ನಿಜವಾದ ವಿಕೃತಕಾಮಿ ಉಮೇಶರೆಡ್ಡಿ ಈಗ ಎಲ್ಲಿದ್ದಾರೆ ಇವನಿಗೆ ಸುಪ್ರೀಂ ಕೋರ್ಟ್ ಕೊಟ್ಟ ಶಿಕ್ಷೆ ಏನು

Bengaluru: ಈ ಮೊದಲೇ ವಿಕೃತಕಾಮಿ ಉಮೇಶ್ ರೆಡ್ಡಿಗೆ ಕರ್ನಾಟಕದ ಹೈಕೋರ್ಟ್ ಗಲ್ಲು ಶಿಕ್ಷೆಯನ್ನು ವಿಧಿಸಿತ್ತು. ಆದರೆ ಇದನ್ನು ಒಪ್ಪದ ಉಮೇಶ್ ರೆಡ್ಡಿ ಹೈ ಕೋರ್ಟ್ ಅನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಆದರೆ ಇದೀಗ ಸುಪ್ರೀಂ ಕೋರ್ಟ್ ಉಮೇಶ್ ರೆಡ್ಡಿ ಯ ಗಲ್ಲು ಶಿಕ್ಷೆಯನ್ನು ರದ್ದು ಮಾಡಿದ್ದು ಜೀವಾವಧಿ ಶಿಕ್ಷೆ ನೀಡುವುದಾಗಿ ಹೇಳಿಕೆ ಕೊಟ್ಟಿದೆ. ಈ ಸಮಾಚಾರ ದಿಂದ ಉಮೇಶ್ ರೆಡ್ಡಿಗೆ ಬಹುದೊಡ್ಡ ಗಂಡಾಂತರದಿಂದ ತಪ್ಪಿಸಿಕೊಂಡ ರಿಲೀಫ್ ಸಿಕ್ಕಿದೆ.

 

 

1998 ಫೆಬ್ರವರಿ 28ರಂದು ಜಯಶ್ರೀ ಎಂಬ ಮಹಿಳೆಯ ಮೇಲೆ ಕಾಮುಕ ಉಮೇಶ್ ರೆಡ್ಡಿ ಅವರು ಅತ್ಯಾಚಾರ ಹಾಗೂ ಕೊಲೆ ಮಾಡಿದ್ದಾರೆ ಎಂಬ ಪ್ರಕರಣದ ಅಡಿಯಲ್ಲಿ 2007ರಲ್ಲಿ ಬೆಂಗಳೂರಿನ ಸೆಷನ್ ಕೋರ್ಟ್ ಕಾಮುಕ ಉಮೇಶ್ ರೆಡ್ಡಿಗೆ ಗಲ್ಲು ಶಿಕ್ಷೆಯನ್ನು ವಿಧಿಸಿತ್ತು. ನಂತರ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಕೂಡ ಉಮೇಶ್ ರೆಡ್ಡಿಗೆ ನೀಡಿದ್ದ ಗಲ್ಲು ಶಿಕ್ಷೆಗೆ ಒಪ್ಪಿಗೆಯನ್ನು ಸೂಚಿಸಿದ್ದವು. ಆದರೆ ಸೇಶನ್ ಕೋರ್ಟ್ ನೀಡಿದ ತೀರ್ಪಿನಂತೆ ಉಮೇಶ್ ರೆಡ್ಡಿಗೆ ಗಲ್ಲು ಶಿಕ್ಷೆಯನ್ನು ವಿಧಿಸದೆ ಕಳೆದ ಹತ್ತು ವರ್ಷಗಳಿಂದ ಒಂಟಿಯಾಗಿ ಬೆಳಗಾವಿ ಜೈಲಿನಲ್ಲಿ ಇಟ್ಟಿದ್ದಾರೆ. ಇದರಿಂದ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ ಎಂದು ಸುಪ್ರೀಂ ಕೋರ್ಟ್ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಬದಲಿಸಲು ಆದೇಶವನ್ನು ಹೊರಡಿಸಿದೆ.

