ರೆಬಲ್ ಸ್ಟಾರ್ ಅಂಬರೀಶ್ ಹಾಗೂ ಸುಮಲತಾ ದಂಪತಿಗಳ ಪುತ್ರ ಅಭಿಷೇಕ್ ಅಂಬರೀಶ್ ರವರ ನಿಶ್ಚಿತಾರ್ಥವು ಇಂದು ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಹೋಟೆಲಲ್ಲಿ ನಡೆದಿತ್ತು. ಕ್ಯಾತ ಡಿಸೈನರ್ ಪ್ರಸಾದ್ ಬಿದ್ದಪ್ಪ ರವರ ಪುತ್ರಿ ಅವಿವಾರವರ ಜೊತೆ ಅಭಿಷೇಕ್ ಅಂಬರೀಶ್ ತಮ್ಮ ನಿಶ್ಚಿತಾರ್ಥವನ್ನು ಅದ್ದೂರಿಯಾಗಿ ಮಾಡಿಕೊಂಡಿದ್ದಾರೆ. ಸುಮಲತಾ ಅಂಬರೀಶ್ ತಮ್ಮ ಮಗ ಅಭಿಶೇಕ್ ನಿಶ್ಚಿತಾರ್ಥ ತುಂಬಾ ಅದ್ದೂರಿಯಾಗಿ ನೆರವೇರಿಸಿ ಕೊಟ್ಟಿದ್ದಾರೆ. ನೆನ್ನೆ ಎಷ್ಟೇ ಅಭಿಷೇಕ್ ಹಾಗೂ ಅವಿವ ಉಂಗುರವನ್ನು ಬದಲಾಯಿಸಿಕೊಂಡಿದ್ದಾರೆ ಶೀಘ್ರದಲ್ಲೇ ಇಬ್ಬರ ವಿವಾಹವು ಕೂಡ ನಡೆಯಲಿದೆ.
ಅಭಿಷೇಕ್ ಅಂಬರೀಶ್ ಎಂಗೇಜ್ಮೆಂಟ್ ಅವರ ಮನೆಯಲ್ಲಿ ಸಂಭ್ರಮ ಮನೆ ಮಾಡಿತ್ತು ಬೆಂಗಳೂರಿನ ಖಾಸಗಿ ಹೋಟೆಲ್ ಒಂದರಲ್ಲಿ ಅವಿವಾ ಬಿದ್ದಪ್ಪ ರವರ ಜೊತೆ ಅಭಿಷೇಕ್ ಅಂಬರೀಶ್ ಅದ್ದೂರಿಯಾಗಿ ತಮ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಈ ಸಮಾರಂಭದಲ್ಲಿ ಅಭಿಷೇಕ್ ಅಂಬರೀಶ್ ರವರ ತಾಯಿ ಸುಮಲತಾ ನಿರ್ದೇಶಕ ಹಾಗೂ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವಿವ ಬಿದ್ದಪ್ಪ ರವರ ತಂದೆ ಹಾಗೂ ತಾಯಿ ಹಾಜರಿದ್ದು ನವಜೋಡಿಗಳಿಗೆ ಶುಭ ಹಾರೈಸಿದ್ದಾರೆ. ಗಣ್ಯರ ಎದುರಿನಲ್ಲಿ ಅಭಿಷೇಕ ತಮ್ಮ ಪ್ರೀತಿಯ ಹುಡುಗಿ ಉಂಗುರ ತೊಡಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಸ್ಯಾಂಡಲ್ವುಡ್ನ ಹಲವಾರು ನಟ ನಟಿಯರು ಕೂಡ ಭಾಗಿಯಾಗಿದ್ದರು ಅಭಿಷೇಕ್ ಅಂಬರೀಶ್ ರವರ ದೊಡ್ಡಣ್ಣ ಆಗಿರುವ ದರ್ಶನ್ ಕೂಡ ತಮ್ಮ ಕ್ರಾಂತಿ ಸಿನಿಮಾದ ಪ್ರಮೋಶನ್ ನಲ್ಲಿ ಬಿಜಿಯಾಗಿದ್ದರು ಸಹಿತ ಎಂಗೇಜ್ಮೆಂಟಿಗೆ ಬಂದು ನವ ಜೋಡಿಗಳಿಗೆ ಶುಭ ಹಾರೈಸಿದ್ದಾರೆ. ಡಿ ಬಾಸ್ ದರ್ಶನ್ ಅಭಿ ಎಂಗೇಜ್ಮೆಂಟ್ ಗೆ ಬಂದು ವಿಷಸ್ ತಿಳಿಸಿ ಎಲ್ಲರ ಮುಂದೆ ಸುಮಲತಾ ರವರ ಕೆನ್ನೆಯನ್ನು ಗಿಂಡಿ ಇವರು ನನ್ನ ತಾಯಿ ಎಂದು ಕರೆದರು
ಅಭಿಷೇಕ್ ಅಂಬರೀಶ್ ಸ್ನೇಹಿತರಾದ ಪ್ರಜ್ವಲ್ ದೇವರಾಜ್, ಪನ್ನಾಗಭರಣ, ಯಶ್ ಹಾಗೂ ರಾಧಿಕಾ ಪಂಡಿತ್ ದಂಪತಿಗಳು, ನಟಿ ಮೇಘನಾ ರಾಜ್ ಸೇರಿದಂತೆ ಹಲವು ಗಣ್ಯರು ಆಗಮಿಸಿ ಅಭಿಷೇಕ್ ಅಂಬರೀಶ ಹಾಗೂ ಅವಿವಾರವರಿಗೆ ಶುಭ ಹಾರೈಸಿದ್ದಾರೆ.
