ಪ್ರಬಲ ಭೂಕಂಪ ಸಂಭವಿಸಿದ ಟರ್ಕಿ ಮತ್ತು ಸಿರಿಯಾದಲ್ಲಿ ಸಾವಿನ ಸಂಖ್ಯೆ 24,000 ಸಮೀಪಿಸಿದೆ. ಇದುವರೆಗೆ ಟರ್ಕಿಯಲ್ಲಿ 20,318 ಮತ್ತು ಸಿರಿಯಾದಲ್ಲಿ 3,355 ಮಂದಿ ಸಾವನ್ನಪ್ಪಿದ್ದಾರೆ.
ಪ್ರಕೃತಿ ವಿಕೋಪದಿಂದ ಹಾನಿಗೀಡಾದ ಪ್ರದೇಶದ ಅವಶೇಷಗಳಿಂದ ಶನಿವಾರ ಮಕ್ಕಳನ್ನು ಹೊರತರಲಾಗಿದ್ದು, ರಕ್ಷಣಾ ಕಾರ್ಯಕ್ಕೆ ಆಶಾಕಿರಣವಾಗಿದೆ. ವಿಶ್ವಸಂಸ್ಥೆಯ ಪ್ರಕಾರ ಟರ್ಕಿ ಮತ್ತು ಸಿರಿಯಾದಲ್ಲಿ ಒಟ್ಟು 8.7 ಲಕ್ಷ ಜನರಿಗೆ ಆಹಾರವನ್ನು ತುರ್ತಾಗಿ ಸರಬರಾಜು ಮಾಡಬೇಕಾಗಿದೆ.
ಸಿರಿಯಾದಲ್ಲಿಯೇ 5.3 ಮಿಲಿಯನ್ ಜನರು ತಮ್ಮ ಮನೆಗಳನ್ನು ಕಳೆದುಕೊಂಡಿದ್ದಾರೆ ಎಂದು ಅದು ಹೇಳಿದೆ. ಸೋಮವಾರ ರಿಕ್ಟರ್ ಮಾಪಕದಲ್ಲಿ 7.8 ತೀವ್ರತೆಯ ಭೂಕಂಪ ಸಂಭವಿಸಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.