ಹೈದರಾಬಾದ್:ಹೃದಯಾಘಾತದಿಂದ ಫುಟ್‌ಪಾತ್‌ನಲ್ಲಿ ಕುಸಿದು ಬಿದ್ದಿದ್ದ ವ್ಯಕ್ತಿಗೆ ಕಾನ್‌ಸ್ಟೆಬಲ್ ಸಿಪಿಆರ್ ನೀಡುವ ಮೂಲಕ ಜೀವ ಉಳಿಸಿದ ಘಟನೆ ತೆಲಂಗಾಣದಲ್ಲಿ ನೆಡೆದಿದೆ.
ಹೈದರಾಬಾದ್ ನ ರಾಜೇಂದ್ರನಗರ ಸಂಚಾರ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್ ರಾಜಿಂದರ್ ಅವರು ರಸ್ತೆಯಲ್ಲಿ ಹೃದಯಾಘಾತದಿಂದ ಬಳಲುತ್ತಿದ್ದ ಬಾಲರಾಜು ಎಂಬ ವ್ಯಕ್ತಿಗೆ ಸಿಪಿಆರ್ ನೀಡಿದರು. ಈ ವಿಡಿಯೋ ವೈರಲ್ ಆಗಿದ್ದು, ಇದನ್ನು ತೆಲಂಗಾಣ ಆರೋಗ್ಯ ಸಚಿವ ಟಿ.ಹರೀಶ್ ರಾವ್ ಮತ್ತು ಇತರರು ಹಂಚಿಕೊಂಡಿದ್ದಾರೆ.
ವೀಡಿಯೊದಲ್ಲಿ, ಟ್ರಾಫಿಕ್ ಕಾನ್‌ಸ್ಟೆಬಲ್ ರಾಜಶೇಖರ್ ಕುಸಿದ ವ್ಯಕ್ತಿಯ ಎದೆಯನ್ನು ಹೊತ್ತುಕೊಂಡು ಪಂಪ್ ಮಾಡುವ ಮೂಲಕ ಅವನನ್ನು ಬದುಕಿಸಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಸದ್ಯ ಕಾನ್ ಸ್ಟೆಬಲ್ ಪ್ರಯತ್ನದಿಂದ ಹೃದಯಾಘಾತಕ್ಕೊಳಗಾದ ಬಾಲರಾಜ್ ಬದುಕುಳಿದಿದ್ದಾರೆ. ಬಾಲರಾಜ್ ಅವರ ಪ್ರಾಣ ಉಳಿಸಿದ ಟ್ರಾಫಿಕ್ ಕಾನ್ ಸ್ಟೇಬಲ್ ರಾಜಶೇಖರ್ ರಾಜೇಂದ್ರನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಸಿಪಿಆರ್ ನೀಡಿದ ನಂತರ ಕಾನ್‌ಸ್ಟೆಬಲ್ ಬಾಲರಾಜ್ ಉಸಿರಾಡಲು ಪ್ರಾರಂಭಿಸಿದರು. ಕೂಡಲೇ 108ಕ್ಕೆ ಕರೆ ಮಾಡಿ ಆಂಬ್ಯುಲೆನ್ಸ್ ಮೂಲಕ ಕರೆದೊಯ್ದರು. ಬಾಲರಾಜ್ ಪ್ರಾಣ ಉಳಿಸಿದ ಟ್ರಾಫಿಕ್ ಪೊಲೀಸ್ ರಾಜಶೇಖರ್ ಗೆ ನೆಟಿಜನ್ ಗಳು ಮೆಚ್ಚುಗೆಯ ಸುರಿಮಳೆ ಹರಿಸುತ್ತಿದ್ದಾರೆ. ದೇವರು ಮಾನವ ರೂಪದಲ್ಲಿ ಬಂದು ಜೀವ ಉಳಿಸಿದ ಎಂದು ಹಲವರು ಕಾಮೆಂಟ್ ಮಾಡುತ್ತಿದ್ದಾರೆ.