ಡ್ರಾಮಾ ಜೂನಿಯರ್ಸ್ ಮಹೇಂದ್ರನಿಗೆ ಎಷ್ಟು ಲಕ್ಷ ಸಂಭಾವನೆ ಗೊತ್ತಾ: ಜೀ ಕನ್ನಡ ವಾಹಿನಿ ಪ್ರಸಾರವಾಗುತ್ತಿದ್ದ ಡ್ರಾಮಾ ಜೂನಿಯರ್ಸ್ ಎನ್ನುವ ಕಾರ್ಯಕ್ರಮದ ಮೂಲಕ ಮಹೇಂದ್ರ ಸಿಕ್ಕಾಪಟ್ಟೆ ಫೇಮಸ್ ಆಗಿದ್ದ ಡ್ರಾಮಾ ಜೂನಿಯರ್ಸ್ ರಿಯಾಲಿಟಿ ಶೋ ದಿಂದ ಮಹೇಂದ್ರ ಮುನ್ನೆಲೆಗೆ ಬಂದು ಹಲವಾರು ಸಿನಿಮಾ ಹಾಗೂ ಧಾರವಾಹಿಗಳಲ್ಲಿ ನಟಿಸುತ್ತಿದ್ದಾನೆ.

 

 

ಡ್ರಾಮಾ ಜೂನಿಯರ್ಸ್ ಶೋಲ್ಲಿ ಮೊದಮೊದಲು ಸಿಕ್ಕಾಪಟ್ಟೆ ಕಷ್ಟಪಟ್ಟು ತದನಂತರ ಮಹೇಂದ್ರ ಸಕ್ಸಸ್ ಆಗಿ ಹೊರಹೊಮ್ಮಿದ್ದಾನೆ. ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮದಿಂದಲೇ ನನ್ನ ಲೈಫ್ ಶುರುವಾಗಿದೆ ಎಂದು ಮಹೇಂದ್ರ ಹೆಮ್ಮೆಯಿಂದ ಹೇಳಿಕೊಳ್ಳುತ್ತಾನೆ.

ನಾನು ಯಾವುದೇ ಕಾರ್ಯಕ್ರಮದಲ್ಲಿ ಚಾನ್ಸ ಸಿಕ್ಕಾಗ ನಾನು ನನ್ನ ನಟನೆ ಹಾಗೂ ಕ್ಯಾರೆಕ್ಟರ್ ಬಗ್ಗೆ ಮಾತ್ರ ಕೇಳಿ ತಿಳಿದುಕೊಳ್ಳುತ್ತೇವೆ ನನ್ನ ಸಂಬಾವನೆಯ ಬಗ್ಗೆ ಅಮ್ಮ ಮಾತನಾಡಿ ಫಿಕ್ಸ್ ಮಾಡುತ್ತಾರೆ ನನ್ನ ಸಂಭಾವನೆಯ ಬಗ್ಗೆ ನಾನು ಅಮ್ಮನ ಬಳಿ ಕೇಳುವುದಿಲ್ಲ ನಾನು ನನ್ನ ಪಾತ್ರದ ಬಗ್ಗೆ ಮಾತ್ರ ಗಮನವಹಿಸುತ್ತೇನೆ ಪೇಮೆಂಟ್ ಬಗ್ಗೆ ಅಮ್ಮನ ಹತ್ತಿರವೇ ಮಾತನಾಡುತ್ತಾರೆ.

 

 

ಅಮ್ಮನ ಮನೆ ಇಲ್ಲಿಯವರೆಗೂ ಯಾವುದೇ ಕಾರ್ಯಕ್ರಮ ಅಥವಾ ನಟಿಸಿರುವ ಸಂಭಾವನೆಯ ಬಗ್ಗೆ ನಾನು ಕೇಳಿಲ್ಲ ಕೆಲವೊಂದರ ಬಗ್ಗೆ ನನಗೂ ಕೂಡ ತಿಳಿದಿದೆ. ಎರಡು ಮೂರು ಸಿನಿಮಾಗಳು ನನಗೆ ಈಗಾಗಲೇ ಸಂಭಾವನೆಯೂ ಕೂಡ ಸಿಕ್ಕಿದೆ ಆದರೆ ಅದರ ಬಗ್ಗೆ ಮಾತನಾಡಬೇಕು ಬೇಡವೋ ಎಂಬುದು ನನಗೆ ತಿಳಿದಿಲ್ಲ ಎಂದು ಮಹೇಂದ್ರ ಹೇಳಿದ್ದಾರೆ.

 

 

ಮಹೇಂದ್ರ ಕಾಂತರಾ ಚಿತ್ರದ ಖ್ಯಾತಿಯ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಅಭಿನಯದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಕಾಸರಗೋಡು ಚಿತ್ರದಲ್ಲಿ ಕೂಡ ನಟಿಸಿದ್ದಾನೆ. ಗೆಳೆಯರು ನಾವು ಗೆಳೆಯರು ಎನ್ನುವ ಚಿತ್ರದಲ್ಲಿ ನಟಿಸಿದ್ದಾನೆ. ಇಷ್ಟೇ ಅಲ್ಲದೆ ಡಿ ಬಾಸ್ ದರ್ಶನ್ ರವರ ಜೊತೆಗೆ ತಾರಕ್ ಎನ್ನುವ ಸಿನಿಮಾದಲ್ಲೂ ನಟಿಸಿದ್ದಾನೆ. ಸದ್ಯಕ್ಕೆ ಮಹೇಂದ್ರ ಜೀ ಕನ್ನಡ ವಾಹಿನಿ ಪ್ರಸಾರವಾಗುತ್ತಿರುವ ಸತ್ಯ ಎನ್ನುವ ಧಾರವಾಹಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾನೆ.

 

 

ಮಹೇಂದ್ರ ಒಬ್ಬ ಬಾಲ ನಟನಾಗಿ ಡ್ರಾಮಾ ಜೂನಿಯರ್ಸ್ ರಿಯಾಯಿತಿ ಶಿವಮೊಗ್ಗ ಮುನ್ನೆಲೆಗೆ ಬಂದಿದ್ದಾನೆ. ಗೆಳೆಯರು ನಾವು ಗೆಳೆಯರು ಎಂಬ ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದ ಮಹೇಂದ್ರ ಗಣೇಶ ಮತ್ತೆ ಬಂದ, ಚಿನ್ನದ ತಾಳಿ, ಜೂಮ್ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಮಹೇಂದ್ರ ಯಾವುದೇ ಸಿನಿಮಾಗಳಿಗೆ ಒಪ್ಪಿಕೊಳ್ಳುವ ಮೊದಲು ಅದರ ಕಥೆಯ ಬಗ್ಗೆ ತಿಳಿದುಕೊಳ್ಳುತ್ತಾನೆ ಪೇಮೆಂಟ್ ವಿಚಾರವಾಗಿ ಅವರ ತಾಯಿಯೇ ಮಾತನಾಡುತ್ತಾರೆ ಎಂದು ಸಂದರ್ಶನದಲ್ಲಿ ಹೇಳಿದ್ದಾನೆ.

Leave a comment

Your email address will not be published. Required fields are marked *