ಬೆಂಗಳೂರು: ಅಭಿಮಾನಿಗಳ ಹೃದಯದಲ್ಲಿ ಡಿ ಬಾಸ್ ಎಂದೇ ಮನೆ ಮಾಡಿರುವ ನಟ ದರ್ಶನ್ ಅಭಿನಯದ ಸಿನಿಮಾ ಕ್ರಾಂತಿ ತೆರೆ ಕಂಡಿದೆ. ಇದಕ್ಕೂ ಮೊದಲು ಮಾಧ್ಯಮಗಳಿಂದ ದೂರ ಉಳಿದಿದ್ದ ದರ್ಶನ್ ಅವರಿಗೆ ಮತ್ತೊಂದು ಸಮಸ್ಯೆ ಎದುರಾಗಿದೆ. ಈಗ ಎದುರಾಗಿರುವ ಸಮಸ್ಯೆ ದರ್ಶನ ಅಭಿಮಾನಿಗಳಲ್ಲಿ ಆಕ್ರೋಶವನ್ನು ಹುಟ್ಟು ಹಾಕಿದೆ.
ಹೌದು.. ನಟ ದರ್ಶನ ಮಾಧ್ಯಮಗಳಿಂದ ಬ್ಯಾನ್ ಆಗಿದ್ದರು. ಅವರ ಬಗ್ಗೆಯಾಗಲಿ, ಅವರು ಅಭಿನಯದ ಚಿತ್ರವಾಗಲಿ ಯಾವ ಟಿವಿ ನ್ಯೂಸ್ ಗಳಲ್ಲಿ ಪ್ರಸಾರವಾಗುತ್ತಿರಲಿಲ್ಲ.. ಇದರಿಂದ ದರ್ಶನ ಕ್ರಾಂತಿ ಚಿತ್ರದ ಪ್ರಚಾರಕ್ಕೆ ಬೇರೆ ಮಾರ್ಗವನ್ನು ಕಂಡುಕೊಂಡು ಸಾಮಾಜಿಕ ಜಾಲತಾಣ, ಟ್ರೋಲ್ ಗ್ರೂಫ್ ಪೇಜ್ ಅಡ್ಮೀನ್, ಯೂಟ್ಯೂಬರ್ಸ್ ಗಳ ಮೂಲಕ ಕ್ರಾಂತಿ ಸಿನಿಮಾದ ಪ್ರಚಾರ ಕೈಗೊಂಡಿದ್ದರು. ಅದರಿಂದ ಬಹುತೇಕ ಕ್ರಾಂತಿ ಸಿನಿಮಾ ಜನರ ಮನ ಮುಟ್ಟುವಲ್ಲಿ ಯಶಸ್ವಿಯಾಗಿತ್ತು.
ಹೀಗಿರುವಾಗ ದರ್ಶನ ಅವರ ಬಗ್ಗೆ ಟಿವಿ ಒಂದರಲ್ಲಿ ಬಂದ ವರದಿ ಅವರ ಅಪಾರ ಅಭಿಮಾನಿಗಳಿಗೆ ಬೇಸರ ತರಿಸಿದೆ. ಜೊತೆಗೆ ಇದೇ ವಿಡಿಯೋ ಇಟ್ಟುಕೊಂಡು ದರ್ಶನ ಅಭಿಮಾನಿಗಳು ಆಕ್ರೋಶ ಕೂಡ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳಿಂದಲೇ ದೂರ ಉಳಿದಿರುವ ದರ್ಶನ ಅವರ ಕುರಿತು ಕೆಳಮಟ್ಟದ ಭಾಷೆಯಲ್ಲಿ ವರದಿ ಮಾಡಿರುವುದು ಈಗ ವಿವಾದಕ್ಕೆ ಕಾರಣವಾಗಿದೆ. ರಾಜ್ಯಾದ್ಯಂತ ಯಶಸ್ವಿಯಾಗಿ ಮುನ್ನುಗ್ಗುತ್ತಿರುವ, ಕನ್ನಡ ಶಾಲೆ, ಕನ್ನಡ ಶಾಲೆಗಳ ಮಕ್ಕಳ ಕುರಿತು ಕಥೆ ಹೊಂದಿರುವ ಕ್ರಾಂತಿ ಸಿನಿಮಾದ ಕುರಿತು ಕೂಡ ಅಪಪ್ರಚಾರ ಮಾಡಿರುವುದು, ಅವಮಾನ ಮಾಡಿರುವುದು ಎಲ್ಲೇಡೆ ಸದ್ದು ಮಾಡುತ್ತಿದೆ. ಇದೇ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
ದರ್ಶನ ಅವರಿಗೆ ಒಂದರ ನಂತರ ಒಂದು ವಿವಾದ ಸುತ್ತು ಹಾಕಿಕೊಳ್ಳುತ್ತಲೇ ಇದೆ.. ಆದರೆ ಡಿ ಬಾಸ್ ಮಾತ್ರ ಎಲ್ಲಿಯೂ ಈ ಕುರಿತು ಮಾತು ಆಡದೇ ಇರುವುದು ಗಮನಿಸಬೇಕಾದ ಅಂಶವಾಗಿದೆ.
ಒಟ್ಟಿನಲ್ಲಿ ಕ್ರಾಂತಿ ಸಿನಿಮಾ ಮತ್ತು ದರ್ಶನ ಅವರ ಬಗ್ಗೆ ಅಪಪ್ರಚಾರ ಮಾಡಿರುವುದು ಸದ್ದಾಗಿದ್ದು ಅಭಿಮಾನಿಗಳಿಗೆ ನಿರಾಸೆ, ಬೇಸರಕ್ಕೆ ಕಾರಣವಾಗಿದೆ.