ಭಯವಾಗಿ ನನಗೇನು ಆಗಬಾರದು ಎಂದು ಮಂಜುನಾಥನ ಸನ್ನಿಧಿಗೆ ಬಂದು ಕಾಣಿಕೆಯನ್ನು ಹಾಕುತ್ತಿದ್ದೇನೆ:ರೀಲ್ಸ್ ಹುಡುಗಿಗೆ ಜ್ಞಾನೋದಯ

ಮಂಗಳೂರು:ಕಾಂತರಾ ಸಿನಿಮಾವನ್ನು ನೋಡಿದ ನಂತರ ಪಂಜುರ್ಲಿ ವೇಷದ ಬಗ್ಗೆ ಪ್ರೇರಿತರಾಗಿ ಶ್ವೇತಾ ರೆಡ್ಡಿ ಎಂಬುವ ರೀಲ್ಸ್ ಮಾಡುವ ಹುಡುಗಿ ಒಬ್ಬರು ಪಂಜರ್ಲಿಯ ವೇಷ ಧರಿಸಿ ಒಂದು ರೀಲ್ಸ್ ಅನ್ನು ಮಾಡಿದ್ದರು. ಅದಕ್ಕೆ ನೆಟ್ಟಿಗರೆಲ್ಲರೂ ಇದು ತಪ್ಪು ಹುಡುಗಿಯರು ಈ ವೇಷವನ್ನು ಹಾಕಬಾರದು ಎಂದು ಕಮೆಂಟ್ ಮಾಡಿದ್ದರು.

 

 

ಈ ಕಮೆಂಟ್ಗಳನ್ನು ನೋಡಿದ ಶ್ವೇತಾ ರೆಡ್ಡಿ ಅವರಿಗೆ ಭಯವಾಗಿ ನಾನು ಯಕ್ಷಗಾನ ಹಾಗೂ ಪಂಜುರ್ಲಿ ದೇವರ ಕುಣಿತ ಅಂದರೆ ಕೋಲ ಎರಡು ಒಂದೇ ಎಂದುಕೊಂಡಿದ್ದೆ ಆದರೆ, ಇದು ಬೇರೆ ಬೇರೆ ಎಂದು ಈಗ ಗೊತ್ತಾಯಿತು ನನ್ನ ರೀಲ್ಸ್ ನೋಡಿದವರೆಲ್ಲ ನನಗೆ ನೆಗೆಟಿವ್ ಕಾಮೆಂಟ್ಗಳನ್ನು ಹಾಕುತ್ತಿದ್ದರು. ಇದರಿಂದ ನಾನು ಎಚ್ಚೆತ್ತುಕೊಂಡು ಧರ್ಮಸ್ಥಳದ ಮಂಜುನಾಥನಿಗೆ ತಪ್ಪು ಕಾಣಿಕೆಯನ್ನು ಹಾಕಲು ಬಂದಿದ್ದೇನೆ.

ನನಗೆ ಖಂಡಿತವಾಗಿಯೂ ಪಂಜುರ್ಲಿ ವೇಷವನ್ನು ಹುಡುಗಿಯರು ಹಾಕಬಾರದು ಎಂಬ ಸತ್ಯ ತಿಳಿದಿರಲಿಲ್ಲ. ನಾನು ಬೆಂಗಳೂರಿನವಳಾಗಿದ್ದರಿಂದ ಈ ಆಚರಣೆಗಳ ಬಗ್ಗೆಯೂ ಹೆಚ್ಚಾಗಿ ನನಗೇನು ಗೊತ್ತಿಲ್ಲ ನಾನು ಈ ವೇಷವನ್ನು ಹಾಕಿ ರೀಲ್ಸ್ ಮಾಡಿದ್ದರಿಂದ ಯಾರಿಗಾದರೂ ನೋವಾಗಿದ್ದರೆ ದಯವಿಟ್ಟು ಕ್ಷಮಿಸಿ ಎಂದು ಶ್ವೇತಾ ರೆಡ್ಡಿ ಅವರು ಧರ್ಮಸ್ಥಳದ ಮಂಜುನಾಥನ ಸನ್ನಿಧಿಯಲ್ಲಿ ಕರ್ನಾಟಕದ ಜನತೆಗೆ ಕ್ಷಮೆ ಕೋರಿದ್ದಾರೆ.

 

 

ನನಗೆ ಗೊತ್ತಿದ್ದು ನಾನು ತಪ್ಪು ಮಾಡಿಲ್ಲ ಗೊತ್ತಿಲ್ಲದೆ ಆದ ತಪ್ಪು ಇದು ದಯಮಾಡಿ ಎಲ್ಲರೂ ನನ್ನನ್ನು ಕ್ಷಮಿಸಿ. ಇನ್ನು ಮುಂದೆ ಈಗಾಗದಂತೆ ನೋಡಿಕೊಳ್ಳುತ್ತೇನೆ ನಿಮ್ಮ ಕಮೆಂಟ್ಗಳಿಂದ ನನಗೆ ಭಯವಾಗಿ ನನಗೇನು ಆಗಬಾರದು ಎಂದು ಮಂಜುನಾಥನ ಸನ್ನಿಧಿಗೆ ಬಂದು ಕಾಣಿಕೆಯನ್ನು ಹಾಕುತ್ತಿದ್ದೇನೆ ಎಂದರು.

