ನಾನು ಈ ಮದುವೆಗೆ ಒಪ್ಪಿಕೊಂಡಿಲ್ಲ ಎಂದು ಕೊನೆಗೂ ನಿಶ್ಚಿತಾರ್ಥದ ಬಗ್ಗೆ ಮೌನ ಮುರಿದ ವೈಷ್ಣವಿ ಗೌಡ ಹೇಳಿದ್ದೇನು?

ಅಗ್ನಿಸಾಕ್ಷಿ ಧಾರಾವಾಹಿ ಹಾಗೂ ಬಿಗ್ ಬಾಸ್ ಶೋ ಮೂಲಕ ಸಿಕ್ಕಾಪಟ್ಟೆ ಸದ್ದು ಮಾಡಿದ್ದ ನಟಿ ವೈಷ್ಣವಿ ಗೌಡ ರವರ ನಿಶ್ಚಿತಾರ್ಥ ಕೂಡ ಇದೀಗ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.ತನ್ನ ನಿಶ್ಚಿತಾರ್ಥ ಸತ್ಯವೋ ಅಥವಾ ಸುಳ್ಳೋ ಎಂದು ವೈಷ್ಣವಿ ಗೌಡ ಸಂದರ್ಶನ ವೊಂದರಲ್ಲಿ ಮಾತನಾಡಿದ್ದಾರೆ. ನಟಿ ವೈಷ್ಣವಿ ಗೌಡ ಅಗ್ನಿಸಾಕ್ಷಿ ಧಾರಾವಾಹಿ ನಂತರ ಯಾವುದೇ ಧಾರವಾಹಿಯಲ್ಲಿ ಕೂಡ ಕಾಣಿಸಿಕೊಂಡಿರಲಿಲ್ಲ ಮೊನ್ನೆಯಷ್ಟೇ ಲಕ್ಷಣ ಧಾರವಾಹಿಯಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿ ಕೊಂಡಿದ್ದರು ಆದರೆ ಇದೀಗ ವೈಷ್ಣವಿ ಗೌಡ ವಿವಾಹ ವಾಗುತ್ತಾರೆ ಎನ್ನುವ ಸುದ್ದಿ ಎಲ್ಲಾ ಕಡೆ ಹಬ್ಬಿದೆ.

 

 

ಇದೀಗ ನಟಿ ವೈಷ್ಣವಿ ಹೊಸ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಕಮ್ ಬ್ಯಾಕ್ ಮಾಡುತ್ತಿದ್ದು ಇದೀಗ ನಟಿ ವೈಷ್ಣವಿ ತಮ್ಮ ನಿಶ್ಚಿತಾರ್ಥ ವಿಷಯದಲ್ಲೂ ಕೂಡ ಸದ್ದು ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ತಮ್ಮ ಎಂಗೇಜ್ಮಂಟ್ ಬಗ್ಗೆ ಮೌನ ಮುರಿದ ವೈಷ್ಣವಿ ಎಂಗೇಜ್ಮೆಂಟ್ ಕುರಿತು ಮಾತನಾಡಿ ಇದು ಪಕ್ಕ ಅರೇಂಜ್ ಮ್ಯಾರೇಜ್ ಹುಡುಗನ ಕಡೆಯವರು ನನ್ನನ್ನು ನೋಡಲು ಬಂದಿದ್ದು ನಿಜ ಆದ್ರೆ ಇದು ಎಂಗೇಜ್ಮೆಂಟ್ ಅಲ್ಲ ನನ್ನನ್ನು ನೋಡಲು ಅವರು ಮನೆಗೆ ಬಂದಿದ್ದರು ಆದರೆ ನಾನಿನ್ನೂ ಮದುವೆಗೆ ಒಪ್ಪಿಗೆ ಸೂಚಿಸಿಲ್ಲ ಹುಡುಗ ಕೂಡ ಹೊಸಬನಾಗಿದ್ದು ಅವನ ಹಿನ್ನೆಲೆ ಗೊತ್ತಿಲ್ಲ ಅದರ ಬಗ್ಗೆ ಯೋಚಿಸಲು ನನಗೂ ಕೂಡ ಕಾಲಾವಕಾಶ ಬೇಕು ಎಂದು ಹೇಳಿದ್ದಾರೆ.

