31 ವರ್ಷದ ಟಿವಿ ಸೆಲೆಬ್ರಿಟಿ ತನ್ನ ಹೂಸನ್ನು ಮಾರಿ ಒಂದು ವಾರದಲ್ಲಿ 38 ಲಕ್ಷ ಸಂಪಾದಿಸುತ್ತಿದ್ದ ಯುವತಿ ಇದೀಗ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಅರೇ ಇವರೆನಪ್ಪ ಹೂಸು ಮಾರಿ ವಾರಕ್ಕೆ 38 ಲಕ್ಷ ಸಂಪಾದನೆ ಮಾಡಬಹುದಾ ಎಂದು ಬಾಯಿ ಮೇಲೆ ಬೆರಳು ಇಟ್ಟುಕೊಳ್ಳಬಹುದು. ಹೌದು ಇದು ಆಶ್ಚರ್ಯವಾದರೂ ಸತ್ಯವಾದ ಸಂಗತಿ.
Stephanie matto ಎಂಬ 31 ವರ್ಷದ ಕಿರುತೆರೆ ನಟಿ ಅಪರಿಚಿತರಿಗೆ ಹೂಸು ಮಾರಾಟ ಮಾಡಿ ಕೋಟಿಗಿಂತಲೂ ಅತ್ಯಧಿಕ ಹಣ ಸಂಪಾದಿದ್ದಾಳೆ. ಅತಿಯಾದರೆ ಅಮೃತವೂ ವಿಷ ಎಂಬ ನಾಣ್ಣುಡಿಯಂತೆ ಈಕೆ ಅತಿಯಾಗಿ ಬಿಡುತ್ತಿದ್ದ ಹೂಸಿನಿಂದಲೇ ಈಕೆ ಇದೀಗ ಆಸ್ಪತ್ರೆಗೆ ದಾಖಲಾಗುವಂತೆ ಮಾಡಿದೆ.
ಈಕೆ ಅತೀಯಾಗಿ ಬಿಡುತ್ತಿದ್ದ ಹೂಸಿನಿಂದಾಗಿ ಈಕೆಗೆ ಸ್ಟ್ರೋಕ್ ಆಗಿರಬಹುದು. ಇದರಿಂದಾಗಿ ನಾನು gas ಬಿಡುವ ಕೆಲಸಕ್ಕೆ ನಿವೃತ್ತಿ ಘೋಷಿಸುತ್ತಿದ್ದೇನೆ. ಆಸ್ಪತ್ರೆಯಲ್ಲಿರುವ ದಿನಗಳನ್ನು ನನ್ನ ಕೊನೆಯ ದಿನಗಳೆಂದು ನಾನು ಭಾವಿಸಿರುವುದಾಗಿ Stephanie matto ತಿಳಿಸಿದ್ದಾರೆ.
ಸ್ಟೆಫನಿ ಮ್ಯಾಟಿಯೊ ತಮ್ಮ ಎದೆಯಲ್ಲಿ ಅತೀಯಾದ ನೋವನ್ನು ಅನುಭವಿಸಿ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಎದೆಯಲ್ಲಿ ಕಂಡು ಬಂದ ನೋವಿನ ಪ್ರಕಾರ ಆಕೆ ಪಾರ್ಶ್ವವಾಯು ಇಲ್ಲವೇ ಹೃದಯಾಘಾತಕ್ಕೆ ತುತ್ತಾಗಿರಬಹುದು ಎಂದು ಭಾವಿಸಿದ್ದಾಳೆ ಎಂದು ಡೈಲಿ ಮೇಲ್ ವರದಿ ತಿಳಿಸಿದೆ.
ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕಕ್ಕೆ ಚಿಕಿತ್ಸೆಗಾಗಿ ದಾಖಲಾಗಿರುವ ಮ್ಯಾಟೋಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಆಕೆಯ ರಕ್ತ ಪರೀಕ್ಷೆ ಮತ್ತು ಇಸಿಜಿ ನಡೆಸಿದ್ದು, ಆಕೆ ಹೂಸುಗಳನ್ನು ಹೆಚ್ಚಾಗಿ ಬಿಡಲು ಬೀನ್ಸ್, ಮೊಟ್ಟೆಗಳು ಮತ್ತು ಬಾಳೆಹಣ್ಣಿನ ಪ್ರೋಟೀನ್ ಶೇಕ್ ಸೇರಿದಂತೆ ಅತಿಯಾಗಿ ಆಹಾರ ಸೇವಿಸಿದ ಪರಿಣಾಮ ಆಕೆಗೆ ಗ್ಯಾಸ್ ರೋಗಲಕ್ಷಣ ಕಾಣಿಸಿದೆ ಎಂದಿದ್ದಾರೆ.
ಮ್ಯಾಟಿಯೊ ತನ್ನ ದೇಹದಿಂದ ಹೆಚ್ಚಿನ ಗ್ಯಾಸ್ ರಿಲೀಸ್ ಮಾಡಲು ವಾರಕ್ಕೆ 50 ಜಾರ್‌ಗಳಷ್ಟು ಹೂಸನ್ನು ಹಿಂಡಿದ್ದಳು. ಇದಕ್ಕಾಗಿ ಆಕೆ ಒಂದೇ ದಿನ ಹೆಚ್ಚು 3 ಪ್ರೋಟೀನ್ ಶೇಕ್‌ಗಳು ಮತ್ತು ಕಪ್ಪು ಬೀನ್ ಸೂಪ್‌ನ ಬೃಹತ್ ಬೌಲ್ ಸೇವಿಸಿದ್ದಾಳೆ. ಇದರಿಂದಾಗಿ ಆಕೆಗೆ ಉಸಿರಾಡಲು ತೊಂದರೆ ಉಂಟಾಗುತ್ತಿತ್ತು. ಅಲ್ಲದೇ ಆಗಾಗ ಹೃದಯ ಭಾಗದಲ್ಲಿ ನೋವು ಕಂಡು ಬರುತ್ತಿತ್ತು. ಇದೀಗ ವೈದ್ಯರು ನನಗೆ ಆಹಾರಕ್ರಮದಲ್ಲಿ ಬದಲಾವಣೆ ಮಾಡಿಕೊಳ್ಳುವಂತೆ ತಿಳಿಸಿದ್ದಾರೆ ಎಂದು ಮ್ಯಾಟೊ ತಿಳಿಸಿದ್ದಾರೆ.
View this post on Instagram