ನ್ನಡ ಚಲನಚಿತ್ರ ರಂಗದಲ್ಲಿ ನಟಿಸಿರುವ ಹಲವಾರು ದೊಡ್ಡ ನಟ ನಟಿಯರು ತಾವು ಸ್ಟಾರ್ ಸೆಲೆಬ್ರಿಟಿ ಎಂದು ಬೀಗುವುದಿಲ್ಲ ತಾವು ಸಾಮಾನ್ಯ ವ್ಯಕ್ತಿ ಎಂಬಂತೆ ಎಲ್ಲರ ಬಳಿ ಮಾತನಾಡುತ್ತಾರೆ. ಅಂದರೆ ಅವರು ಒಬ್ಬ ಸಾಮಾನ್ಯ ವ್ಯಕ್ತಿಯ ರೀತಿಯಲ್ಲಿ ಬದುಕಲು ಇಷ್ಟ ಪಡುತ್ತಾರೆ. ಅಂತಹದ್ದೇ ಕೆಲಸ ಮಾಡಿರುವ ಕನ್ನಡದ ಈ ಟಾಪ್ ನಟಿ ಯಾರು ಎಂದರೆ ಅವರೇ ನಟಿ ಕೃತಿ ಕರಬಂಧ(actress Kriti kharbanda)

 

 

ನಟಿ ಕೃತಿ ಕರಬಂಧ ಕನ್ನಡದ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಾಗೆ ಆಕೆಗೆ ಕನ್ನಡದ ಮೇಲೆ ಅಷ್ಟೇ ಪ್ರೀತಿ ಇದೆ. ನಟಿ ಕೃತಿ ಕರಬಂಧ ಅವರಿಗೆ ಯಶಸ್ಸನ್ನು ತಂದು ಕೊಟ್ಟಿದ್ದು ಅವರು ಕನ್ನಡದಲ್ಲಿ ನಟಿಸಿರುವ ಸಿನಿಮಾಗಳು ಕನ್ನಡ ಚಿತ್ರರಂಗದಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಇವರು ಮೊದಲಿಗೆ ಯಶಸ್ಸು ಕಂಡಿದ್ದು ಕನ್ನಡದ ಗೂಗ್ಲಿ(googly movie) ಸಿನಿಮಾದಲ್ಲಿ ಗೂಗ್ಲಿ ಸಿನಿಮಾದಲ್ಲಿ ಕೆಜಿಎಫ್(KGF 2) ಖ್ಯಾತಿಯ ನಟ ಯಶ್(yash) ಹಾಗೂ ಕೃತಿ ಕರಬಂದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.

 

 

ಗೂಗ್ಲಿ ಸಿನಿಮಾದಲ್ಲಿ ನಾಯಕ ನಟಿಯಾಗಿ ಕೃತಿ ಕರಬಂಧ ಜನಪ್ರಿಯತೆಯನ್ನು ಪಡೆದುಕೊಂಡರು ಈ ಸಿನಿಮಾದಲ್ಲಿ ನಾಯಕಿಯಾಗಿ ಜನರ ಗಮನವನ್ನು ಸೆಳೆದಿದ್ದಾರೆ. ಹಾಗಾಗಿ ಕನ್ನಡ ಸಿನಿಮಾಗಳಲ್ಲಿ ಕೃತಿ ಕರಬಂಧ ನಟಿಸಿರುವ ಸುಂದರ ಕ್ಷಣಗಳನ್ನು ನೆನೆಯುತ್ತಾ ಕೃತಿ ಟ್ವೀಟ್(Kriti kharbanda Twitter) ಮಾಡುತ್ತಿದ್ದರು.

 

 

ಕೃತಿ ಕರಬಂದ ಬಾಲಿವುಡ್ನಲ್ಲಿ(Bollywood actress) ಹಲವಾರು ಸಿನಿಮಾಗಳನ್ನು ಮಾಡಿದ್ದು ದೊಡ್ಡ ದೊಡ್ಡ ಸ್ಟಾರ್ ನಟರ ಜೊತೆ ನಟಿಸಿ ಹೆಸರನ್ನು ಪಡೆದುಕೊಂಡಿದ್ದಾರೆ. ಕೃತಿ ಕರಬಂದ ದೇವಸ್ಥಾನವನ್ನು ಕ್ಲೀನ್ ಮಾಡುತ್ತಿರುವಂತಹ ಫೋಟೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ಲಾಗುತ್ತಿದೆ. ಒಂದು ಶೂಟಿಂಗ್ನಲ್ಲಿ ಭಾಗಿಯಾಗಿದ್ದ ನಟಿ ಕೃತಿ ಕರಬಂದ ಶೂಟಿಂಗ್ ನಡೆಯುತ್ತಿರುವ ಸ್ಥಳದಲ್ಲಿ ದೇವಸ್ಥಾನ ಇರುವುದು ತಿಳಿದು ಒಂದು ದಿನ ಬಿಡುವು ಮಾಡಿಕೊಂಡು ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆಯನ್ನು ಸಲ್ಲಿಸಿ ಅಷ್ಟೇ ಅಲ್ಲದೆ ದೇವಸ್ಥಾನವನ್ನು ಕೂಡ ಕ್ಲೀನ್ ಮಾಡಿ ಒಂದು ದಿನ ಪೂರ್ತಿ ದೇವಸ್ಥಾನಕ್ಕೆ ಬಂದ ಭಕ್ತರಿಗೆ ಊಟವನ್ನು ಬಡಿಸಿದ್ದಾರೆ.

 

 

ನಟಿ ಕೃತಿ ಕರಬಂಧ ದೇವಸ್ಥಾನವನ್ನು ಕ್ಲೀನ್ ಮಾಡುತ್ತಿರುವ ಸಮಯದಲ್ಲಿ ಆ ದೇವಸ್ಥಾನಕ್ಕೆ ಬಂದ ಜನರು ಫೋಟೋಗಳನ್ನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಕೃತಿ ಕರಬಂಧ ರವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ ವೈರಲ್ ಆಗಿದ್ದು ಅಭಿಮಾನಿಗಳು ಕೂಡ ಫೋಟೋಗಳನ್ನು ನೋಡಿ ತಮ್ಮ ನೆಚ್ಚಿನ ನಟಿಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಸ್ಟಾರ್ ಗಿರಿ ಇದ್ದರೂ ಕೂಡ ಸಾಮಾನ್ಯ ಜನರ ರೀತಿ ವರ್ತಿಸುವ ಇಂತಹ ನಟಿಯರೂ ನಿಜಕ್ಕೂ ಅಪರೂಪಕ್ಕೆ ಒಬ್ಬರು

Leave a comment

Your email address will not be published. Required fields are marked *