ಇದೀಗ ಕನ್ನಡದ ಸಾಕಷ್ಟು ಸೆಲೆಬ್ರಿಟಿಗಳು ಕಿರುತೆರೆ ಹಾಗೂ ಹೀರಿದರೆ ಅಂತ ಹಲವಾರು ಕಲಾವಿದರು ತಮ್ಮ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ ಒಬ್ಬರ ಹಿಂದೆ ಒಬ್ಬರಂತೆ ಸೆಲೆಬ್ರಿಟಿಗಳು ತಮ್ಮ ಮದುವೆ ವಿಚಾರವನ್ನು ಹಂಚಿಕೊಳ್ಳುತ್ತಿದ್ದಾರೆ. ಇತ್ತೀಚಿಗಷ್ಟೇ ವಸಿಷ್ಟ ಸಿಂಹ ಹಾಗೂ ಹರಿಪ್ರಿಯ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ.
ಅಷ್ಟೇ ಅಲ್ಲದೆ ಇಂದು ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ತಮ್ಮನಿಶ್ಚಿತಾರ್ಥವನ್ನು ಅದ್ದೂರಿಯಾಗಿ ಮಾಡಿಕೊಂಡಿದ್ದಾರೆ. ಕಿರುತೆರೆಯ ವಾಸುಕಿ ವೈಭವ ಹಾಗೂ ಚಂದನ ರವರು ಶೀಘ್ರದಲ್ಲೇ ನಿಶ್ಚಿತಾರ್ಥ ಮಾಡಿಕೊಳ್ಳುವವರಿದ್ದಾರೆ. ಕಳೆದ ವಾರವಷ್ಟೇ ಅದಿತಿ ಪ್ರಭುದೇವ ಹಾಗೂ ಉದ್ಯಮಿ ಯಶಸ್ವಿ ರವರು ತಮ್ಮ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು ಇದೀಗ ನಟಿ ಪೂಜಾ ಕೂಡ ತಮ್ಮ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.
ಹಿರಿತೆರೆಯ ನಟಿ ಪೂಜಾ ಇಂದು ಸಪ್ತಪದಿಯನ್ನು ತುಳಿದಿದ್ದು ಇವರು ತಿಥಿ ಎನ್ನುವ ಕನ್ನಡ ಸಿನಿಮಾದಲ್ಲಿ ನಾಯಕ ನಟಿಯಾಗಿ ಅಭಿನಯಿಸಿದ್ದಾರೆ. ತಿಥಿ ಮಾತ್ರವಲ್ಲದೆ ದಾರಿಯ ಯಾವುದಯ್ಯ ವೈಕುಂಟಕ್ಕೆ ಯು ಟರ್ನ್ ಟು ಮುಂತಾದ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ನಟಿ ಪೂಜಾರ್ ಅವರು ಪ್ರೇಮ್ ಕುಮಾರ್ ಎನ್ನುವರನ್ನು ಇಂದು ಕೈ ಹಿಡಿದಿದ್ದು ಪೂಜಾ ರವರ ಪತಿ ಪ್ರೇಮ್ ಕುಮಾರ್ ರವರು ವೃತ್ತಿಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ.
ತಿಥಿ ಸಿನಿಮಾದ ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನಲ್ಲಿ ತಮ್ಮ ನಿಶ್ಚಿತಾರ್ಥವನ್ನು ಈ ಹಿಂದೆ ಮಾಡಿಕೊಂಡಿದ್ದರು ಇವರ ನಿಶ್ಚಿತಾರ್ಥದ ಸುದ್ದಿ ಸಿಕ್ಕಾಪಟ್ಟೆ ವೈರಲಾಗಿತ್ತು ಇವರು ತಿಥಿ ಸಿನಿಮಾದಲ್ಲಿ ಕಾವೇರಿ ಎನ್ನುವ ಪಾತ್ರವನ್ನು ಮಾಡಿದ್ದರು ಇಂದು ತಿಥಿ ಸಿನಿಮಾದ ನಟಿ ತಮ್ಮ ಆಪ್ತರು ಸ್ನೇಹಿತರು ಹಾಗೂ ಕುಟುಂಬದ ಸದಸ್ಯರ ಸಮ್ಮುಖದಲ್ಲಿ ವಿವಾಹವಾಗಿದ್ದಾರೆ.
ನಟಿ ಪೂಜಾ ಅವರು ತಿಥಿ ಎನ್ನುವ ಸಿನಿಮಾದ ಮೂಲಕ ಹೆಚ್ಚು ಪ್ರಸಿದ್ಧಿಯನ್ನು ಪಡೆದುಕೊಂಡಿದ್ದು ಈ ಚಿತ್ರದಲ್ಲಿ ಅತ್ಯುತ್ತಮ ಪೋಷಕ ನಟಿ ಎಂದು ರಾಜ್ಯ ಪ್ರಶಸ್ತಿಯನ್ನು ಕೂಡ ಪಡೆದುಕೊಂಡಿದ್ದರು ನಟಿ ಪೂಜಾ ಕೂಡ ತಮ್ಮ ಮದುವೆಯ ವಿಚಾರವಾಗಿ ಮಾತನಾಡಿ ಈ ಮದುವೆಯು ಅರೆಂಜ್ ಮ್ಯಾರೇಜ್ ಆಗಿತ್ತು ನಮ್ಮ ಕುಟುಂಬದವರೆಲ್ಲ ಕುಳಿತು ಮಾತನಾಡಿ ಈ ಮದುವೆ ವಿಚಾರದ ಬಗ್ಗೆ ಡಿಸಿಜನ್ ತೆಗೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಪ್ರೇಮ್ ಕೂಡ ನನ್ನನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದು ನಾನು ಕೂಡ ಇಷ್ಟಪಟ್ಟೆ ಮದುವೆಯಾಗುತ್ತಿದ್ದೇನೆ. ಮದುವೆಯ ನಂತರ ನಾನು ಸಿನಿಮಾ ರಂಗದಲ್ಲಿ ಮುಂದುವರೆಯುತ್ತೇನೆ ಎಂಬುದರ ಬಗ್ಗೆ ನನಗೆ ಅನುಮಾನವಿದೆ ಎಂದಿದ್ದಾರೆ.
ನಟಿ ಪೂಜಾ ಅವರು ಮೂಲತಃ ಇಂಜಿನಿಯರ್ ಆಗಿದ್ದು ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ತಮ್ಮ ಬಿಡುವಿನ ಸಮಯದಲ್ಲಿ ಸಿನಿಮಾಗಳಲ್ಲಿ ಅಭಿನಯಿಸುತ್ತಿರುವ ನಟಿ ಪೂಜಾರವರು ಉತ್ತಮ ಕಥೆ ಹಾಗೂ ಪಾತ್ರಗಳು ಸಿಕ್ಕಲ್ಲಿ ಮಾತ್ರ ಹೊಸ ಸಿನಿಮಾಗಳಲ್ಲಿ ಅಭಿನಯಿಸುತ್ತೇನೆ ಇಲ್ಲವಾದಲ್ಲಿ ನಾನು ನನ್ನ ಐಟಿ ಕ್ಷೇತ್ರದಲ್ಲಿ ನನ್ನ ಕೆಲಸವನ್ನು ಮುಂದುವರಿಸುತ್ತೇನೆ ಎಂದಿದ್ದಾರೆ ಇದೀಗ ನಟಿ ಪೂಜಾ ಪ್ರೇಮ್ ಕುಮಾರ್ ಎನ್ನುವವರನ್ನು ವಿವಾಹವಾಗಿದ್ದಾರೆ.