ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಮ್ಮನ್ನು ಅಗಲಿ ಒಂದು ವರ್ಷವಾದ್ರೂ ಅವರ ನೆನಪು ಮರೆಯಲು ಆಗುತ್ತಿಲ್ಲ. ಅವರ ಜನ್ಮ ದಿನದ ಅಂಗವಾಗಿ ಮಾರ್ಚ್ 17 ರಂದು ಪುನೀತ್ ಸಮಾಧಿ ಎದುರು ಅಪ್ಪು ಅವರನ್ನು ನೆನೆಯುತ್ತಿದ್ದ ಸಂದರ್ಭದಲ್ಲಿ ಪುನೀತ ಅವರ ಪುತ್ರಿ ಧೃತಿ ಪುನೀತ್ ಅವರನ್ನು ನೆನೆದು ಕಣ್ಣೀರುಡುತ್ತಿದ್ದ ಸಂದರ್ಭದಲ್ಲಿ ರಾಘವೇಂದ್ರ ರಾಜಕುಮಾರ್ ಅವರ ಸುಪುತ್ರ ಯುವ ರಾಜಕುಮಾರ್ ಅವರು ದೃತಿ ಪುನೀತ್ ರಾಜ್ ಕುಮಾರ ಅವರನ್ನು ನಗೆಗಡಲಲ್ಲಿ ತೇಲಿಸಿದ ಸನ್ನಿವೇಶ ನಡೆದಿದೆ.

 

 

ದುರಾದೃಷ್ಟವಶಾತ್ ಪುನೀತ್ ರಾಜ್‌ಕುಮಾರ್ ಇಂದು ನಮ್ಮೊಂದಿಗೆ ಇಲ್ಲ. ಆದರೆ ಅಭಿಮಾನಿಗಳು ನೆಚ್ಚಿನ ಅಪ್ಪು ಅವರ 47ನೇ ಜನ್ಮ ದಿನವನ್ನು ಆಚರಿಸುತ್ತಿದ್ದರು. ಈ ನಮ್ಮೊಂದಿಗೆ ಇದ್ದಿದ್ದರೆ ತಮ್ಮ 47ನೇ ವರ್ಷದ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದರು. ಆದರೆ ದೈಹಿಕವಾಗಿ ಪುನೀತ್ ರಾಜಕುಮಾರ ಅವರು ನಮ್ಮೊಂದಿಗೆ ಇಲ್ಲ ಎಂಬುದನ್ನು ಅರಿತ ಪುನೀತ್ ಪುತ್ರಿ ಸಪ್ಪನೆ ಮುಖ ಹಾಕಿಕೊಂಡು ಪುನೀತ್ ಸಮಾಧಿ ಬಳಿ ನಿಂತಿದ್ದರು.

 

 

ಸದಾಶಿವನಗರದ ನಿವಾಸದ ಮುಂದೆ ದೊಡ್ಡ ಜಾತ್ರೆಯೇ ನಡೆಯುತ್ತಿತ್ತು. ಪುನೀತ್ ರಾಜ್‌ಕುಮಾರ್‌ಗೆ ಶುಭ ಕೋರಲು ನೂರಾರು ಜನರು ಅವರ ಮನೆ ಮುಂದೆ ಜಮಾಯಿಸುತ್ತಿದ್ದರು. ಅಪ್ಪುಗಾಗಿ ಫ್ಯಾನ್ಸ್ ತರಹೇವಾರಿ ಕೇಕ್‌ಗಳನ್ನ ತರುತ್ತಿದ್ದರು. ತಮ್ಮ ಜನ್ಮದಿನವನ್ನು ಅಭಿಮಾನಿಗಳಿಗಾಗಿಯೇ ಜನ್ಮ ದಿನದಂದು ಸಮಯವನ್ನು ಮೀಸಲಿಡುತ್ತಿದ್ಧರು. ಇದನ್ನೆಲ್ಲ ನೆನೆದ ಧೃತಿ ಪುನೀತ್ ರಾಜಕುಮಾರ ಅಪ್ಪು ಸಮಾಧಿ ಬಳಿ ಸುಮ್ಮನೆ ನಿಂತ ವೇಳೆ ರಾಘವೇಂದ್ರ ರಾಜಕುಮಾರ್ ಅವರ ಪುತ್ರ ಯುವ ರಾಜ್ ಕುಮಾರ ತಮಾಷೆ ಮಾಡುವ ಮೂಲಕ ತಮ್ಮ ಸಹೋದರಿಯನ್ನು ನಗುವಂತೆ ಮಾಡಿರುವ ದೃಶ್ಯಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

Leave a comment

Your email address will not be published. Required fields are marked *