srujan fight:ಮೊನ್ನೆ ಮಹಿಳೆ ಕಪಾಳಕ್ಕೆ ಹೊಡೆದಿದ್ದ ಅಪ್ಪ ಇವತ್ತು ಸೃಜನ್ ಮೇಲೆ ಸೋಮಣ್ಣನ ಪುತ್ರ ಅಟ್ಯಾಕ್

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹೆಸರಿನಲ್ಲಿ ಅಪ್ಪು ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಆಯೋಜಿಸಿದ್ದರು. ಒಂದು ಕ್ಲಬ್ ನಲ್ಲಿ ಕನ್ನಡ ಚಿತ್ರರಂಗದ ಟಾಕಿಂಗ್ ಟಾಮ್ ಸೃಜನ್ ಲೋಕೇಶ್ ತಮ್ಮ ತಂಡದ ಜೊತೆ ಪ್ರಾಕ್ಟೀಸ್ ಮಾಡುತ್ತಿದ್ದರು ಅರುಣ್ ಸೋಮಣ್ಣ ಕೂಡ ಆಗಮಿಸಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳ ಆಗಿದೆ ಎಂದು ಸುದ್ದಿ ಮೂಲಗಳಿಂದ ತಿಳಿದು ಬಂದಿದೆ. ಸೋಮವಾರವೇ ಈ ಘಟನೆ ನಡೆದಿದ್ದು ಈ ಘಟನೆ ನಿಧಾನವಾಗಿ ಬೆಳಕಿಗೆ ಬಂದಿದೆ.

 

 

ಅಪ್ಪು ಪಂದ್ಯಾವಳಿಯಲ್ಲಿ ಸೃಜನ್ ಲೋಕೇಶ್ ರವರು ತಮ್ಮ ಟೀಮ್ ಜೊತೆಗೆ ಆಡಬೇಕು ಎಂದು ಪ್ರಾಕ್ಟೀಸ್ ಮಾಡುತ್ತಿದ್ದ ಸಮಯದಲ್ಲಿ ಸೃಜನ್ ಲೋಕೇಶ್ ಹಾಗೂ ಅರುಣ್ ಸೋಮಣ್ಣ ರವರ ನಡುವೆ ಜಗಳ ಏರ್ಪಟ್ಟಿದೆ. ಸೋಮವಾರ ರಾತ್ರಿ ಮುದ್ದಿನ ಪಾಳ್ಯದಲ್ಲಿರುವ ಕ್ಲಬ್ ನಲ್ಲಿ ನಟಸೃಜನ್ ಲೋಕೇಶ್ ಮತ್ತು ಅರುಣ್ ರವರು ಬ್ಯಾಡ್ಮಿಂಟನ್ ಪ್ರಾಕ್ಟೀಸ್ ಮಾಡುತ್ತಿದ್ದರು ಆದರೆ, ಈ ಜಗಳದ ಬಗ್ಗೆ ಯಾರು ಕೂಡ ಪೊಲೀಸರಿಗೆ ದೂರು ನೀಡಿರಲಿಲ್ಲ.

 

 

ಪ್ರತಿದಿನವೂ ಸೃಜನ್ ಲೋಕೇಶ್ ತಮ್ಮ ತಂಡದ ಜೊತೆಗೆ ಬ್ಯಾಟ್ಮಿಟನ್ ಪ್ರಾಕ್ಟೀಸ್ ಮಾಡುತ್ತಿದ್ದರು ಅದೇ ರೀತಿ ಸೋಮವಾರ ಕೂಡ ಪ್ರಾಕ್ಟೀಸ್ ಮುಗಿಸಿ ತಮ್ಮ ತಂಡದ ಜೊತೆ ಪಾರ್ಟಿ ಮಾಡುತಿದ್ದಾಗ ಜೋರಾಗಿ ಕಿರುಚುತ್ತಿದ್ದರು ಅದೇ ಸಮಯದಲ್ಲಿ ಅರುಣ್ ಸೋಮಣ್ಣ ಹಾಗೂ ಅವರ ಟೀಮ್ ಕೂಡ ಬ್ಯಾಡ್ಮಿಂಟನ್ ಪ್ರಾಕ್ಟೀಸ್ ಮಾಡಲು ಕ್ಲಬ್ ಗೆ ಬಂದಿದ್ದರು. ಆ ಸಮಯದಲ್ಲಿ ಸೃಜನ್ ಲೋಕೇಶ್ ಕಿರುಚುತ್ತಿರುವ ಶಬ್ದ ಕೇಳಿ ಯಾಕೆ ಹೀಗೆ ಕಿರುಚುತ್ತಿದ್ದೀರಾ ಎಂದು ಅರುಣ್ ಸೋಮಣ್ಣ ಪ್ರಶ್ನೆ ಮಾಡಿದಾಗ ಮಾತಿಗೆ ಮಾತು ಬೆಳೆದು ಹೊಡೆದಾಟ ಕೂಡ ಶುರುವಾಗಿತ್ತು ಎಂದು ಸುದ್ದಿ ಕೇಳಿ ಬರುತ್ತಿತ್ತು.

