲ್ಲಿ ಮಾತನಾಡಿದ್ದಾರೆ. ಇವರಿಬ್ಬರೂ ಪರಸ್ಪರ ಒಬ್ಬರಿಗೊಬ್ಬರು ಕರೆ ಮಾಡಿ ಮಾತನಾಡಿರುವ ಆಡಿಯೋ ಇದಾಗಿದ್ದು ಬೇಕೆಂತಲೇ ಸೋಶಿಯಲ್ ಮೀಡಿಯಾದಲ್ಲಿ ಈ ಆಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ. ಆ ಆಡಿಯೋದಲ್ಲಿ ವಿದ್ಯಾಭರಣ ರವರ(Vidya Bharan audio) ವ್ಯಕ್ತಿತ್ವದ ಬಗ್ಗೆ ಮಾತನಾಡಿದ್ದಾರೆ.

 

 

ನಟ ವಿದ್ಯಾಭರಣ ಒಳ್ಳೆಯ ವ್ಯಕ್ತಿತ್ವವನ್ನು ಹೊಂದಿಲ್ಲ ಈಗಾಗಲೇ ನಾಲ್ಕೈದು ಹುಡುಗಿಯರ ಜೊತೆ ಅವನಿಗೆ ಸಂಬಂಧ ಇತ್ತು. ಹಾಗೆಯೇ ವಿದ್ಯಾಭರಣ ರವರ ಎಲ್ಲಾ ಆಟಗಳಿಗೂ ಕೂಡ ಅವರ ಕುಟುಂಬಸ್ಥರ ಸಪೋರ್ಟಿದೆ ವೈಷ್ಣವಿ ರವರನ್ನು ಇವನು ಏನಾದರೂ ಮದುವೆಯಾದಲ್ಲಿ ಆ ಮದುವೆ ಮೂರೆ ವರ್ಷದಲ್ಲಿ ಮುರಿದು ಬೀಳುತ್ತದೆ. ಮೂರೇ ವರ್ಷದಲ್ಲಿ ನಟಿ ವೈಷ್ಣವಿ ಗೌಡ ವಿದ್ಯಾಭರಣರವರಿಗೆ ಡಿವರ್ಸ್(vaishnavi Gowda divorce) ನೀಡುತ್ತಾರೆ. ಹಾಗಾಗಿ ಈ ವಿಷಯವನ್ನು ಮೀಡಿಯಾದವರಿಗೆ ಹಾಗೂ ವೈಷ್ಣವಿ ಗೌಡರವರ ಕುಟುಂಬದವರಿಗೆ ತಿಳಿಸಬೇಕು ಎಂದು ಹೇಳಿ ಅನೇಕ ವಿಷಯಗಳ ಬಗ್ಗೆ ಇಬ್ಬರು ಹುಡುಗಿಯರು ಮಾತನಾಡಿದರು.

 

 

 

ಈ ವಿಚಾರ ನಡೆದ ಬಳಿಕ ನಟಿ ವೈಷ್ಣವಿ ಗೌಡ ಮದುವೆಯಾಗುವ ಮೊದಲೇ ಈ ವಿಚಾರ ನನಗೆ ತಿಳಿದಿದ್ದು ಒಳ್ಳೆಯದಾಯಿತು ಎಂದು ಹೇಳಿ ಆಗಿದ್ದ ಮಾತುಕತೆಯನ್ನು ಮುರಿದುಕೊಳ್ಳುವ ರೀತಿ ಮಾತನಾಡಿದ್ದಾರೆ. ಅತ್ತ ನಟ ವಿದ್ಯಾಭರಣ ಕೂಡ ಈ ಆಡಿಯೋ ಬಗ್ಗೆ ಮಾತನಾಡಿ ಈ ಆಡಿಯೋದಲ್ಲಿ ನನ್ನ ಬಗ್ಗೆ ಕಂಪ್ಲೇಂಟ್ ಮಾಡಿರುವ ವಿಷಯಗಳೆಲ್ಲ ಸುಳ್ಳು ಈಗಾಗಲೇ ಸಂಪಂಗಿ ಪೊಲೀಸ್ ಸ್ಟೇಷನ್ ಮೆಟ್ಟಿಲು ಹತ್ತಿದ್ದೇವೆ ಅವರು ಯಾರು ಯಾವ ಉದ್ದೇಶದಿಂದ ಈ ರೀತಿ ನನ್ನ ಮೇಲೆ ಇಲ್ಲಸಲ್ಲದ ಆಪಾದನೆಗಳನ್ನು ಹೊರಿಸುತ್ತಿದ್ದಾರೆ. ಈ ಆಡಿಯೋವನ್ನು ಮಾಡಿದ್ದು ಯಾರು ಎಂದು ನಾವು ಹುಡುಕುತ್ತಿದ್ದೇವೆ.

