The Deadline For Changing The Number Plate: ರಾಜ್ಯದಲ್ಲಿ 2 ಕೋಟಿಗೂ ಹೆಚ್ಚು ವಾಹನಗಳು ಹಳೆಯ ನೋಂದಣಿ ವ್ಯವಸ್ಥೆಯ ನಂಬರ್ ಪ್ಲೇಟ್ ಹೊಂದಿದ್ದು, ಅವುಗಳನ್ನು ಬದಲಾಯಿಸಲು ನವೆಂಬರ್ 17ರವರೆಗೆ ಗಡುವು (The Deadline For Changing The Number Plate) ನೀಡಲಾಗಿದೆ. 2019 ರ ನಂತರದ ವಾಹನಗಳಿಗೂ ಎಚ್‌ಎಸ್‌ಆರ್‌ಪಿ ನೋಂದಣಿ ಫಲಕ (HSRP Registration Panel) ಕಡ್ಡಾಯವಾಗಿದೆ ಮತ್ತು ಇದು ನಂಬರ್ ಪ್ಲೇಟ್ ನಕಲು ಮಾಡುವುದನ್ನು ತಡೆಯುತ್ತದೆ. ಅವಧಿಯೊಳಗೆ ನಂಬರ್ ಪ್ಲೇಟ್ ಬದಲಾಯಿಸದಿದ್ದರೆ ಪೊಲೀಸ ದಂಡ ವಿಧಿಸಲಾಗುತ್ತದೆ.

ರಾಜ್ಯದಲ್ಲಿ ಹಳೆಯ ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್ (ಎಚ್‌ಎಸ್‌ಆರ್‌ಪಿ) ಅಳವಡಿಕೆ ಕಡ್ಡಾಯಗೊಳಿಸಲಾಗಿದ್ದು, ನವೆಂಬರ್ 17ರವರೆಗೆ ಕಾಲಾವಕಾಶ ನೀಡಲಾಗಿದೆ. ನಿಗದಿತ ಸಮಯದಲ್ಲಿ ಎಚ್‌ಎಸ್‌ಆರ್‌ಪಿ ಅಳವಡಿಸದ ವಾಹನಗಳ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಎಚ್ಚರಿಕೆ ನೀಡಿದೆ

ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಅಳವಡಿಸಲು ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವಾಲಯ 2001ರಲ್ಲಿ ಆದೇಶ ಹೊರಡಿಸಿತ್ತು. ಆದರೆ, ಆಗ ಎಚ್‌ಎಸ್‌ಆರ್‌ಪಿ ಅಳವಡಿಕೆಯನ್ನು ಕಡ್ಡಾಯಗೊಳಿಸಿರಲಿಲ್ಲ. ದೇಶದ ಭದ್ರತೆ ದೃಷ್ಟಿಯಿಂದ ಕೇಂದ್ರ ಸರ್ಕಾರ 2018ರಲ್ಲಿ ಹೊಸ ಆದೇಶ ಹೊರಡಿಸಿದ್ದು, 2019ರ ಆ.1ರ ನಂತರ ನೋಂದಣಿಯಾಗಿರುವ ಎಲ್ಲ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಅಳವಡಿಸುವಂತೆ ಸೂಚಿಸಿದೆ.

