ಇಂದು ಚಾಮರಾಜಪೇಟೆಯ ಬಿಎಸ್ ವೆಂಕಟರಾಮ್ ಕಲಾಭವನದಲ್ಲಿ ಸಮಾಜ ಸೇವಕ ಸೈಲೆಂಟ್ ಸುನಿಲ್ ಕುಮಾರ್ ರವರು ಒಂದು ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ಡಾ. ಬಿಆರ್ ಅಂಬೇಡ್ಕರ್ ಕೂಲಿ ಕಾರ್ಮಿಕರ ಸಂಘ ಆಟೋ ಚಾಲಕರ ಸಂಘ ಬಾಬಾ ಸಾಹೇಬ್ ಬಿ ಆರ್ ಅಂಬೇಡ್ಕರ್ ಅಹಿಂದ ಹಕ್ಕುಗಳ ರಕ್ಷಣಾ ವೇದಿಕೆ ಇನ್ನೂ ವಿವಿಧ ದಲಿತ ಸಂಘಟನೆಗಳು ಕೂಡ ಪಾಲ್ಗೊಂಡು ರಕ್ತದಾನ ಶಿಬಿರವನ್ನು ಕೂಡ ಆಯೋಜಿಸಿದ್ದರು ಈ ಕಾರ್ಯಕ್ರಮದಲ್ಲಿ 2000 ಯೂನಿಟ್ ಗಿಂತ ಹೆಚ್ಚಿನ ರಕ್ತವು ಕಲೆಕ್ಟ್ ಆಗಿತ್ತು ಈ ರಕ್ತದಾನ ಶಿಬಿರಕ್ಕೆ ಸೈಲೆಂಟ್ ಸುನಿಲ್ ರವರೆ ಚಾಲನೆಯನ್ನು ಕೂಡ ನೀಡಿದ್ದರು.

 

 

ಈ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸುನೀಲ್ ಕುಮಾರ್ ರವರು ಮಾತನಾಡಿ ನಮ್ಮ ಕರ್ನಾಟಕ ರಾಜ್ಯದಲ್ಲಿ ಬೇರೆ ರಾಜ್ಯಗಳ ಜನಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇಲ್ಲಿಗೆ ವಲಸೆ ಬರುವ ಜನರ ಭಾಷೆಗಳು ಬೇರೆ ಬೇರೆ ಇದ್ದು ಅವರು ತಮ್ಮ ಮಾತೃಭಾಷೆಯನ್ನು ಹೆಚ್ಚಾಗಿ ಮಾತನಾಡುತ್ತಾರೆ. ಆದರೆ ನಮ್ಮ ಭಾಷೆಯಾದ ಕನ್ನಡವನ್ನು ಕಲಿಯುವಲ್ಲಿ ಅವರು ಆಸಕ್ತಿಯನ್ನು ಕೂಡ ತೋರಿಸುತ್ತಿಲ್ಲ. ನಮ್ಮ ಕನ್ನಡಿಗರು ಮಾತ್ರ ಅವರ ಬಳಿ ತೆಲುಗು ತಮಿಳು ಹಿಂದಿ ಭಾಷೆಗಳನ್ನು ಅರ್ಧಂಬರ್ಧ ಕಲಿತಿದ್ದರು ಕೂಡ ಅವುಗಳನ್ನೇ ಮಾತನಾಡುತ್ತ ಮ್ಯಾನೇಜ್ ಮಾಡುತ್ತಾರೆ.

ಪಕ್ಕದ ತಮಿಳುನಾಡು ರಾಜ್ಯದಲ್ಲಿ ಮಾತೃಭಾಷೆಯನ್ನು ಕಡ್ಡಾಯ ಮಾಡಿದ್ದ ರೀತಿ ನಮ್ಮ ರಾಜ್ಯದಲ್ಲೂ ಕೂಡ ಪ್ರಾಥಮಿಕ ಶಿಕ್ಷಣದಲ್ಲಿ ನಮ್ಮ ಭಾಷೆಯಲ್ಲಿ ಕಡ್ಡಾಯಗೊಳಿಸಬೇಕು. ಇಂತಹ ಕಠಿಣ ಕಾನೂನನ್ನು ಕರ್ನಾಟಕ ಸರ್ಕಾರವೇ ಮಾಡಬೇಕಾಗಿದೆ ಇಂತಹ ಕಾನೂನನ್ನು ನಮ್ಮ ರಾಜ್ಯದಲ್ಲಿ ಅಳವಡಿಸಿದರೆ ಮಾತ್ರ ಕನ್ನಡ ಭಾಷೆ ಇನ್ನಷ್ಟು ಬೆಳವಣಿಗೆಯಾಗುತ್ತದೆ.

