ಶಿವರಾಜ್ ಕುಮಾರ್ ಹಾಗೂ ಅವರ ಪತ್ನಿ ಗೀತಾ ಕನ್ನಡ ಇಂಡಸ್ಟ್ರಿಯಲ್ ಸ್ಟಾರ್ ಜೋಡಿಗಳು ಇಂದೇ ಪ್ರಖ್ಯಾತರಾಗಿದ್ದಾರೆ. ಯಾವುದೇ ಕಾರ್ಯಕ್ರಮಕ್ಕೆ ಹೋದರು ಕೂಡ ಶಿವರಾಜ್ ಕುಮಾರ್ ತಮ್ಮ ಪತ್ನಿಯನ್ನು ಜಾಗರೂಕತೆಯಿಂದ ಕರೆದುಕೊಂಡು ಹೋಗುತ್ತಾರೆ. ಶಿವರಾಜ್ ಕುಮಾರ್ ಅವರ ಪತ್ನಿ ಗೀತಾ ಕೂಡ ಸಿನಿಮಾಗಳ ಪ್ರೊಡ್ಯೂಸರ್ ಆಗಿ ಕೆಲಸ ಮಾಡುತ್ತಿದ್ದಾರೆ.
ಮೊನ್ನೆ ಅಷ್ಟೇ ಬಿಡುಗಡೆಯಾದ ಶಿವರಾಜಕುಮಾರ್ ರವರ 125 ಸಿನಿಮಾ ವೇದ ಸಿನಿಮಾವನ್ನು ಶಿವರಾಜ್ ಕುಮಾರ್ ರವರ ಪತ್ನಿ ಗೀತಾ ರವರ ಗೀತಾ ಪ್ರೊಡಕ್ಷನ್ ಹೌಸ್ ಅಡಿಯಲ್ಲಿ ನಿರ್ಮಾಣ ಮಾಡಲಾಗಿತ್ತು ಈ ಚಿತ್ರಕ್ಕೆ ತುಂಬಾ ಒಳ್ಳೆಯ ರೆಸ್ಪಾನ್ಸ್ ಕೂಡ ಸಿಕ್ಕಿದೆ
ಗೀತಾ ಹಾಗೂ ಶಿವರಾಜ್ ಕುಮಾರ್ ರವರ ಮದುವೆಯಾಗಿ ಈಗಾಗಲೇ 35 ವರ್ಷಗಳು ಕಳೆದಿವೆ ಆದರೂ ಕೂಡ ಈ ದಂಪತಿಗಳ ನಡುವಿನ ಪ್ರೀತಿ ಹಾಗೂ ಕಾಳಜಿ ಎಂದಿಗೂ ಕೂಡ ಕಡಿಮೆಯಾಗಿಲ್ಲ ಶಿವರಾಜಕುಮಾರ್ ರವರ ಪತ್ನಿ ಗೀತಾ ಕೃಷಿ ಸಚಿವರಾದ ಎಸ್ ಬಂಗಾರಪ್ಪನವರ ಮಗಳು ಶಿವರಾಜ್ ಕುಮಾರ್ ಹಾಗೂ ಗೀತಾ ರವರ ಪ್ರೀತಿಗೆ ಸಾಕ್ಷಿಯಾಗಿ ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
ಮೊದಲನೆಯ ಮಗಳ ಹೆಸರು ನಿವೇದಿತಾ ರಾಜ್ ಕುಮಾರ್ ಹಾಗೂ ಎರಡನೇ ಮಗಳ ಹೆಸರು ನಿರೂಪಮಾ ರಾಜ್ ಕುಮಾರ್ ಶಿವಣ್ಣ ಹಾಗೂ ಗೀತಾ ದಂಪತಿಗಳು ಈಗಾಗಲೇ ತಮ್ಮ ಇಬ್ಬರೂ ಹೆಣ್ಣು ಮಕ್ಕಳ ಮದುವೆಯನ್ನು ಮಾಡಿ ಮುಗಿಸಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ತಮ್ಮ ಪತ್ನಿಯ ಜೊತೆಗೆ ಗ್ರಾಮೀಣ ಮೂಲದ ಹೆಣ್ಣು ಮಕ್ಕಳಿಗೆ ಉಚಿತ ಹೊಲಿಗೆ ಯಂತ್ರವನ್ನು ನೀಡಿದ್ದಾರೆ ಎಂದು ವರದಿಗಳ ಮೂಲಕ ತಿಳಿದು ಬಂದಿದೆ.