 

 

ಕಾಮುಕ ಉಮೇಶ್ ರೆಡ್ಡಿ ಮೂಲತಃ ಚಿತ್ರದುರ್ಗದ ನಿವಾಸಿಯಾಗಿದ್ದು ಸಿ ಆರ್ ಪಿ ಎಫ್ ನಲ್ಲಿ ಯೋಧನಾಗಿ ಕೆಲಸ ಮಾಡುತ್ತಿದ್ದ. ಈ ಹಿಂದೆ ಈತ ಕಾಶ್ಮೀರದಲ್ಲಿ ಕೆಲಸ ಮಾಡುತ್ತಿದ್ದು ಸೇನಾಧಿಕಾರಿಯ ಮಗಳ ಮೇಲೆ ಅತ್ಯಾಚಾರಕ್ಕೆ ಪ್ರಯತ್ನಿಸಿ, ಅಲ್ಲಿಂದ ಪರಾಯಾಗಿದ್ದ ಎಂಬ ಸುದ್ದಿಗಳು ಕೇಳಿ ಬಂದಿದ್ದವು..ನಂತರ ಕಾಮುಕ ಉಮೇಶ್ ರೆಡ್ಡಿ ಚಿತ್ರದುರ್ಗ ಜಿಲ್ಲಾ ಸಶಸ್ತ್ರ ಪಡೆಯಲ್ಲಿ ಕೆಲಸಕ್ಕೆ ಸೇರಿದ ಈ ವೇಳೆ ಆತ ತನ್ನ ಹಿಂದಿನ ಕಥೆಯನ್ನೆಲ್ಲ ಮುಚ್ಚಿಟ್ಟು ಸರ್ಕಾರದ ಕಣ್ಣಿಗೆ ಮಣ್ಣೆರೆಚಿ ಜಿಲ್ಲಾ ಸಶಸ್ತ್ರ ಪಡೆಯ ಕೆಲಸ ಮಾಡುತ್ತಿದ್ದ. ಉಮೇಶ್ ರೆಡ್ಡಿ ಯ ಮೇಲೆ ಇಪ್ಪತ್ತಕ್ಕೂ ಹೆಚ್ಚು ಅತ್ಯಾಚಾರ ಹಾಗೂ 17 ಕೊಲೆ ಪ್ರಕರಣಗಳು ದಾಖಲಾಗಿದ್ದು ಅವುಗಳ ಎಲ್ಲಾದಕ್ಕೂ ಸಾಕ್ಷಿ ಕೊರತೆಯಿಂದ ಒಂದು ಪ್ರಕರಣ ಬಿಟ್ಟು ಉಳಿದೆಲ್ಲ ಪ್ರಕರಣಗಳನ್ನು ಕುಲಾಸೆ ಮಾಡಲಾಗಿದೆ.

 

 

ವಿಕೃತಕಾಮಿ ಉಮೇಶ್ ರೆಡ್ಡಿ ಸ್ತ್ರೀಯರ ಒಳಉಡುಪುಗಳನ್ನು ಕದ್ದು ಅವುಗಳನ್ನು ಧರಿಸಿ ವಿಕೃತಕಾಮಿಯಂತೆ ವರ್ತಿಸುತ್ತಿದ್ದ ಎನ್ನುವ ವಿಷಯಗಳು ಮೂಲಗಳಿಂದ ತಿಳಿದುಬಂದಿವೆ. ಈತ ಚಿಕ್ಕ ಮಕ್ಕಳನ್ನು ಕೂಡ ತನ್ನ ಕಾಮುಕ ದೃಷ್ಟಿಯಿಂದ ಬಿಟ್ಟಿರಲಿಲ್ಲ. ಉಮೇಶ್ ರೆಡ್ಡಿ ಯೋಧನಾಗಿದ್ದರೂ ಕೂಡ ಯೋಧನಿಗೆ ಇರಬೇಕಾದ ಕಿಂಚಿತ್ತು ಸ್ವಭಾವಗಳು ಅವನಲ್ಲಿರಲಿಲ್ಲ ಇದೀಗ ಆತ ಗಲ್ಲು ಶಿಕ್ಷೆಯಿಂದ ಜೀವಾವಧಿ ಶಿಕ್ಷೆಗೆ ವರ್ಗಾವಣೆಯಾಗಿದ್ದಾನೆ.

Be the first to comment

Leave a Reply

Your email address will not be published.


*