ಇದಾದ ನಂತರ ನನಗೆ ಕೋಲ ಹೇಗಿರುತ್ತದೆ ಎಂದು ನೋಡಬೇಕು ಎನ್ನುವ ಕುತೂಹಲ ಮೂಡಿದೆ ಹಾಗಾಗಿ ಯಾರಾದರೂ ಪರಿಚಯ ಇರುವವರ ಬಳಿ ಕೇಳಿ ಅವರ ಮನೆಗೆ ಹೋಗಿ ಕೋಲಾವನ್ನು ನೋಡಿ ಅದರ ಬಗ್ಗೆ ತಿಳಿದುಕೊಳ್ಳಲು ಇಚ್ಚಿಸುತ್ತೇನೆ. ನಾನು ಮಾಡಿದ ಈ ಕೆಲಸದಿಂದ ಎಲ್ಲರಿಗೂ ಕೂಡ ಬೇಜಾರಾಗಿದೆ ಆದರೆ, ನಾನು ಮತ್ತೆ ಇಂತಹ ಯಾವುದೇ ತಪ್ಪನ್ನು ಮಾಡುವುದಿಲ್ಲ ಎಂದು ಶ್ವೇತ ರೆಡ್ಡಿ ಅವರು ಹೇಳಿದ್ದಾರೆ.

 

ನಂತರ ತಾವು ಮಾಡಿದ ರಿಯಲ್ಸ ಪಕ್ಕದಲ್ಲಿ ಕೊಲಾಬರೇಶನ್ ಮಾಡಿ ದಯವಿಟ್ಟು ಕ್ಷಮಿಸಿ, ನಮಗೆ ತುಂಬಾ ಭಕ್ತಿ ಇದೆ ನನಗೆ ಗೊತ್ತಿಲ್ಲದೆ ನಾನು ಈ ರೀಲ್ಸ್ ಮಾಡಿದೆ ಇದರ ಉದ್ದೇಶ ಯಾರನ್ನು ನೋಯಿಸುವುದಲ್ಲ ದಯವಿಟ್ಟು ನನಗೆ ಶಾಪ ಹಾಕಬೇಡಿ ನಾನು ಈಗಾಗಲೇ ಮಂಜುನಾಥ ಸ್ವಾಮಿಯ ಹತ್ತಿರ ಕ್ಷಮೆಯನ್ನು ಬೇಡಿದ್ದೇನೆ.

ನಾನು ಮಾಡಿದ ತಪ್ಪಿನಿಂದಾಗಿ ಯಾರ ಮನಸಿಗಾಗದರೂ ನೋವಾಗಿದ್ದರೆ ಅಥವಾ ಅವರ ಸಂಸ್ಕೃತಿಯನ್ನು ನಾನು ಅಲ್ಲಗಳೇದಿದ್ದೇನೆ ಎಂದೆನಿಸಿದರೆ ನಾನು ನಿಮ್ಮ ಸಂಸ್ಕೃತಿಗೆ ಮಾಡಿದ ಮೋಸ ಈ ರೀಲ್ಸ್ ಎಂದು ನಿಮಗೆ ಅನಿಸಿದ್ದರೆ ನಾನು ಮನಸಾರೆ ನಿಮ್ಮನ್ನು ಕ್ಷಮೆ ಕೇಳುತ್ತೇನೆ ಇನ್ನು ಮುಂದೆ ಯಾರ ಮನಸ್ಸಿಗೂ ನೋವಾಗದಂತೆ ಯಾರ ಸಂಸ್ಕೃತಿಯು ಧಕ್ಕೆ ಆಗದಂತೆ ನಡೆದುಕೊಳ್ಳುತ್ತೇನೆ.

 

 

ಯಾರಿಗೂ ನೋವುಂಟು ಮಾಡುವ ಉದ್ದೇಶ ನನ್ನದಲ್ಲ ಕಾಂತಾರ ಸಿನಿಮಾ ನೋಡಿ ನಾನು ಕೂಡ ಸಂಸ್ಕೃತಿಯನ್ನು ಬಿಂಬಿಸಬೇಕು ಎಂದು ಈ ರೀತಿ ಮಾಡಿದೆ ನನ್ನನ್ನು ಕ್ಷಮಿಸುವಂತೆ ನಾನು ನಿಮ್ಮನ್ನು ಬೇಡುತ್ತಿದ್ದೇನೆ ದಯವಿಟ್ಟು ನನ್ನನ್ನು ಕ್ಷಮಿಸಿ ಎಂದಿದ್ದಾರೆ ಶ್ವೇತಾ ಶೆಟ್ಟಿ.

Be the first to comment

Leave a Reply

Your email address will not be published.


*