ನಟ ಶಿವರಾಜ್ ಕುಮಾರ್(Shiva Rajkumar) ಇದೀಗ ತಮ್ಮ 125ನೇ ಚಿತ್ರ(125th movie) “ವೇದ” (Veda)ಚಲನಚಿತ್ರದ ಪ್ರಮೋಷನ್ ನಲ್ಲಿ ಬಿಸಿಯಾಗಿದ್ದು ಮೊನ್ನೆ ಅಷ್ಟೇ ಹೊಸಪೇಟೆಗೆ ಕೂಡ ಸಿನಿಮಾ ಪ್ರಮೋಷನ್ ಗಾಗಿ ಬಂದಿದ್ದರು ಇದೀಗ ಚಿತ್ರದುರ್ಗದಲ್ಲಿ ತಮ್ಮ ಸಿನಿಮಾ ಪ್ರಮೋಷನ್ ಮಾಡುತ್ತಿದ್ದಾರೆ. ಈ ವೇಳೆ ಸುದ್ದಿಗೋಷ್ಠಿಯಲ್ಲಿ ಶಿವರಾಜ್ ಕುಮಾರ್ ಮಾತನಾಡಿ ತಮ್ಮ 125 ಚಿತ್ರವಾದ ವೇದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ವೇದ ಒಂದು ಹೊಸ ಬ್ಯಾನರ್ ಸಿನಿಮಾ ವಾಗಿದ್ದು ಗೀತಾ ಪಿಕ್ಚರ್ಸ್ ಬ್ಯಾಗರ್(Geeta pictures) ಅಡಿಯಲ್ಲಿ ನಿರ್ಮಿಸುತ್ತಿರುವ ಮೊದಲನೇ ಸಿನಿಮಾ ಆಗಿದೆ.
ವೇದ ಸಿನಿಮಾವನ್ನು ಯುವಕರನ್ನು ಮನಗಂಡು ಮಾಡಿರುವ ಸಿನಿಮಾ ವಾಗಿದ್ದು ಎಲ್ಲರಿಗೂ ಕೂಡ ಇದು ಇಷ್ಟವಾಗುತ್ತದೆ. ಇಂದು ಓಟಿಟಿ ಯಲ್ಲಿ ಹಲವಾರು ಚಿತ್ರಗಳು ಬಿಡುಗಡೆಯಾಗುತ್ತಿತ್ತು ಮೊಬೈಲ್ ನಲ್ಲಿ ಸಿನಿಮಾ ನೋಡುವುದಕ್ಕಿಂತ ಥಿಯೇಟರ್ನಲ್ಲಿ ಮಜಾ ಇರುತ್ತದೆ. ವೇದ ಸಿನಿಮಾದಲ್ಲಿ ಸಾಮಾಜಿಕ ಸಂದೇಶ ಕೂಡ ಇದ್ದು ಈ ಚಿತ್ರದಲ್ಲಿ ಅರುಣ್ ಸಾಗರ್ ಮಗಳು ಅದಿತಿ ಸಾಗರ್ (Arun Sagar daughter Aditi Sagar)ಕೂಡ ಅಭಿನಯಿಸುತ್ತಿದ್ದಾರೆ.
ವೇದ ಸಿನಿಮಾ ಆಕ್ಷನ್ ಸಿನಿಮಾ ವಾಗಿದ್ದು ಇದರಲ್ಲಿ ಹಾಡು ಮನರಂಜನೆ ಎಲ್ಲವೂ ಕೂಡ ಇದೆ. ನನ್ನ ಅಭಿಮಾನಿಗಳಿಗೆ ಈ ಚಿತ್ರ ಇಷ್ಟವಾಗುತ್ತದೆ ಎಂದು ನಾನು ನಂಬಿದ್ದೇನೆ ಎಂದು ತಮ್ಮ ಕ್ಷೇತ್ರದ ಬಗ್ಗೆ ಭರವಸೆಯ ಮಾತುಗಳನ್ನು ಹೇಳಿದ್ದಾರೆ. ಶಿವರಾಜ್ ಕುಮಾರ್ ಚಿತ್ರರಂಗಕ್ಕೆ ಪ್ರವೇಶ ಮಾಡಿ ಇದೀಗಾಗಲೇ 36 ವರ್ಷಗಳಾಗಿದ್ದು ವೇದ ಸಿನಿಮಾ ಶಿವರಾಜ್ ಕುಮಾರ್ ರವರ 125ನೇ ಸಿನಿಮಾವಾಗಿದೆ. ವೇದ ಚಿತ್ರ ಡಿಸೆಂಬರ್ 23ರಂದು ತೆರೆ ಕಾಣಲಿದ್ದು ಚಿತ್ರವನ್ನು ನೋಡಿ ಎಂದು ಶಿವರಾಜ್ ಕುಮಾರ್ ಮನವಿ ಮಾಡಿಕೊಂಡಿದ್ದಾರೆ.
ವೇದ ಚಿತ್ರದ ಪ್ರಮೋಷನ್ ವೇಳೆ ವೇದ ಚಿತ್ರದ ವಿಲನ್ ಡಿ ಬಾಸ್ ದರ್ಶನ್ ಅಭಿನಯದ ಸಂಗೊಳ್ಳಿ ರಾಯಣ್ಣ ಸಿನಿಮಾದ ಡೈಲಾಗ್ ಒಂದನ್ನು ಹೇಳಿದ್ದಾರೆ ಇದನ್ನು ಕೇಳುತ್ತಿದ್ದಂತೆ ಅಭಿಮಾನಿಗಳೆಲ್ಲರೂ ಸಿಳ್ಳೆ ಚಪ್ಪಾಳೆ ಹೊಡೆದಿದ್ದಾರೆ.