ಎಲ್ಲರ ಜೀವನದಲ್ಲಿ ಇರುವಂತೆ ನನ್ನ ಜೀವನದಲ್ಲೂ ಕೂಡ ಒಬ್ಬಳು ಗರ್ಲ್ ಫ್ರೆಂಡ್(Vidya bharana girlfriend) ಇದ್ದಳು ಅಷ್ಟೇ ಆದರೆ ಈ ಆಡಿಯೋ ದಲ್ಲಿ ನನ್ನ ಬಗ್ಗೆ ಇಲ್ಲ ಸಲ್ಲದ ಆರೋಪಗಳು ಇಚ್ಛಾ ಪೂರ್ವಕವಾಗಿಯೇ ಕೇಳಿಬರುತ್ತಿವೆ. ಆ ಹುಡುಗಿಯರು ಬೇಕಂತಲೇ ಈ ರೀತಿ ಮಾತನಾಡಿದ್ದಾರೆ ಎಂದು ಹೇಳಿದ್ದರು. ಸನ್ನಿಧಿ ಕುಟುಂಬದವರು ಈ ದಿನ ಮೀಡಿಯಾದ ಮುಂದೆ ಮಾತನಾಡಿದ್ದಾರೆ.

 

 

ಸದ್ಯಕ್ಕೆ ನಟ ವಿದ್ಯಾಭರಣ ರವರ ತಾಯಿ ಕಳಿಸಿರುವ ಆಡಿಯೋವನ್ನು ಕೂಡ ವೈಷ್ಣವಿ ಗೌಡ ರವರ ತಾಯಿ ಮಿಡಿಯಾಗೆ ನೀಡಿದ್ದಾರೆ. ವೈಷ್ಣವಿ ಗೌಡ ರವರ ತಾಯಿ ಮಾತನಾಡಿ ಈ ಆರೋಪದಲ್ಲಿ ಎಷ್ಟು ಸತ್ಯವಿದೆಯೋ ಸುಳ್ಳು ಇದೆಯೋ ಎನ್ನುವುದು ನನಗೆ ತಿಳಿದಿಲ್ಲ ಆದರೆ ಆ ಹುಡುಗಿಯರು ನನಗೆ ಡೈರೆಕ್ಷನ್ ಕೊಡುವ ರೀತಿ ಮಾತನಾಡಿದ್ದಾರೆ. ಅದು ಸರಿ ಇಲ್ಲವೆನಿಸುತ್ತದೆ ಮೊದಲ ದಿನವೇ ನಾನು ನನ್ನ ಮಗಳಿಗೆ ಈ ವಿಷಯ ತಿಳಿಸಲಿಲ್ಲ ಮೀಡಿಯಾದಲ್ಲಿ ಈ ವಿಷಯ ಪ್ರಸಾರವಾಗುತ್ತಿದ್ದಂತೆ ಮಗಳು ಬಂದು ಇಷ್ಟೆಲ್ಲಾ ಆಗಿದ್ಯಾ ಎಂದು ಕೇಳಿದಳು ಹಾಗೆ ನನಗೆ ಮಾತ್ರ ಯಾಕೆ ಈ ರೀತಿ ಆಗುತ್ತಿದೆ ಎಂದು ದುಃಖಿಸಿದಳು ಇಂದು ಆಕೆ ಒಂದು ಕಾರ್ಯಕ್ರಮಕ್ಕೆ ತೆರಳಿದ್ದರೂ ಕೂಡ ಆಕೆಯಲ್ಲಿ ಮುಂಚೆ ಇದ್ದಂತಹ ಲವಲವಿಕೆ ಇಲ್ಲ ವೈಷ್ಣವಿ ಗೌಡ(vaishnavi Gowda engagement) ಮುಖದಲ್ಲಿ ನೋವು ತುಂಬಿಕೊಂಡಿತ್ತು ಅಂದು ನಾನು ತಿಳಿಯದೆ ಮಾಡಿದ ತಪ್ಪಿಗೆ ಇಂದು ನನ್ನ ಮಗಳು ಕಣ್ಣೀರಿಡುತ್ತಿದ್ದಾಳೆ ಎಂದು ವೈಷ್ಣವಿ ಗೌಡ ರವರ ತಾಯಿ ಮಾತನಾಡಿದ್ದಾರೆ.

Leave a comment

Your email address will not be published. Required fields are marked *