ಕೇಂದ್ರದ ಆದೇಶ ರಾಜ್ಯದಲ್ಲೂ ಜಾರಿಯಾಗಿದ್ದು, 2019ರ ಅ.1ರಿಂದ ಹೊಸ ವಾಹನಗಳಿಗೆ ಶೋರೂಂಗಳಲ್ಲಿ ಎಚ್‌ಎಸ್‌ಆರ್‌ಪಿ ಅಳವಡಿಸಲಾಗುತ್ತಿದೆ. ಅದಕ್ಕೂ ಮೊದಲು ನೋಂದಣಿಯಾದ ವಾಹನಗಳು ಹಳೆಯ ನೋಂದಣಿ ಫಲಕಗಳನ್ನು ಹೊಂದಿವೆ. ರಾಜ್ಯದಲ್ಲಿ ಇಂತಹ ಸುಮಾರು 2 ಕೋಟಿ ವಾಹನಗಳಿವೆ. ಈ ಪೈಕಿ ಶೇ.70ರಷ್ಟು ದ್ವಿಚಕ್ರ ವಾಹನಗಳು, ಶೇ.20ರಷ್ಟು ಲಘು ವಾಹನಗಳು (ಎಲ್‌ಎಂವಿ) ಮತ್ತು ಶೇ.10ರಷ್ಟು ಸಾರಿಗೆ ವಾಹನಗಳಾಗಿವೆ.
ಇದೀಗ ಆ ಹಳೆಯ ವಾಹನಗಳ ನೋಂದಣಿ ಫಲಕಗಳನ್ನು ಬದಲಿಸಿ ಕಡ್ಡಾಯವಾಗಿ ಎಚ್‌ಎಸ್‌ಆರ್‌ಪಿ ಅಳವಡಿಸಬೇಕು ಎಂದು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. HSRP ಪ್ಲೇಟ್‌ಗಳು ಶಾಶ್ವತ ಗುರುತಿನ ಸಂಖ್ಯೆ ಮತ್ತು ಕ್ರೋಮಿಯಂ ಆಧಾರಿತ ಹೊಲೊಗ್ರಾಮ್‌ನಂತಹ ಹಲವು ವೈಶಿಷ್ಟ್ಯಗಳನ್ನು ಹೊಂದಿವೆ. ನೋಂದಣಿ ಫಲಕಗಳಲ್ಲಿ ಏಕರೂಪತೆಯನ್ನು ಖಚಿತಪಡಿಸಿಕೊಳ್ಳಲು ಇವು ಸಹಾಯ ಮಾಡುತ್ತವೆ.

ಹಳೆಯ ವಾಹನಗಳ ಮಾಲೀಕರು ಅಧಿಕೃತ ಡೀಲರ್‌ಗಳು ಅಥವಾ ವಾಹನಗಳ ಶೋರೂಂಗಳ ಮೂಲಕ ಮುಂಗಡವಾಗಿ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ಗಳಿಗೆ ಅರ್ಜಿ ಸಲ್ಲಿಸಬೇಕು ಮತ್ತು ಪಾವತಿಸಬೇಕು. ನಾಲ್ಕು ಚಕ್ರದ ವಾಹನಕ್ಕೆ ಎಚ್‌ಎಸ್‌ಆರ್‌ಪಿ ಪ್ಲೇಟ್ ಬೆಲೆ 400 ರಿಂದ 500 ರೂ. ದ್ವಿಚಕ್ರ ವಾಹನಗಳಿಗೆ 250 ರಿಂದ 300 ರೂ. ಇರುತ್ತದೆ ವಾಹನ ತಯಾರಿಕಾ ಕಂಪನಿಗಳು ವಾಹನ ಶೋರೂಮ್‌ಗಳಿಗೆ ಎಚ್‌ಎಸ್‌ಆರ್‌ಪಿ ಪ್ಲೇಟ್‌ಗಳನ್ನು ಪೂರೈಸಲು ಅಧಿಕೃತ ಎಚ್‌ಎಸ್‌ಆರ್‌ಪಿ ತಯಾರಕರೊಂದಿಗೆ ಒಪ್ಪಂದ ಮಾಡಿಕೊಂಡಿವೆ. ಅಧಿಕೃತ ಎಚ್‌ಎಸ್‌ಆರ್‌ಪಿ ತಯಾರಕರು ಹಳೆಯ ವಾಹನಗಳಿಗೂ ಪ್ಲೇಟ್‌ಗಳನ್ನು ಪೂರೈಸುತ್ತಾರೆ.

ಆಗಸ್ಟ್ 17, 2023 ರಂದು ಹೊರಡಿಸಲಾದ ಅಧಿಸೂಚನೆಯಲ್ಲಿ, ನವೆಂಬರ್ 17 ರ ಗಡುವನ್ನು ಅನುಸರಿಸಲು ವಿಫಲವಾದ ವಾಹನ ಮಾಲೀಕರ ವಿರುದ್ಧ ದಂಡದ ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ ಮತ್ತು ರೂ 500 ರಿಂದ ರೂ 1,000 ವರೆಗೆ ದಂಡವನ್ನು ವಿಧಿಸಲಾಗುತ್ತದೆ.
1 thought on “The Deadline For Changing The Number Plate: ಹಳೆಯ ವಾಹನಗಳಿಗೆ ಹೊಸ ನಂಬರ್ ಪ್ಲೇಟ್ ಬದಲಿಸಲು ನ.17 ಕೊನೆಯ ದಿನ; ನಿಯಮ ಪಾಲಿಸದಿದ್ದರೆ ದಂಡ ಕಡ್ಡಾಯ!ಸಾರಿಗೆ ಇಲಾಖೆ ಆದೇಶ..”