 

 

ನಾವು ಇಂದು ಹಲವಾರು ಸಂಘಟನೆಗಳನ್ನು ಸೇರಿಸಿ ರಕ್ತದಾನ ಶಿಬಿರವನ್ನು ಏರ್ಪಡಿಸಿದ್ದೇವೆ ರಕ್ತದಾನ ಮಹಾದಾನ ಎಂದು ಹೇಳುತ್ತಾರೆ. ರಕ್ತದಾನವು ಶ್ರೇಷ್ಠದಾನಗಳಲ್ಲಿ ಒಂದಾಗಿದ್ದು ಎಲ್ಲರೂ ಈ ಕಾರ್ಯಕ್ರಮದಲ್ಲಿ ರಕ್ತದಾನವನ್ನು ಮಾಡಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಎಂದು ಕೇಳಿಕೊಳ್ಳುತ್ತೇನೆ

ಪ್ರತಿ ವರ್ಷ ದೇಶದಲ್ಲಿ ಐದು ಕೋಟಿ ಯೂನಿಟ್ ರಕ್ತದ ಅವಶ್ಯಕತೆ ಇದೆ. ಆದರೆ 2.5 ಕೋಟಿ ರಕ್ತವನ್ನು ಮಾತ್ರ ಪೂರೈಸಲಾಗುತ್ತಿದೆ. ಹಾಗಾಗಿ ಹೆಚ್ಚು ಜನರು ಈ ಶಿಬಿರದಲ್ಲಿ ಭಾಗವಹಿಸಬೇಕು ಇಂತಹ ಬೃಹತ್ ರಕ್ತದಾನ ಶಿಬಿರಗಳನ್ನು ಕೂಡ ಹೆಚ್ಚಾಗಿ ಮಾಡಬೇಕು. ರಕ್ತದಾನ ಶಿಬಿರಗಳನ್ನು ಹೆಚ್ಚು ಮಾಡಿದಂತೆಲ್ಲ ಲಕ್ಷಾಂತರ ಜನರ ಜೀವವನ್ನು ಉಳಿಸಬಹುದಾಗಿದೆ.

 

 

ಹಾಗೆ ಸುನಿಲ್ ಕುಮಾರ್ ರವರು ರಾಜಕೀಯದ ಬಗ್ಗೆ ಕೂಡ ಮಾತನಾಡಿ ನಾನು ರಾಜಕೀಯಕ್ಕೆ ಬರುತ್ತೇನೋ ಇಲ್ಲವೋ ಎಂಬುದನ್ನು ಕಾಲ ನಿರ್ಧರಿಸುತ್ತದೆ ಆದರೆ ನಾನು ಜನಸೇವೆ ಎಂದು ಮುಂದುವರಿಸುತ್ತೇನೆ. ನಾನು ಪ್ರಾಮಾಣಿಕವಾಗಿ ಜನ ಸೇವೆಯನ್ನು ಮಾಡುತ್ತಿದ್ದು ಇದರ ಬಗ್ಗೆ ನಾನು ಯಾವುದೇ ನಿರೀಕ್ಷೆಯನ್ನು ಕೂಡ ಇಟ್ಟುಕೊಂಡಿಲ್ಲ. ನನಗೆ ಹಲವಾರು ಜನರು ನೀಡಿದ ಮಾರ್ಗದರ್ಶನದಂತೆ ಇಂದು ಸಮಾಜ ಸೇವೆಯನ್ನು ಮಾಡುತ್ತಿದ್ದು ರಾಜಕೀಯ ಪ್ರವೇಶವನ್ನು ಮಾಡುತ್ತೇನೋ ಇಲ್ಲವೋ ಎಂಬುದನ್ನು ಸಮಯವು ನಿರ್ಧಾರ ಮಾಡುತ್ತದೆ.

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಹಾಗೂ ಪುನೀತ್ ರಾಜಕುಮಾರ್ ರವರ ಪುಣ್ಯ ಸ್ಮರಣೆಯ ಅಂಗವಾಗಿ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಿದ್ದು ಇದರಲ್ಲಿ 2,000 ಯೂನಿಟ್ ರಕ್ತವನ್ನು ಸಂಗ್ರಹಿಸುವ ಗುರಿಯನ್ನು ಹೊಂದಿದ್ದೇನೆ ಈ ಬೃಹತ್ ರಕ್ತದಾನ ಶಿಬಿರಕ್ಕೆ ಜನಸಾಮಾನ್ಯರು ಆಸಕ್ತಿಯಿಂದ ಬಂದು ರಕ್ತದಾನವನ್ನು ಮಾಡುತ್ತಿದ್ದು ಈ ಶಿಬಿರಕ್ಕೆ ಉತ್ತಮ ಬೆಂಬಲ ಕೂಡ ವ್ಯಕ್ತವಾಗಿದೆ.

 

 

ಇದೀಗ ನಾನು ಚಾಮರಾಜಪೇಟೆಯಲ್ಲಿ ಬೃಹತ ರಕ್ತದಾನ ಶಿಬಿರವನ್ನು ಆಯೋಜಿಸಿದ್ದು ಮುಂದೆ ಈ ನಗರದ ನಂತರ ಹಲವಾರು ನಗರಗಳಲ್ಲಿ ಇಂತಹ ಬೃಹತ್ ರಕ್ತದಾನ ಶಿಬಿರ ಉದ್ಘಾಟನೆಯಾಗಬೇಕು. ನಾನು ಈ ಬೃಹತ್ ರಕ್ತದಾನ ಶಿಬಿರವನ್ನು ಪುನೀತ್ ರಾಜಕುಮಾರ್ ಅವರನ್ನು ಆದರ್ಶವಾಗಿಟ್ಟುಕೊಂಡು ಮಾಡುತ್ತಿದ್ದೇನೆ. ಅವರು ತಿಳಿ ಹೇಳಿದ ದಾರಿಯಲ್ಲೇ ನಾನು ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಅವಕಾಶ ಸಿಕ್ಕರೆ ಖಂಡಿತವಾಗಿ ರಾಜಕೀಯ ಕ್ಷೇತ್ರಕ್ಕೆ ಬರುತ್ತೇನೆ ಎಂದು ಹೇಳಿದರು

Leave a comment

Your email address will not be published. Required fields are marked *