ಚಿತ್ರರಂಗದಲ್ಲಿ ಆತ್ಮಹತ್ಯೆಗಳು ಸಾವುಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೆ ಇವೆ ಇದೀಗ ಕರ್ನಾಟಕದ ಖ್ಯಾತ ಸಂಗೀತ ನಿರ್ದೇಶಕ ಕರ್ನಾಟಕದ ಸಂಗೀತ ಮಾಂತ್ರಿಕ ಇಡೀ ಕರ್ನಾಟಕದಲ್ಲಿ ಸಂಗೀತ ನಿರ್ದೇಶನವನ್ನು ಮಾಡುತ್ತಿದ್ದ ಸಂಗೀತ ನಿರ್ದೇಶಕ ಸಾವನ್ನಪ್ಪಿದ್ದು ಇದು ಇಡೀ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಆಗಿದೆ.

 

 

ಸಂಗೀತ ನಿರ್ದೇಶಕ ಮನೋರಂಜನ್ ನಿಧನರಾಗಿದ್ದಾರೆ ಸಂಗೀತದಲ್ಲಿ ಹೆಚ್ಚು ಪ್ರಸಿದ್ಧಿಯನ್ನು ಪಡೆದು ಖ್ಯಾತ ನಿರ್ದೇಶಕ ಎಂಬ ಹೆಸರನ್ನು ಕೂಡ ಗಳಿಸಿದ್ದ ಮನೋರಂಜನ್ ಪ್ರಭಾಕರ್ ರವರು ನಿಧನರಾಗಿದ್ದಾರೆ. ಇವರು ಅನಾರೋಗ್ಯದಿಂದ ಬಳಲುತ್ತಿದ್ದು ಇವರ ಅಂತ್ಯಕ್ರಿಯೆ ಇಂದು ನಡೆಯಲಿದೆ ಎಂದು ಅವರ ಕುಟುಂಬದವರು ತಿಳಿಸಿದ್ದಾರೆ.

70ರ ದಶಕದ ಆರಂಭದಲ್ಲಿ ಸಂಗೀತ ನಿರ್ದೇಶನಕ್ಕಾಗಿ ಚಿತ್ರರಂಗಕ್ಕೆ ಕಾಲಿಟ್ಟ ಮನೋರಂಜನ್ ರವರು ಎಂಟು ನೂರಕ್ಕೂ ಅಧಿಕ ಸಂಗೀತ ಆಲ್ಬಮ್ ಗಳನ್ನು ಹೊರ ತಂದಿದ್ದಾರೆ ಜನ ಮೆಚ್ಚಿದ ಮಗ ಕಿಲಾಡಿ ಗಂಡು ಅಶೋಕ ಚಕ್ರ ಸೇರಿದಂತೆ ಹಲವು ಸಿನಿಮಾಗಳಿಗೆ ಸಂಗೀತವನ್ನು ನೀಡಿದ್ದಾರೆ.

 

 

ಸಂಗೀತ ನಿರ್ದೇಶಕ ಮನೋರಂಜನ್ ಪ್ರಭಾಕರ್ ಹಲವಾರು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಯನ್ನು ಕೂಡ ಪಡೆಯುತ್ತಿದ್ದರು ಆದರೆ ನೆನ್ನೆ ಅವರು ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿದ್ದಾರೆ. ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಮನೋರಂಜನ್ ಪ್ರಭಾಕರ್ ಅವರಿಗೆ ಒಬ್ಬ ಪುತ್ರ ಹಾಗೂ ಒಬ್ಬ ಪುತ್ರಿ ಇದ್ದು ಅವರ ಅಂತ್ಯಕ್ರಿಯೆ ಇಂದು ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಮನೋರಂಜನ್ ಪ್ರಭಾಕರ್ ರವರ ಕುಟುಂಬವು ಸಂಗೀತದ ಹಿನ್ನೆಲೆಯನ್ನು ಹೊಂದಿದ್ದು ಮನೋರಂಜನ್ ತಂದೆ ಪಂಡಿತ್ ಬಿಎನ್ ಪಾರ್ಥಸಾರಥಿ ನಾಯ್ಡುರವರು ಸಂಗೀತದಲ್ಲಿ ಅಗಾಧ ವಿಜ್ಞಾನ ಸಂಪತ್ತನ್ನು ಪಡೆದಿದ್ದರೂ.

 

 

ಮನೋರಂಜನ್ ಪ್ರಭಾಕರ್ ಕೂಡ ತಮ್ಮ ತಂದೆಯ ಹಾದಿಯಲ್ಲಿ ಮುನ್ನಡೆಯಬೇಕು ಎಂದು ಬಯಸಿ ಸಂಗೀತ ಕ್ಷೇತ್ರಕ್ಕೆ ಕಾಲಿಟ್ಟು ಸುಮಾರು 800ಕ್ಕೂ ಹೆಚ್ಚು ಸಂಗೀತ ಆಲ್ಬಮ್ ಗಳನ್ನು ಹೊರತಂದಿದ್ದಾರೆ. ಕಾರ್ತಿಕ ದೀಪ ಇನ್ನೂ ಹತ್ತು ಹಲವು ದಾರವಾಹಿಗಳಿಗೆ ಟೈಟಲ್ ಸಾಂಗ್ ಕೂಡ ಮಾಡಿಕೊಟ್ಟಿದ್ದಾರೆ. ತಮ್ಮದೇ ಆದ ಸಂಗೀತ ಅಕಾಡೆಮಿಯನ್ನು ಕೂಡ ಇವರು ಶುರು ಮಾಡಿದ್ದರು

Leave a comment

Your email address will not be published. Required fields are marked *