Transgender Marriage: ಪ್ರೀತಿಯೇ ಹಾಗೆ..ಅದೊಂದು ಮಾಯೆ..ಹೃದಯದಲ್ಲಿ ಮಧುರವಾದ ಭಾವ,ಜಾತಿ-ಧರ್ಮ, ಲಿಂಗ, ವಯಸ್ಸು ಮುಖ್ಯವಲ್ಲ,ಹಾಗೆಯೇ ಕೇರಳದಲ್ಲಿ ಒಂದು ತ್ರಿತೀಯ ಲಿಂಗಿಗಳ ಮದುವೆ ನಡೆಯಿತು. ವಿಶೇಷವೆಂದರೆ ಈ ಜೋಡಿ ಪ್ರೇಮಿಗಳ ದಿನದಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಕೇರಳದ ಪಾಲಕ್ಕಾಡ್ ಜಿಲ್ಲೆಯ ಎಲವಚ್ಚೇರಿಯ ಪ್ರವೀಣ್ ನಾಥ್ ಮತ್ತು ಮಲಪ್ಪುರಂ ಜಿಲ್ಲೆಯ ಕೊಟ್ಟೈಕಲ್ ನ ರಿಶಾನಾ ಐಶು ಪ್ರೀತಿಸಿ ಮದುವೆಯಾಗಿದ್ದಾರೆ. ಪ್ರೇಮಿಗಳ ದಿನದಂದು ಕುಟುಂಬ ಸದಸ್ಯರ ಸಮ್ಮುಖದಲ್ಲಿ ಇಬ್ಬರೂ ವಿವಾಹವಾದರು. ಮೊದಲಿನಿಂದಲೂ ತೃತೀಯಲಿಂಗಿಗಳಾಗಿರುವ ಇವರ ಮದುವೆಗೆ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದರು. ನಂತರ ಎರಡೂ ಮನೆಯವರ ಒಪ್ಪಿಗೆ ಮೇರೆಗೆ ಪ್ರೇಮಿಗಳ ಮದುವೆ ನಡೆದಿದೆ.
ದೇಹದಾರ್ಢ್ಯ ಪಟುವಾಗಿರುವ ಪ್ರವೀಣ್ 2021ರಲ್ಲಿ ಮಿಸ್ಟರ್ ಕೇರಳ ಪ್ರಶಸ್ತಿ ಗೆದ್ದುಕೊಂಡಿದ್ದರು.2022ರಲ್ಲಿ ಮುಂಬೈನಲ್ಲಿ ನಡೆದ ಅಂತಾರಾಷ್ಟ್ರೀಯ ಬಾಡಿ ಬಿಲ್ಡಿಂಗ್ ನಲ್ಲಿ ಟ್ರಾನ್ಸ್ ಜೆಂಡರ್ ವಿಭಾಗದಲ್ಲಿ ಭಾಗವಹಿಸಿದ್ದರು. ತೃತೀಯಲಿಂಗಿ ವಿಭಾಗದಲ್ಲಿ ರಿಶಾನಾ ಐಶು ಮಿಸ್ ಮಲಬಾರ್ ಪ್ರಶಸ್ತಿ ಗೆದ್ದಿದ್ದಾರೆ. ರಿಶಾನಾ ಮಾಡೆಲ್ ಆಗಿಯೂ ಫೇಮಸ್ ಆಗಿದ್ದು, ತ್ರಿಶೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಪಾಲಕ್ಕಾಡ್‌ನಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಟ್ರಾನ್ಸ್ ಸಮುದಾಯದ ಅನೇಕ ಜನರು ಭಾಗವಹಿಸಿದ್ದರು.
ಪ್ರವೀಣ್ 18ನೇ ವಯಸ್ಸಿನಲ್ಲಿ ಟ್ರಾನ್ಸ್ ಜೆಂಡರ್ ಎಂದು ತಿಳಿದು ಬಂದಿದ್ದು, ಈ ವಿಷಯ ತಿಳಿದ ಮನೆಯಲ್ಲಿ ಗಲಾಟೆ ನಡೆದಿದೆ. ಆಗ ಮನೆಯವರು ಪ್ರವೀಣ್ ಅವರನ್ನು ಒಪ್ಪಿಕೊಂಡರು. ಪ್ರವೀಣ್ ಮಹಾರಾಜ್ ಕಾಲೇಜಿನಲ್ಲಿ ಶಿಕ್ಷಣ ಮುಗಿಸಿದರು. ಪ್ರವೀಣ್ ಮತ್ತು ರಿಶಾ ಐಶು ಅವರು ಸಹಯಾತ್ರಿಕ, ಟ್ರಾನ್ಸ್ಜೆಂಡರ್ ಜನರಿಗಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪರಸ್ಪರ ಭೇಟಿಯಾದರು. ಇಬ್ಬರ ನಡುವೆ ಆತ್ಮೀಯತೆ ಬೆಳೆದಿತ್ತು ಎಂದು ತಿಳಿದುಬಂದಿದೆ.
ಆದರೆ ಇಬ್ಬರಿಗೂ ಪ್ರೀತಿ ಸುಲಭವಲ್ಲ. ಅದರಲ್ಲೂ ಐಶು ಮುಸ್ಲಿಂ ಸಮುದಾಯಕ್ಕೆ ಸೇರಿದವಳು. ಅವರನ್ನು ಟ್ರಾನ್ಸ್ಜೆಂಡರ್ ಎಂದು ಒಪ್ಪಿಕೊಳ್ಳಲು ಅವರ ಕುಟುಂಬ ಸಿದ್ಧವಿಲ್ಲ. ಬದಲಾಗಿ ಆಕೆಯನ್ನು ಮಾನಸಿಕ ರೋಗಿಯಂತೆ ನೋಡಲಾಯಿತು. ಆದರೆ ನಂತರದ ದಿನಗಳಲ್ಲಿ ಮನೆಯವರು ಕೂಡ ಆಕೆಯ ಗುರುತನ್ನು ಒಪ್ಪಿಕೊಂಡರು.