ಕನ್ನಡ ಕಿರುತೆರೆ ಲೋಕದಲ್ಲಿ ತಮ್ಮ ಮುಗ್ದತೆ ಹಾಗೂ ನಗುವಿನಿಂದಲೇ ಗಮನಸೆಳೆದವರು ನಟಿ ಅಂಕಿತ ಅಮರ್, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ನಮ್ಮನೆ ಯುವರಾಣಿ ಧಾರವಾಹಿ ಮೂಲಕ ಮನೆ ಮಾತಾಗಿದ್ದರು ಇದೀಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ನಮ್ಮನೆ ಯುವರಾಣಿ ಧಾರಾವಾಹಿ ನಟಿ ಅಂಕಿತ ಅಮರ್ ಹೊರ ಬಂದಿದ್ದರು ಕೂಡ ಇಂದಿಗೂ ಕೋಳಿ ಮರಿ ಮೀರಾ ಪಾತ್ರವನ್ನು ಮರೆಯದೆ ಅಂಕಿತಾ ರವರ ಸೋಶಿಯಲ್ ಮೀಡಿಯಾ ಪೋಸ್ಟ್ ಗಳಿಗೆ ಕಮೆಂಟ್ ಮಾಡುವ ಮೂಲಕ ತಮ್ಮನ್ನು ಮಿಸ್ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.
ಇದೀಗ ಅಂಕಿತ ರವರ ಅಭಿಮಾನಿಗಳಿಗೆ ಭರ್ಜರಿಯಾಗಿ ಗುಡ್ ನ್ಯೂಸ್ ಒಂದು ಸಿಕ್ಕಿದೆ ಆ ವಿಚಾರವನ್ನು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಹಾಗೂ ಅಂಕಿತ ಅಮರ್ ಜೊತೆಯಾಗಿ ತಿಳಿಸುತ್ತಾರೆ. ನಮ್ಮನೆ ಯುವರಾಣಿ ಧಾರಾವಾಹಿ ಯಲ್ಲಿ ಕೋಳಿ ಮರಿ ಮತ್ತು ಗುಗ್ಗು ಪಾತ್ರ ಸಿಕ್ಕಾಪಟ್ಟೆ ಫೇಮಸ್ ಆಗಿತ್ತು ಇವರಿಬ್ಬರ ಕೋಳಿ ಜಗಳವನ್ನು ನೋಡಲು ಕಿರುತೆರೆಯ ವೀಕ್ಷಕರು ಕಾದಿರದಿಂದ ಕಾಯುತ್ತಿದ್ದರು.
ಸಾಕೇತ್ ಅನಿಕೇತ್ ಮತ್ತು ಮೀರಾ ಕಾಂಬಿನೇಷನ್ ದೃಶ್ಯಗಳು ಕೂಡ ಬಹಳ ಚೆನ್ನಾಗಿ ಮೂಡಿ ಬರುತ್ತಿದ್ದರು ಈ ಬಾರಿ ಅಂಕಿತ ಅಮರ್ ರವರ ಹುಟ್ಟುಹಬ್ಬವನ್ನು ಸಾಕೇತ್ ಅನಿಕೇತ್ ಇಬ್ಬರು ಅಂಕಿತಾ ರವರ ಮನೆಯಲ್ಲಿ ಅದ್ದೂರಿಯಾಗಿ ಆಚರಿಸಿದ್ದರು ಈ ಮೂವರನ್ನು ಜೊತೆಯಾಗಿ ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ.
ಅನಿಕೇತ ಹಾಗೂ ಮೀರಾ ಮತ್ತೆ ತೆರೆಯ ಮೇಲೆ ಜೊತೆಯಾಗಿ ಕಾಣಿಸಿಕೊಳ್ಳಲಿ ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ. ಅಂಕಿತ ಅಮರ್ ಹುಟ್ಟು ಹಬ್ಬದ ದಿನ ಅಭಿಮಾನಿಗಳು ಸೋಶಿಯಲ್ ಮೀಡಿಯಾದ ಮೂಲಕ ಅಂಕಿತಾ ರವರಿಗೆ ವಿಶ್ ಮಾಡಿದ್ದರು ಅಂಕಿತ ನಾಯಕಿಯಾಗಿ ನಟಿಸುತ್ತಿರುವ “ಅಬಜಬದಬ” ಸಿನಿಮಾ ತಂಡದ ಪ್ರಯುಕ್ತವಾಗಿ ಹೊಸ ಪೋಸ್ಟರ್ ಕೂಡ ರಿಲೀಸ್ ಮಾಡಿತ್ತು.
ಹುಟ್ಟುಹಬ್ಬಕ್ಕಾಗಿ ಹೊಸ ಪೋಸ್ಟರ್ ರಿಲೀಸ್ ಮಾಡಿದ ಚಿತ್ರ ತಂಡ ಅಂಕಿತಾ ರವರ ಹುಟ್ಟುಹಬ್ಬಕ್ಕೆ ಶುಭ ಕೋರಿತ್ತು ಜೊತೆಗೆ ನಟ ರಕ್ಷಿತ್ ಶೆಟ್ಟಿ ರವರ ಜೊತೆಗೆ ಅಂಕಿತ ರವರಿಗೆ ಒಂದು ಸರ್ಪ್ರೈಸ್ ಸಿಕ್ಕಿದೆ. ರಕ್ಷಿತ್ ಶೆಟ್ಟಿ ನಿರ್ಮಾಣ ಮಾಡುತ್ತಿರುವ ಹೊಸ ಸಿನಿಮಾ ಗೆ ನಾಯಕಿಯಾಗಿ ಅಂಕಿತ ಅಮರ್ ಆಯ್ಕೆಯಾಗಿದ್ದಾರೆ. ರಕ್ಷಿತ್ ಶೆಟ್ಟಿ ರವರ ಪರಂಬ ಸ್ಟುಡಿಯೋ ಮುಖಾಂತರ ಅಂಕಿತ ಅಮರ್ ರವರ ಹುಟ್ಟು ಹಬ್ಬದಂದು ಪೋಸ್ಟ್ ಒಂದನ್ನು ಹಾಕಿ ವಿಶ್ ಮಾಡಿ ತಮ್ಮ ತಂಡಕ್ಕೆ ಬರಮಾಡಿಕೊಂಡಿದ್ದಾರೆ. ಈ ಗುಡ್ ನ್ಯೂಸ್ ಅಂಕಿತ ರವರ ಅಭಿಮಾನಿಗಳಿಗೆ ಸಂತಸವನ್ನು ತಂದಿದೆ. ಇಂತಹ ಆಫರ್ ಗಳು ಅಂಕಿತ ರವರಿಗೆ ಇನ್ನಷ್ಟು ಸಿಗಲಿ ಎಂದು ಅವರ ಅಭಿಮಾನಿಗಳು ಆಶಿಸುತ್ತಿದ್ದಾರೆ.