ದೊಡ್ಮನೆ ಅಂದರೆ ಅವರನ್ನು ನೋಡಲು ಜನ ಸಾಗರವೇ ಹರಿದು ಬರುತ್ತೆ ಹೀಗಿರುವಾಗ ಜನರಿಂದ ದೂರ ಹೋಗಲು ಇಡೀ ಕುಟುಂಬದವರು ಸಾಧ್ಯವೇ ಇಲ್ಲ. ಇಂತಹದೇ ಘಟನೆಗೆ ದೊಡ್ಮನೆ ಕುಟುಂಬದ ಕುಡಿಗಳು ಸಾಕ್ಣಿಯಾಗಿದೆ. ದೊಡ್ಡಮನೆ ಕುಟುಂಬದ ಯುವರಾಜಕುಮಾರ, ವಿನಯ ರಾಜಕುಮಾರ, ಪುನಿತ್ ರಾಜಕುಮಾರ ಅವರ ಪುತ್ರಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದಾಗ ಜನರು ಅವರ ಸುತ್ತ ಸೇರಿ, ನೋಡಲು ಮಾತನಾಡಿಸಲು ಮುಗಿಬಿದಿದ್ದಾರೆ
ಇಂತಹ ಸಂದರ್ಭದಲ್ಲಿ ಸ್ವತಃ ತಂಗಿಯ ರಕ್ಷಣೆಗೆ ಯುವವರಾಜಕುಮಾರ ಮತ್ತು ವಿನಯರಾಜಕುಮಾರ ಮುಂದಾಗಿದ್ದು, ತಂಗಿಯನ್ನು ಜನರು ಮುಟ್ಟದಂತೆ ಕಾವಲಾಗಿ ನಿಂತಿದ್ದಾರೆ. ತಂಗಿ ಎಂದರೆ ಎಲ್ಲರಿಗೂ ಅಷ್ಟೆ. ತಮ್ಮ ತಂಗಿ ಯಾವ ಕಷ್ಟ ಅನುಭವಿಸಬಾರದು ಎನ್ನುವುದು ಎಲ್ಲರ ಆಶಯವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಕುಟುಂಬಸ್ಥರು ಕಂಠೀರವ ಸ್ಟುಡಿಯೋಗೆ ತೆರಳಿ ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಲಿದ ಸಂದರ್ಭ ಜನ ಸಾಗರವೇ ಹರಿದು ಬಂದಿದೆ.
ದೊಡ್ಮನೆ ಕುಟುಂಬದ ಕುಡಿಗಳ ಸುತ್ತಲೂ ತಳ್ಳಾಟದ ವಾತಾವರಣ ನಿರ್ಮಾಣವಾಗಿದೆ. ಅಪ್ಪು ಸಮಾಧಿ ಪೂಜೆಯನ್ನು ಅಶ್ವಿನಿ, ಶಿವಣ್ಣ, ಗೀತಾ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ವಿನಯ್ ರಾಜ್ ಕುಮಾರ್ ಸೇರಿ ಕುಟುಂಬಸ್ಥರು ಪೂಜೆ ಸಲ್ಲಿಸಿದರು. ಈ ವೇಳೆ ಪುನಿತ್ ಪುತ್ರಿಯ ರಕ್ಷಣೆಗೆ ಸ್ವತಃ ಅಣ್ಣಂದಿರು ನಿಂತಿದ್ದು ಬಾರಿ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.
ಯುವತಾಜಕುಮಾರ ಮತ್ತು ವಿನಯರಾಜಕುಮಾರ ಅವರು ಈಗಾಗಲೇ ಸಿನಿಮಾ ರಂಗಕ್ಕೂ ಕೂಡ ಕಾಲಿಟ್ಟಿದ್ದಾರೆ. ಅವರ ಚಿಕ್ಕಪ್ಪ ಪುನಿತ್ ರಾಜಕುಮಾರ ಅವರಂತೆ ತಾವು ಸಿನಿಮಾ ರಂಗದಲ್ಲಿ ತಮ್ಮದೇ ಛಾಪು ಮೂಡಿಸಲು ಮುಂದಾಗಿದ್ದಾರೆ. ಅಭಿಮಾನಿಗಳು ಅವರನ್ನು ಯಾವ ರೀತಿ ಸ್ವಾಗತಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.