ಸಂಚಾರ ನಿಯಮ ಉಲ್ಲಂಘನೆ ದಂಡ ಪಾವತಿಗೆ ಶೇ. 50ರ ರಿಯಾಯಿತಿಯನ್ನು ಇನ್ನೂ ಕೆಲವು ದಿನಗಳವರೆಗೆ ವಿಸ್ತರಿಸುವಂತೆ ಸಂಚಾರ ವಿಭಾಗದ ಹಿರಿಯ ಪೊಲೀಸ್ ಅಧಿಕಾರಿಗಳು ಮೌಖಿಕವಾಗಿ ಮನವಿ ಮಾಡಿದ್ದಾರೆ.
ನಿರೀಕ್ಷೆಗೂ ಮೀರಿ ಸ್ಪಂದನೆ ವ್ಯಕ್ತವಾದ ಹಿನ್ನಲೆಯಲ್ಲಿ ರಿಯಾಯತಿ ದಂಡ ವಿಸ್ತರಣೆಗೆ ಮೌಖಿಕವಾಗಿ ಮನವಿ ಮಾಡಿದರೂ ಸಂಚಾರ ವಿಭಾಗದ ಅಧಿಕಾರಿಗಳು ಯಾವುದೇ ರೀತಿಯ ಸಮ್ಮತಿ ಪಡೆಯಲಿಲ್ಲ. .ಈ ನಡುವೆ ಶೇ. 50 ರಿಯಾಯಿತಿ ದಂಡ ಪಾವತಿ ಕೊನೆಯ ದಿನವಾಗಿದ್ದು, ವಾಹನ ಸವಾರರು ದಂಡ ಪಾವತಿಸಿ ಮುಗಿಬಿದ್ದಿದ್ದು, ಇಂದು 20 ಕೋಟಿಗೂ ಅಧಿಕ ದಂಡ ವಸೂಲಿಯಾಗುವ ನಿರೀಕ್ಷೆ ಇದೆ. ಇಲ್ಲಿಯವರೆಗೆ 1000 ಕೋಟಿಗೂ ಹೆಚ್ಚು ದಂಡ ವಸೂಲಿ ಮಾಡುವ ಸಾಧ್ಯತೆಗಳಿವೆ. ನಿನ್ನೆ 31,11,546 ಪ್ರಕರಣಗಳ ಒಟ್ಟು ದಂಡ 85.83,07,541 ರೂ. ಕಳೆದ ಫೆಬ್ರವರಿ 8 ರಂದು 9,06,94,800 ರೂ., ನಿನ್ನೆ 12,36,35,450 ರೂ. ರಾತ್ರಿ 8ರವರೆಗೆ ದಾಖಲೆಯ 85,83,07,541 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಎಂ.ಎನ್.ಅನುಚೇತ್ ಬಿಡುಗಡೆ ಮಾಡಿದರು.
ದಂಡ ಕಟ್ಟಲು ಇಂದು ಕೊನೆಯ ದಿನವಾಗಿದ್ದು, ವಾಹನಗಳು ಮುಗಿಬಿದ್ದು ಜನಸಾಗರವೇ ಹರಿದು ಬಂದಿದೆ.