 

ಹುಡುಗನ ಹೆಸರು ವಿಧ್ಯಾಭರಣ ಎಂದಾಗಿದ್ದು ಇವರು ಮೂಲತಃ ಬೆಂಗಳೂರಿನವರು ಇವರು ಬೆಂಗಳೂರಿನಲ್ಲೇ ತಮ್ಮ ಸ್ವಂತ ಉದ್ಯಮ ಹೊಂದಿದ್ದಾರೆ.ಎಂದು ತಿಳಿದು ಬಂದಿದೆ. ನಟಿ ವೈಷ್ಣವಿ ಗೌಡ 2018 ರಲ್ಲಿ ವಿರಾಟ್ ಎನ್ನುವ ಸಿನಿಮಾ ದಲ್ಲಿ ನಾಯಕ ನಟಿಯಾಗಿ ಅಭಿನಯಿಸಿದ್ದು ನಟಿ ವೈಷ್ಣವಿ ಗೌಡ ಇನ್ನು ಹುಡುಗನನ್ನು ಒಪ್ಪಿಲ್ಲವೆಂದು ಹೇಳಿದ್ದಾರೆ.ನಿಶ್ಚಿತಾರ್ಥವಲ್ಲ ಕೇವಲ ಮಾತುಕತೆ ಅಷ್ಟೇ ಎಂಬ ಸ್ಪಷ್ಟೀಕರಣ ನೀಡಿದ ನಟಿ ವೈಷ್ಣವಿ ಗೌಡ. ನೆನ್ನೆಯಿಂದ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿರುವ ಫೋಟೋ ನಟಿ ವೈಷ್ಣವಿ ಗೌಡ ಹಾಗೂ ನಟ ವಿದ್ಯಾಭರಣ ಅವರದ್ದು. ಈ ಜೋಡಿ ನಿಶ್ಚಿತಾರ್ಥ ಮಾಡಿಕೊಳ್ಳಲಾಗಿದೆ ಎನ್ನಲಾದ ಫೋಟೋ ಎಲ್ಲಾ ಕಡೆ ವೈರಲ್ ಆಗುತ್ತಿದ್ದು, ನಟಿ ವೈಷ್ಣವಿಯವರು ಈ ಕುರಿತು ಇದು ಕೇವಲ ಮಾತುಕತೆ ಅಷ್ಟೇ ನಿಶ್ಚಿತಾರ್ಥವಲ್ಲ ನಾನಿನ್ನು ಮದುವೆಗೆ ಒಪ್ಪಿಲ್ಲ ಎಂಬುದನ್ನು ಹೇಳಿಕೊಂಡಿದ್ದಾರೆ.

 

 

ಆದರೆ ವೈಷ್ಣವಿ ಗೌಡ ರವರ ಅಭಿಮಾನಿಗಳು ಇವರಿಗೆ ಕಂಗ್ರಾಜುಲೇಶನ ಎಂದು ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಇನ್ನು ಕೆಲವರು ವೈಷ್ಣವಿ ಹುಡುಗನನ್ನು ಒಪ್ಪಿಲ್ಲವಾದಲ್ಲಿ ಯಾಕೆ ಹಾರ ಹಾಕಿಕೊಂಡ ಫೋಟೋ ಶೇರ್ ಮಾಡಿದ್ದಾರೆ ಎಂದು ಕೇಳುತ್ತಿದ್ದಾರೆ. ಹಾಗೆ ವೈಷ್ಣವಿ ತಮ್ಮ ನಿಶ್ಚಿತಾರ್ಥ ದಿನವನ್ನು ತಮ್ಮ ಅಭಿಮಾನಿಗಳಿಗೆ ಹೇಳಲು ಒಳ್ಳೆಯ ದಿನ ಹುಡುಕುತ್ತಿರಬಹುದು ಎಂದು ಕೂಡ ಕೇಳಿದ್ದಾರೆ. ಆದರೆ ಇದೀಗ ನಟಿ ವೈಷ್ಣವಿ ಗೌಡ ಇದ್ಯಾವುದೇ ಪ್ರಶ್ನೆಗೆ ಉತ್ತರಿಸಿಲ್ಲ ಹಾಗಾಗಿ ಮುಂದಿನ ದಿನಗಳಲ್ಲಿ ಇವರ ನಿಲುವು ಏನೆಂದು ಕಾದು ನೋಡ ಬೇಕಾಗಿದೆ.

Be the first to comment

Leave a Reply

Your email address will not be published.


*