ಅಷ್ಟೇ ಅಲ್ಲದೆ ಈ ದಂಪತಿಗಳನ್ನು ಉತ್ತಮ ಬಾಂಧವ್ಯವೆಂದು ಶಿವರಾಜ್ ಕುಮಾರ್ ರವರ ಶೂಟಿಂಗ್ ಸ್ಥಳಗಳಿಗೆ ತನ್ನ ಪತಿಯೊಂದಿಗೆ ಗೀತಾ ರವರು ಹಾಜರಾಗುತ್ತಾರೆ. ಗೀತಾ ರವರು ಮನೆಯನ್ನು ನಿಭಾಯಿಸುವುದು ಮಾತ್ರವಲ್ಲದೆ ತನ್ನ ಗಂಡನ ಚಲನಚಿತ್ರಗಳ ವೃತ್ತಿ ಜೀವನಕ್ಕೂ ಕೂಡ ಬೆಂಬಲವನ್ನು ನೀಡುತ್ತಿದ್ದಾರೆ. ಶಿವರಾಜ್ ಕುಮಾರ್ ರವರಿಗೆ ಅನಾರೋಗ್ಯದ ಕಾರಣವಿದ್ದಾಗ ಪತ್ನಿ ಗೀತಾ ತಮ್ಮ ಕೂದಲನ್ನು ದಾನ ಮಾಡಿದ್ದರು ಇದರ ಬಗ್ಗೆ ಸ್ವತಹ ಶಿವರಾಜ್ ಕುಮಾರ್ ಒಂದು ಕಾರ್ಯಕ್ರಮದಲ್ಲಿ ಹೇಳಿಕೊಂಡು ನನ್ನ ಹೆಂಡತಿಯ ಬೆಲೆ ನನಗೆ ಅಂದು ಗೊತ್ತಾಯಿತು ಎಂದು ಹೇಳಿದ್ದಾರೆ.
ಇದರಿಂದಲೇ ಗೀತಾ ಹಾಗೂ ಶಿವರಾಜ್ ಕುಮಾರ್ ನಡುವೆ ಎಷ್ಟು ಪ್ರೀತಿ ಇದೆ ಎಂಬುದು ತಿಳಿದು ಬರುತ್ತದೆ. ಇತ್ತೀಚಿಗಷ್ಟೇ ಒಂದು ಅಪಘಾತದಲ್ಲಿ ಗೀತಾ ರವರ ಕೈಗೆ ಪೆಟ್ಟಾಗಿ ಬ್ಯಾಂಡೇಜ್ ಕಟ್ಟಿಕೊಂಡಿರುವುದರಿಂದ ಶಿವರಾಜ್ ಕುಮಾರ್ ಗೀತಾ ರವರಿಗೆ ತಲೆ ಬಾಚಿ ಹೇರ್ ಸ್ಟೈಲ್ ಮಾಡಿದ್ದಾರೆ. ಇದನ್ನು ಯಾರೋ ಒಬ್ಬರು ಸರಿ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಶಿವರಾಜ್ ಕುಮಾರ್ ಹಾಗೂ ಗೀತಾ ದಂಪತಿಗಳ ವಿಡಿಯೋಗೆ ಬಾರಿ ಮೆಚ್ಚುಗೆ ಸೂಚಿಸುತ್ತಿದ್ದಾರೆ.