ಅಭಿಷೇಕ್ ಹಾಗೂ ಅವಿವಾ ಅವರದ್ದು ಐದಾರು ವರ್ಷದ ಹಳೆಯ ಪ್ರೇಮಕಥೆಯಾಗಿದ್ದು ಇವರಿಬ್ಬರೂ ಮೊದಲು ವಿದೇಶದಲ್ಲಿ ಭೇಟಿಯಾಗಿದ್ದರು ತದನಂತರ ಇವರು ತಮ್ಮ ಪ್ರೇಮದ ವಿಷಯವನ್ನು ಅಂಬರೀಶ್ ರವರಿಗೂ ಕೂಡ ತಿಳಿಸಿ ತಾನು ಸಿನಿಮಾದಲ್ಲಿ ಯಶಸ್ವಿಯಾದ ಬಳಿಕ ವಿವಾಹವಾಗುತ್ತೇನೆ ಎಂದು ನಿಶ್ಚಯ ಕೂಡ ಮಾಡಿಕೊಂಡಿದ್ದರು ಆದ್ದರಿಂದಲೇ ಅವಿವಾ ಅಭಿಷೇಕ್ ತಮ್ಮ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದು ಜೂನ್ ತಿಂಗಳಿನಲ್ಲಿ ಇವರಿಬ್ಬರ ಮದುವೆ ಬೆಂಗಳೂರಿನಲ್ಲಿ ನಡೆಯಲಿದೆ.
ಅವಿವಾ ಹಾಗೂ ಅಭಿ ಅರತಕ್ಷತೆಯನ್ನು ಸುಮಲತಾ ರವರು ಮಂಡ್ಯದಲ್ಲಿ ಕೂಡ ನಡೆಸಲು ಆಸೆ ಪಟ್ಟಿದ್ದಾರೆ.ಇದೀಗ ಅಭಿ ಅವಿವಾಗೆ ತೊಡಿಸಿರುವ ಉಂಗುರದ ಬೆಲೆ ಎಷ್ಟು ಎನ್ನುವ ವಿಷಯ ಎಲ್ಲಾ ಕಡೆ ವೈರಲಾಗುತ್ತಿದೆ. ಅಭಿಷೇಕ್ ತಮ್ಮ ಪ್ರೀತಿಯ ಹುಡುಗಿ ಅವಿವಾಗೆ ವಜ್ರದ ಉಂಗುರವನ್ನು ತೊಡಿಸಿದ್ದು ಈ ಉಂಗುರವನ್ನು ವಿಶೇಷವಾಗಿ ಪುಣೆಯಲ್ಲಿ ಮಾಡಿಸಿದ್ದರಂತೆ ಅಭಿಷೇಕ್ ಅವಿವಾಗೆ ತೊಡಿಸಿರುವ ವಜ್ರದ ಉಂಗುರದ ಬೆಲೆ ಬರೋಬ್ಬರಿ 37 ಲಕ್ಷ ರೂಪಾಯಿ ಎಂದು ಮೂಲಗಳಿಂದ ತಿಳಿದು ಬಂದಿದೆ.