 

 

ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಇದರ ಬಗ್ಗೆ ಇಲ್ಲಿಯವರೆಗೂ ಯಾರೂ ಕೂಡ ದೂರು ನೀಡಿಲ್ಲ. ಇದನ್ನು ಕೇಳಿದ ಅರುಣ್ ಸೋಮಣ್ಣರವರು ಟ್ವಿಟರ್ ನಲ್ಲಿ “ನನಗೂ ಹಾಗೂ ಸೃಜನ್ ಲೋಕೇಶ್ ನಡುವೆ ಯಾವುದೇ ಜಗಳವಾಗಿಲ್ಲ ನಮ್ಮಿಬ್ಬರ ನಡುವೆ ಜಗಳವಾಗಿದೆ ಎಂಬ ಸುಳ್ಳು ಸುದ್ದಿ ಎಂದು ಹರಿದಾಡುತ್ತಿದೆ. ಇದು ನನ್ನ ಗಮನಕ್ಕೂ ಬಂತು ಈ ತರಹ ಯಾವುದೇ ಘಟನೆ ನಡೆದಿಲ್ಲ ಇದೆಲ್ಲ ಸುಳ್ಳು ಸುದ್ದಿ ಯಾರೋ ವಿರೋಧಿಗಳು ಈ ರೀತಿ ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ” ಎಂದು ಹೇಳಿದ್ದಾರೆ.

 

 

ಅರುಣ್ ಹಾಗೂ ಸೃಜನ್ ನಡುವಿನ ಜಗಳದ ಬಗ್ಗೆ ಅರುಣ್ ತಂದೆ ಸೋಮಣ್ಣರವರಿಗೆ ಪ್ರಶ್ನೆ ಮಾಡಿದಾಗ ಸೋಮಣ್ಣರವರು ಕೋಪ ಮಾಡಿಕೊಂಡಿದ್ದಾರೆ “ಏನೋ ಗೊತ್ತಿಲ್ಲದ ಹಾಗೆ ಕೆಲವು ಘಟನೆಗಳು ನಡೆದು ಹೋಗುತ್ತವೆ ಅದರ ಬಗ್ಗೆ ಹೆಚ್ಚು ಮಾತನಾಡುವುದು ಬೇಡ ನಾನೊಬ್ಬ ರಾಜಕಾರಣಿ ಯಾರಾದರೂ ತಪ್ಪು ಮಾಡಿದ್ದರೆ ಅದು ತಪ್ಪು ಎಂದು ಹೇಳುತ್ತೇನೆ. ಈ ಘಟನೆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ನನ್ನ ಮಗ ನನ್ನನ್ನು ಬಿಟ್ಟು ಹೋಗಿ 10-12 ವರ್ಷವೇ ಹಾಗೆ ಹೋಯಿತು. ಅವನು ಬೇರೆ ಮನೆಯಲ್ಲಿದ್ದಾನೆ ಈ ವಿಷಯದ ಬಗ್ಗೆ ನನಗೆ ಗೊತ್ತಿಲ್ಲ ಆದ್ದರಿಂದ ಇದರ ಬಗ್ಗೆ ಮಾತನಾಡುವುದು ವ್ಯರ್ಥ ” ಎಂದು ವಿ ಸೋಮಣ್ಣ ಹೇಳಿದ್ದಾರೆ.

 

ಸೋಮವಾರ ರಾತ್ರಿ ಅರುಣ್ ಸೋಮಣ್ಣ ಅವರು ಬಂದೇ ಇರಲಿಲ್ಲ ಸೃಜನ್ ಲೋಕೇಶ್ ಯಾರ ಜೊತೆ ಮಾತನಾಡಿಲ್ಲ ಪ್ರಾಕ್ಟೀಸ್ ಮುಗಿದ ನಂತರ ಆಟಗಾರರನ್ನು ವಾಪಸ್ ಕಳಿಸಿದ್ದಾರೆ ಈ ವಿಚಾರ ಯಾಕೆ ಈ ರೀತಿ ಆಗಿದೆ ಸುಳ್ಳು ಸುಳ್ಳು ಸುದ್ದಿಯನ್ನು ಯಾಕೆ ಹಬ್ಬಿಸುತ್ತಿದ್ದಾರೆ. ಈ ವಿಚಾರದಲ್ಲಿ ಸೃಜನ್ ಹಾಗೂ ಅರುಣ್ ಸೋಮಣ್ಣರವರು ಹೆಸರು ಯಾಕೆ ಬಂದಿದೆ ಎಂಬುದು ನಮಗೆ ಗೊತ್ತೇ ಇಲ್ಲ ಎಂದು ಸೃಜನ್ ತಂಡದ ಸದಸ್ಯ ವಿಕಾಸ್ ಹೇಳಿದ್ದಾರೆ.

Be the first to comment

Leave a Reply

Your email address will not be published.


*